ಚಿತ್ರ: ಗಜೇಂದ್ರ ಸ್ವಾಮಿ
ಶಿವಮೊಗ್ಗ ಏ.08:
ಶಿವಮೊಗ್ಗ ನಗರದಲ್ಲಿ ಈಗೊಂದು ವಿಶೇಷತೆಯಿದೆ. ಏನದು ಗೊತ್ತಾ?
ಕಳೆದ ಎರಡ್ಮೂರು ದಿನದ ಅಪರೂಪದ ಅತಿಥಿಗಳಿಬ್ಬರು ರಾಜಸ್ತಾನದ ಸೋಲಾಪುರದಿಂದ ಬಂದು ಇಲ್ಲಿ ಮಕ್ಕಳಿಗೆ ಕುಶಿ ನೀಡಿವೆ.
ಯಾರಿದು ಅಂದುಕೊಂಡಿರಾ? ಬೇಸಿಗೆ ರಜೆ ಆರಂಭವಾಗುವ ಈ ಹೊತ್ತಿನಲ್ಲಿ ರಾಜಸ್ಥಾನದಿಂದ ಬಂದ ಈ ಮರಳುಗಾಡಿನ ಹಡಗು ಎಂದೇ ಕರೆಸಿಕೊಳ್ಳುವ ಒಂಟೆಗಳು ಮಕ್ಕಳಿಗೆ ಸವಾರಿ ಮಜಾ ನೀಡುತ್ತಿವೆ.
ಸೋಲಾಪುರದ ಇಬ್ಬರು ಯುವಕರು ಕರೆತಂದಿರುವ ಈ ಒಂಟೆಗಳನ್ನು ಮಕ್ಕಳಷ್ಟೇ ಅಲ್ಲ ಯುವಕರು, ವೃದ್ದರು, ಮಹಿಳೆಯರು ಅಚ್ಚರಿ ಕಂಗಳಿಂದ ನೋಡುತ್ತಿದ್ದಾರೆ.
ಬಹಳ ದಿನಗಳಿಂದ ಈ ಒಂಟೆಗಳ ದರುಶನವಿಲ್ಲದಿದ್ದ ಜನತೆ ಈಗ ಮಕ್ಕಳನ್ಮು ಅವುಗಳ ಮೇಲೆ ಕೂರಿಸಿ ಮಜಾ ಅನುಭವಿಸುತ್ತಿದ್ದಾರೆ.