ಶಿವಮೊಗ್ಗ, ಮೇ.೦೮:
ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಪಕ್ಷ ಸೂಕ್ತ ಸಮಯದಲ್ಲಿ ಕ್ರಮ ಜರುಗಿಸಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಸಿಎಂ ಸ್ಥಾನಕ್ಕೆ ೨೫೦೦ ಕೋಟಿ ರೂ. ನೀಡುವಂತೆ ಕೇಂದ್ರದ ನಾಯಕರೇ ಹೇಳಿದ್ದರು ಎಂದು ಬಸವನಗೌಡ ಪಾಟೀಲ್ ನೀಡಿದ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಯತ್ನಾಳ್ ಅವರಿಗೆ ಈ ರೀತಿ ಒತ್ತಡ ಹಾಕಿದ ವರು ಯಾರು ಎಂಬುದನ್ನು ಅವರೇ ತಿಳಿಸ ಬೇಕು. ಅವರ ಈ ರೀತಿಯ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದು, ಬಿಜೆಪಿ ನಾಯಕರು ಸೂಕ್ತ ಸಮಯದಲ್ಲಿ ಯತ್ನಾಳ್ ವಿರುದ್ಧ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಇತ್ತೀಚೆಗೆ ಬಿಜೆಪಿ ಹಲವು ಸಚಿವರ ಮೇಲೆ ಕಮಿಷನ್ ಆರೋಪಗಳು ಕೇಳಿ ಬರುತ್ತಿವೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಚುನಾವಣೆ ಸಮೀಪಿಸುತ್ತಿರುವುದರಿಂದ ವಿಪಕ್ಷಗಳು ಕಮಿಷನ್ ಹಗರಣ ಸೃಷ್ಠಿ ಮಾಡು ತ್ತಿವೆ. ಕಮಿಷನ್ ಕುರಿತು ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್ಗೆ ಇಲ್ಲ. ಬಿಜೆಪಿಯವರು ಹೋಟೆಲ್ ತಿಂಡಿ ರೇಟ್ ರೀತಿ ಕಮಿಷನ್ ಫಿಕ್ಸ್ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಕಾಂಗ್ರೆಸ್ ಈ ರೀತಿ ಇಲ್ಲ ಸಲ್ಲದ ಹೇಳಿಕೆ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆ ಮತ್ತು ಆತುರದಲ್ಲಿದ್ದಾರೆ. ಆದ್ದರಿಂದ ಈ ರೀತಿಯ ಹೇಳಿಕೆಗಳು ಸಹಜ ಎಂದರು.
ಪಿಎಸ್ಐ ಹಗರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣಕ್ರಮ ಜರುಗಿಸಲಿದೆ ಎಂದ ಅವರು ಸಂಪುಟ ಸೇರುವ ಬಗ್ಗೆ ಪಕ್ಷ ತೀರ್ಮಾ ನಿಸಲಿದೆ. ನನಗೆ ಈಗಾಗಲೇ ಸೂಕ್ತ ಸ್ಥಾನ ಮಾನ ನೀಡಿದೆ. ನಾನಾಗಲೀ ನಮ್ಮ ಕುಟುಂಬವಾಗಲಿ ಸಂಪುಟ ಸೇರ್ಪಡೆಗೆ ಒತ್ತಡ ಹೇರಿಲ್ಲ ಎಂದರು.
ಶಿವಮೊಗ್ಗದ ಇತ್ತೀಚೆಗೆ ನಡೆದ ಕೆಲ ಘಟನೆಗಳನ್ನು ಖಂಡಿಸಿದ ಅವರು ಕೆಲವು ದುಷ್ಟ ಸಂಘಟನೆಗಳು ನಗರದ ಶಾಂತಿಯನ್ನು ಹದಗೆಡಿಸಲು ಪ್ರಯತ್ನಿಸುತ್ತಿವೆ.
ಯಡಿಯೂರಪ್ಪ ಸಿಎಂ ಆಗಿದ್ದಾಗ ಇಂತಹ ಘಟನೆಗಳು ಸಂಭವಿಸಿರಲಿಲ್ಲ. ಈಗಿನ ಗೃಹ ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಲಿದ್ದಾರೆ ಎಂದರು.
ಹಳೆಮೈಸೂರು ಕ್ಷೇತ್ರಗಳಲ್ಲಿ ಬಿಜೆಪಿ ಬಲವರ್ಧನೆಗೊಂಡಿದೆ. ಕೆಆರ್ ಪೇಟೆ ಚುನಾವಣೆ ಮತ್ತು ಶಿರಾದಲ್ಲಿ ಗೆಲವು ಸಾಧಿಸಿ ತೋರಿಸಿದ್ದೇವೆ. ಈಗಲೂ ಹಳೆ ಮೈಸೂರು ಭಾಗದಲ್ಲಿ ಶ್ರಮಪಟ್ಟರೆ ಬಿಜೆಪಿ ಗೆಲುವು ಅಸಾಧ್ಯವಲ್ಲ ಎಂದರು.