ಶಿವಮೊಗ್ಗ, ಮೇ.೦೭:
ಚಾರಣ ಮಾಡುವುದರಿಂದದೇಶದ ಪ್ರಾಕೃತಿಕ ಸೊಬಗಿನ ಪರಿಚಯ ಆಗುವುದರ ಜತೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಜೀವನಶೈಲಿ ಹಾಗೂ ಸಾಂಸ್ಕೃತಿಕ ಶ್ರೇಷ್ಠತೆಯ ಪರಿಚಯವಾಗುತ್ತದೆ ಎ ಂದು ತರುಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ವಾಸವಿ ಟ್ರಸ್ಟ್, ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಶಿವಮೊಗ್ಗ ಘಟಕ, ತರುಣೋದಯಘಟಕದ ವತಿ ಯಿಂದ ಶನಿವಾರ ಆಯೋಜಿಸಿದ್ದ ಚಂದ್ರಕಣಿ ಪಾಸ್‌ಗೆ ತೆರಳುತ್ತಿರುವ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಪ್ರಕೃತಿಅಧ್ಯಯನಕ್ಕೆ ಹಿಮಾಲಯಉತ್ತಮ ಪ್ರದೇಶವಾಗಿದ್ದು, ಚಿಕ್ಕ ವಯಸ್ಸಿನಲ್ಲೆ ಪ್ರಕೃತಿ ಅಧ್ಯಯನಕ್ಕೆ ಹೊರಟ ಮಕ್ಕಳಿಗೆ ಅತ್ಯುತ್ತಮ ಅನುಭವದೊರಕಲಿದೆ. ವಾಸವಿಟ್ರಸ್ಟ್ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಕ್ಕಳನ್ನು ಕಳಿಸುತ್ತಿರುವ ಪಾಲಕರಿಗೆ ಭಯ ಸಹಜ. ಪ್ರವಾಸದಮುಂದಾಳತ್ವ ವಹಿಸಿಕೊಂಡಿರುವವರ ಮಾತನ್ನುಮಕ್ಕಳು ಚಾಚು ತಪ್ಪದೆ ಕೇಳಬೇಕು ಎಂದರು.
ಐವತ್ತೈದು ಮಕ್ಕಳನ್ನು ಕರೆದುಕೊಂಡು ಹೊರಟ ಅ.ನಾ.ವಿಜಯೇಂದ್ರ, ಬಾಯರಿ, ರೇಖಾ ಮತ್ತು ಆಶಾ ಅವರನ್ನು ಹಾಗೂ ಹದಿನೈದು ದಿನದಿಂದ ಮಕ್ಕಳಿಗೆ ವ್ಯಾಯಾಮ ಹೇಳಿಕೊಟ್ಟ ದೊರೈ, ಸುರೇಶ್, ಹರೀಶ್ ಪಂಡಿತ್, ಮನೋಹರ್‌ಅವರನ್ನುಗೌರವಿಸಲಾಯಿತು.
ವಾಗೇಶ್, ಶಿವಮೊಗ್ಗ ಘಟಕದ ಅಧ್ಯಕ್ಷ ಸುನಿಲ್, ನಿರ್ದೇಶಕ ಬದರಿನಾಥ್, ದಯಾನಂದ ಅಕ್ಕಸಾಲಿ ಮತ್ತಿತರರಿದ್ದರು.