ಶಿವಮೊಗ್ಗ, ಆ.22:
ಇಂದು ವಿಘ್ನ ವಿನಾಶಕ ವಿನಾಯಕನನ್ನು ಪೂಜಿಸುವ ಪುಣ್ಯದಿನ. ಇಂತಹ ಗಣೇಶ ಆರಾಧನೆಯು ಈ ಬಾರೀ ಕೊರೊನಾ ಹಿನ್ನೆಲೆಯಲ್ಲಿ ಸರಳ ಹಾಗೂ ನಿಗದಿಯೆಂಬತೆ ಎಲ್ಲೆಡೆ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲೆಯ ಎಲ್ಲೆಡೆ ಕೊರೋನಾ ಕಿರಿಕ್ ನಡುವೆಯೇ ಒಂದೇ ದಿನದ ಆಚರಣೆಯಾಗಿ ಸಡಗರ-ಸಂಭ್ರಮ ಭಕ್ತಿ ಶ್ರದ್ಧೆಯ ಪ್ರತೀಕವಾಗಿ ಇಂದು ಗಣೇಶ ಆರಾಧನೆಯನ್ನು ಮಾಡಲಾಗುತ್ತಿದೆ.
ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿ, ಗಾಂಧೀ ಬಜಾರ್ ನ ಬಸವೇಶ್ವರ ದೇವಾಲಯದ ಗಣಪತಿ ಹಾಗೂ ರಾಮಣ್ಣ ಶ್ರೇಷ್ಠಿ ಪಾರ್ಕ್ ನ ಶ್ರೀ ವಿದ್ಯಾಗಣಪತಿ ಸೇರಿದಂತೆ ನಗರದಲ್ಲೇ ಈ ಬಾರೀ ಸುಮಾರು ಐನೂರಕ್ಕೂ ಹೆಚ್ಚು ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಎಲ್ಲೆಡೆ ಶಾಂತಿ ಹಾಗೂ ಭಕ್ತಿ ಪ್ರಧಾನ ದ್ವನಿಯೇ ಕೇಳುತ್ತಿದೆ.
ನಗರದ ಕೋಟೆಯ ಭೀಮೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ 11-10 ರ ಸಮಯದಲ್ಲಿ ಅಲ್ಲೇ ಇದ್ದ ಗಣಪತಿಯನ್ನ ಭೀಮೇಶ್ವರ ದೇವರಿಗೆ ಪ್ರದಕ್ಷಿಣೆ ಮಾಡಿಸಿ ನಂತರ ವೇದಿಕೆಯ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು.
ಭಾರತ್ ಮಾತಾ ಕೀ ಜೈ, ಭೋಲೋ ಸನಾತನ ಧರ್ಮ ಕೀ ಜೈ, ವಂದೇ ಮಾತರಂ ಘೋಷಣೆಯೊಂದಿಗೆ ಗಣಪತಿಯನ್ನ ಸರಿ ಸುಮಾರು 11-40 ಕ್ಕೆ ಪ್ರತಿಷ್ಠಾಪಿಸಲಾಯಿತು. ಇಂದು ಸಂಜೆ 8 ಗಂಟೆಗೆ ಗಣಪತಿಯ ಮಹಾಮಂಗಳಾರತಿ ನಡೆಯಲಿದ್ದು, ಸರಿಸುಮಾರು 9-30 ಯಿಂದ 10 ಗಂಟೆಯೊಳಗೆ ಪಕ್ಕದ ತುಂಬಿದ ತುಂಗೆಯಲ್ಲಿ ವಿಸರ್ಜಿಸಲಾಗುವುದು.
ಗಾಂಧಿ ಬಜಾರ್ ನ ಬಸವೇಶ್ವರ ದೇವಸ್ಥಾನದಲ್ಲಿಯೂ ಸಹ ಈ ಬಾರಿಯ 91 ನೇ ಗಣಪತಿಯ ಮೂರ್ತಿಯನ್ನ ಪ್ರತಿಷ್ಠಾಪಿಸಲಾಯಿತು. ನಂತರ ಮಾತನಾಡಿದ ಬಸವೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಎನ್. ಜೆ. ರಾಜಶೇಖರ್ (ಸುಭಾಷ್) ಈ ದೇವಸ್ಥಾನಕ್ಕೆ ಗಣಪತಿಯ ಬಾಂದವ್ಯದ 400 ವರ್ಷದ ಇತಿಹಾಸವಿದೆ.
ಬಹಳ ಹಳೆಯ ದೇವಸ್ಥಾನದಲ್ಲಿ ಪ್ರತಿ ವರ್ಷ ನಾವು 21 ದಿನ ಗಣಪತಿಯನ್ನ ಪ್ರತಿಷ್ಠಾಪಿಸುತ್ತಿದ್ದೇವು. ಆದರೆ ಕೊರೋನ ಹಿನ್ನಲೆಯಲ್ಲಿ ಈ ಬಾರಿ ಗಣಪತಿಯನ್ನ ಎರಡು ದಿನ ಗೌರಿಯನ್ನ ಮೂರುದಿನ ಪ್ರತಿಷ್ಠಾಪಿಸಿ ವಿಸರ್ಜಿಸಲಾಗುತ್ತಿದೆ. ನಾಳೆ ಬೆಳಿಗ್ಗೆ 11 ಗಂಟೆಗೆ ಗೌರಿ ಮತ್ತು ಗಣಪತಿಯನ್ನ ವಿಸರ್ಜಿಸಲಾಗುವುದು ಎಂದರು.
ಅದರಂತೆ ರಾಮಣ್ಣ ಶ್ರೇಷ್ಠಿ ಪಾರ್ಕ್ ನ ಶ್ರೀ ವಿದ್ಯಾಗಣಪತಿಯನ್ನ ಇಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಪ್ರತಿಷ್ಠಾಪಿಸಲಾಯಿತು. ನಾಳೆ ಬೆಳಿಗ್ಗೆ 10 ಗಂಟೆಯ ಸಮಯಕ್ಕೆ ವಿಸರ್ಜಿಸಲಾಗುವುದು.
ಅಂತೆಯೇ ಶಿವಮೊಗ್ಗದ ವಿನೋಬನಗರ ಶಿವಾಲಯದಲ್ಲಿ ವೀರಶೈವ ಸಮಾಜ ಎಂದಿನಂತೆ ಈ ವರ್ಷವೂ ಗಣೇಶನನ್ನು ಪ್ರತಿಷ್ಠಾಪಿಸಿದ್ದಾರೆ.
ಪ್ರತಿ ವರ್ಷಕ್ಕಿಂತ ಅಲ್ಪ ಪ್ರಮಾಣದಲ್ಲಿ ಕಡಿಮೆ ಗಣೇಶ ಪ್ರತಿಷ್ಠಾಪನೆಯಾಗಿದೆ ಎಂಬುದನ್ನು ಒಪ್ಪಿಕೊಳ್ಳಬಹುದು. ಆದರೆ ಆದರೆ ಪ್ರಮಾಣ ಅಷ್ಟೊಂದು ಕಡಿಮೆಯಾಗಿಲ್ಲ. ಪ್ರತಿ ವಾರ್ಡ್ ಒಂದು ಗಣೇಶ ಎನ್ನುವ ಬದಲು ವಾರ್ಡ್ನಲ್ಲಿ ಕನಿಷ್ಠ ಹತ್ತರಿಂದ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಬಹುತೇಕ ಗಣೇಶ ಮೂರ್ತಿಗಳನ್ನು ಇಂದು ರಾತ್ರಿ ವಿಸರ್ಜಿಸಲಿದ್ದಾರೆ ವಿಶೇಷವೆಂದರೆ ಮನೆ ಬಾಗಿಲಿಗೆ ನೀರಿನ ಟ್ಯಾಂಕರ್ ಗಳು ಆಗಮಿಸಲಿದ್ದು ಅದರಲ್ಲಿ ಗಣಪನನ್ನು ವಿಸರ್ಜಿಸಲು ಈ ಬಾರಿ ಅವಕಾಶ ಕಲ್ಪಿಸಿಕೊಡಲಾಗಿದೆ.