Tungtaranga | April, 07, 2022 | Shivamogga Crime News

ಶಿವಮೊಗ್ಗ,ಏ.೦೭:
ಮಾರಾಟ ಮಾತ್ರ ಮಾಡಬಹುದಾದ ವೈನ್ ಸ್ಟೋರ್‌ನಲ್ಲಿ ಮದ್ಯ ಸೇವಿಸಲು ಬಿಡುವ ಅದೆಷ್ಟ್ಟೋ ನಿದರ್ಶನಗಳ ನಡುವೆ ಶಿವಮೊಗ್ಗ ಡಿವೈಎಸ್‌ಪಿ ಪ್ರಶಾಂತ್ ಮುನ್ನೋಳಿ ಅವರಿಗೆ ವೈನ್‌ಸ್ಟೋರ್ ಒಂದರಲ್ಲಿ ಪದೇ ಪದೇ ಗಲಾಟೆ ನಡಯುತ್ತಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಿ ವೈನ್‌ಸ್ಟೋರ್ ಮಾಲಿಕ ಸೇರಿದಂತೆ ನಾಲ್ವರ ವಿರುದ್ದ ದೂರು ದಾಖಲಿಸಿಕೊಂಡಿರುವ ಘಟನೆ ವರದಿಯಾಗಿದೆ.


ವೈನ್ ಸ್ಟೋರ್‌ಗಳಲ್ಲಿ ಮದ್ಯ ಸೇವಿಸಲು ನೀಡಿದರೆ ಅದು ಕಾನೂನಾತ್ಮಕವಾಗಿ ತಪ್ಪು. ಈ ಹಿನ್ನೆಲೆಯಲ್ಲಿ ಹಾಗೂ ಅಲ್ಲಿನ ಸಾರ್ವಜನಿಕರ ದೂರಿನಂತೆ ನಿನ್ನೆ ರಾತ್ರಿ ಸವಳಂಗ ರಸ್ತೆಯಲ್ಲಿರುವ ಮದ್ಯ ಮಾರಾಟ ಅಂಗಡಿಯ ಮೇಲೆ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ನೇತೃತ್ವದಲ್ಲಿ ದಾಳಿ ನಡೆದಿದ್ದು ಮದ್ಯದಂಗಡಿಯ ಮಾಲೀಕ ನಾಗೇಶ ಸೇರಿದಂತೆ ನಾಲ್ವರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ಸವಳಂಗ ರಸ್ತೆಯಲ್ಲಿರುವ ಮೆ||ಚೆನ್ನಾಂಬಿಕ ವೈನ್‌ನಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಜನರಿಗೆ ಕುಡಿಯಲು ಅವಕಾಶ ನೀಡಿದ ಹಿನ್ನಲೆಯಲ್ಲಿ ಡಿವೈಎಸ್ಪಿ ನೇತೃತ್ವದಲಿನೀ ದಾಳಿ ನಡೆದಿದೆ. ಸಾರ್ವಜನಿಕ ಸ್ಥಳದಲ್ಲಿ ಮದ್ಯ ಕುಡಿಯಲು ನೀರು ಮತ್ತು ಪ್ಲಾಸ್ಟಿಕ್ ಲೋಟ ನೀಡಿ ಸಾರ್ವಜನಿಕ ಸ್ಥಳದಲ್ಲಿ ಕುಡಿಯಲು ಅವಕಾಶ ಮಾಡಿಕೊಡಲಾಗಿತ್ತು.


ದಾಳಿ ನಡೆದಾಗ ಮದ್ಯ ಸೇವಿಸುತ್ತಿದ್ದವರು ಪರಾರಿಯಾಗಿದ್ದಾರೆ. ಕುಡಿಯಲು ಸಹಕಾರ ನೀಡಿದ ವೈನ್ ಶಾಪ್ ಅಂಗಡಿಯ ಸಿಬ್ಬಂದಿಗಳಾದ ಪ್ರವೀಣ, ಗಗನ್ ಅಭಿಷೇಕ್ ಎಂಬುವರನ್ನ ಸ್ಥಳದಲ್ಲೇ ಬಂಧಿಸಲಾಗಿದೆ. ಮದ್ಯವನ್ನ ಸಾರ್ವಜನಿಕ ಸ್ಥಳದಲ್ಲಿ ಗ್ರಾಹಕರಿಗೆ ಕುಳಿತು ಕುಡಿಯಲು ಅವಕಾಶ ಮಾಡಿಕೊಡಲಾಗಿರುವ ಹಿನ್ನೆಲೆಯಲ್ಲಿ ಎಂದು ವೈನ್ ಶಾಪ್‌ನ ಸಿಬ್ಬಂದಿ ಪ್ರವೀಣ್, ಗಗನ್, ಅಭಿಷೇಕ ನೀಡಿದ ಹೇಳಿಕೆ ಮೇಲೆ ಮಾಲೀಕ ನಾಗೇಶ್ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!