Tunga Taranga, April,10,2022| Crime News
Facebook, Whatsp, Twitter, Instagramನಂತಹ ಸಾಮಾಜಿಕ ಜಾಲತಾಣಗಳನ್ನು ಎಷ್ಟು ಉಪಯುಕ್ತವಾಗಿ ಪಡೆಯಬಹುದೋ, ಅಷ್ಟೇ ಅನಾಹುತಕಾರಿಯಾಗಿ ದುರುಪಯೋಗ ಪಡಿಸಿಕೊಳ್ಳುವ ಕಿರಾತಕ ಮನಸುಗಳಿರುತ್ತವೆ ಎಂಬ ಎಚ್ಚರಿಕೆಯೂ ಇರಬೇಕು.
ನಿನ್ನ ಅಸಭ್ಯ ಹಾಗೂ ಅಶ್ಲೀಲ ಚಿತ್ರವನ್ನು ಡಿಸೈನ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ, ಅಲ್ಲಿಂದಲೇ ಆಕೆಯ ಬೆತ್ತಲೆ ಚಿತ್ರ ಪಡೆದು ಬ್ಲಾಕ್ ಮೇಲ್ ಗಿಳಿದಿದ್ದ ಕಾಮಕನ ವಿಕೃತತೆಗೆ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ದುರಂತ ಕಥನವಿದು.
ಶಿರಾಳಕೊಪ್ಪ ಬಳಿಯ ತೊಗರ್ಸಿಯ ಪದವೀಧರೆ ಯುವತಿಯ ಬೆತ್ತಲೆ ವಿಡಿಯೋವನ್ನ ಕಿರಾತಕ ಮನಸಿನ ಯುವಕನೋರ್ವ ಪಡೆದು ಬ್ಲಾಕ್ ಮೇಲ್ ಮಾಡುತ್ತಾ ಯುವತಿಗೆ ಬೆದರಿಸಿದ್ದ.
ಕಾಮುಕನ ದಾಹಕ್ಕೆ ಯುವತಿ ಬಲಿಯಾಗಿದ್ದಾಳೆ.
ಶಿರಾಳಕೊಪ್ಪದ ತೊಗರ್ಸಿ ಗ್ರಾಮದ 23 ವರ್ಷದ ಯವತಿ ಬಿಎ ಪದವಿಧರೆಯೂ ಆಗಿದ್ದಳು. ಆಕೆ Handraid ಮೊಬೈಲ್ ನಲ್ಲಿ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಖಾತೆಯಲ್ಲಿ ಯುವತಿಗೆ ಪದೇ ಪದೇ ಅಪರಿಚಿತ ವ್ಯಕ್ತಿ ಕರೆ ಮಾಡಿ ಬೆತ್ತೆಲೆ ವಿಡಿಯೋ ಹಾಕದಿದ್ದರೆ ನಿನ್ನ ಫೋಟೊ ಎಡಿಟ್ ಮಾಡಿ ಬೆತ್ತಲೆಯಾಗಿ ರಚಿಸಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ.
ಈ ಬೆದರಿಕೆಗೆ ಬೆಚ್ಚಿಬಿದ್ದ ಯುವತಿ ಹೆದರಿ ಇನ್ ಸ್ಟಾಗ್ರಾಮ್ ನಲ್ಲಿಯೇ ಬೆತ್ತಲೆ ಚಿತ್ರವನ್ನ ಆತನಿಗೆ ತೋರಿಸಿದ್ದಾಳೆ. ಯುವತಿಯ ಬೆತ್ತಲೆ ವಿಡಿಯೋ ಪಡೆದ ಅಪರಿಚಿತ ಕಾಮುಕ ಈ ವಿಡಿಯೋ ರೆಕಾರ್ಡ್ ಆಗಿದೆ. ಈ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿ ನಿನ್ನಮರ್ಯಾದೆ ಕಳೆಯುವುದಾಗಿ ಪದೇ ಪದೇ ಕರೆ ಮಾಡಿ ಬೆದರಿಸಿದ್ದಾನೆ.
ಮುಗ್ಧ ಬಾಲೆ ಕಾಮುಕನ ಕೈಯಲ್ಲಿ ಒದ್ದಾಡಿದ್ದಾಳೆ. ಮನನೊಂದು ಮೊನ್ನೆ ತಂದೆಯ ಬಳಿ ಹೇಳಿಕೊಂಡು ಭಯವಾಗುತ್ತಿದೆ ಅಪ್ಪ ಎಂದಿದ್ದಾಳೆ. ಅಪ್ಪ ಶಿವರಾಜ್ ಹೆದರಬೇಡ ಮಗಳೆ ನಾನು ನಿನ್ನ ಜೊತೆ ಇದ್ದೇನೆ. ಬಾ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸೋಣವೆಂದು ಧೈರ್ಯ ತುಂಬಿದ್ದಾನೆ.
ಮನೆ ಹೊರಗಡೆ ನಿಂತು ಭರವಸೆ ನೀಡಿದ್ದ ತಂದೆಗೆ ಕ್ಷಣಾರ್ಧದಲ್ಲಿಯೇ ಮಗಳಿನ ಸಾವಿನ ಸುದ್ದಿಕೇಳುತ್ತಾನೆ. ಠಾಣೆಗೆ ಹೋಗೋಣ ಡ್ರೆಸ್ ಮಾಡಿಕೊಂಡು ಬರುವೆ ಎಂದು ರೂಂ ಒಳಗೆ ಹೋದ ಮಗಳು ಸುಮ ನೇಣಿಗೆ ಕೊರಳೊಡ್ಡಿದ್ದಾಳೆ. ತಕ್ಷಣವೇ ಅಕ್ಕಪಕ್ಕದ ಮನೆಯವರ ಸಹಾಯದಿಂದ ಶಿರಾಳಕೊಪ್ಪ ಆಸ್ಪತ್ರೆಗೆ ಕರೆದುಕೊಂಡು ಹೋದರೂ ವೈದ್ಯರು ಆಕೆಯ ಸಾವನ್ನ ಖಚಿತ ಪಡಿಸಿದ್ದಾರೆ.
ಇನ್ ಸ್ಟಾಗ್ರಾಮ್ ನಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಯುವತಿಯ ತಂದೆ ಶಿವರಾಜ್ ದೂರು ದಾಖಲಿಸಿದ್ದಾನೆ. ಈ ಕಿರಾತಕನ ವಿರುದ್ದ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾನೆ. ವಿಕೃತಿ ಕಾಮುಕನ ದಾಹಕ್ಕೆ ಯುವತಿ ಬಲಿಯಾಗಿದ್ದಾಳೆ. ತನಿಖೆ ಮುಂದುವರೆದಿದೆ.