ರೈತರ ಸಮಸ್ಸೆಗೆ ಕ್ಷಣದಲ್ಲಿಯೇ ಸ್ಪಂದಿಸಿದ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ: ರೈತರ ಅಭಿನಂದನೆ
ಶಿವಮೊಗ್ಗ, ಏ.5:
ರೈತರು ತಮ್ಮ ಜಮೀನಿನ ನೀರು ಹಾಗೂ ಕೆರೆಯ ಅವ್ಯವಸ್ಥೆ ಬಗ್ಗೆ ಹೇಳಿದಾಗ. ರಾಜಕಾರಣಿ ಅನ್ನೊದಕ್ಕಿಂತ ರೈತನಾಯಕಿ ಎಂದೇ ಹೆಸರಾದ ಶಿವಮೊಗ್ಗ ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ದಿನದೂಡದೇ ರೈತರ ಸಮಸ್ಸೆ ಸ್ಪಂದಿಸಲು ತಕ್ಷಣ ಸ್ಥಳಕ್ಕೆ ಬೇಟಿ ಮಾಡಿ ಆ ಕ್ಷಣದಲ್ಲಿ ಸೂಕ್ತ ಕಾರ್ಯ ನಡೆಸಲು ಅಧಿಕಾರಿಗಳಿಗೆ ಸೂಚಿಸಿದರು.
ನಿನ್ನೆ ಬೆಳಿಗ್ಗೆ ಕಾಡಾ ಕಚೇರಿಗೆ ಭೇಟಿ ನೀಡಿದ್ದ ಹಾರೋಬೆನವಳ್ಳಿಗ್ರಾಮಸ್ಥರ ಮನವಿಯ ಮೇರೆಗೆ ಕೆರೆಯ ನೀರಿನಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ರೈತ ಮುಖಂಡರು ಅಹವಾಲು ಆಲಿಸಿ ಸ್ಥಳದಲ್ಲೇ ಇದ್ದ ನೀರಾವರಿ ಇಲಾಖೆಯ ಇಂಜಿನಿಯರಿಗೆ ಸಮಸ್ಯೆ ಬಗೆಹರಿಸಿಕೊಡಲು ಸೂಚಿಸಲಾಯಿತು.
ವಿವರ:
ಇಂದು ಕಚೇರಿಗೆ ಶಿವಮೊಗ್ಗ ತಾಲೂಕಿನ ಹಾರೋಬೆನವಳ್ಳಿ ಗ್ರಾಮಸ್ಥರು ಕಚೇರಿಗೆ ಭೇಟಿ ನೀಡಿದ್ದರು. ಇದೇ ಸಂದರ್ಭದಲ್ಲಿ ಕೆರೆ ಕಾಲುವೆಯ ನೀರು ಹೋಗುವ ಜಾಗದಲ್ಲಿ ತುಂಬಾ ಹೂಳು ತುಂಬಿರುವ ಕಾರಣ ರೈತರ ಜಮೀನಿನ ಮೇಲೆ ಕೆರೆ ನೀರು ಹಾದು ಹೋಗುತ್ತಿದೆ.ಅದರಿಂದ ಬೆಳೆ ಹಾಳಾಗುವ ಸಂಭವವಿದ್ದು ಮತ್ತು ಜನರು ಓಡಾಟಕ್ಕೆ ತೊಂದರೆಯಾಗುತ್ತಿದ್ದು. ಮಳೆ ಬಂದಾಗ ಊರಿನ ನೀರು ಅದೇ ಕಾಲುವೆಗೆ ಬಂದು ಸೇರುವುದರಿಂದ ಯಾವುದೇ ವಾಹನ ಚಲಿಸಲು ಸಾಧ್ಯವಾಗದ ಪರಿಸ್ಥಿತಿ ಇರುವುದರಿಂದ ಅ ಜಾಗಕ್ಕೆ ಹಳೆಯ ತೂಬಿನ ಬದಲಿಗೆ ಒಂದು ಮೇಲ್ಸೇತುವೆ ಮಾಡಿಕೊಡುವಂತೆ ವಿನಂತಿಸಿದ್ದರು.
ಇದೇ ಸಂದರ್ಭದಲ್ಲಿ ಭದ್ರಾವತಿ ತಾಲೂಕು ಬೊಮ್ಮೇನಹಳ್ಳಿ ಮತ್ತು ದಾವಣಗೆರೆ ಜಿಲ್ಲೆ ಬಸವಪಟ್ಟಣಚನ್ನಗಿರಿ ತಾಲ್ಲೂಕು ಸಂಗೊಳ್ಳಿ ಕಾಲವಾಡ ಗ್ರಾಮದ ರೈತರು ಹೊಲ ಕಾಲುವೆ ಮಾಡಿಕೊಡುವಂತೆ ವಿನಂತಿಸಿದ್ದರು.
ರೈತರ ಸಮಸ್ಸೆಗೆ ಕ್ಷಣದಲ್ಲಿಯೇ ಸ್ಪಂದಿಸಿದ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರ ಕಾರ್ಯವನ್ನು ರೈತರ ಅಭಿನಂದಿಸಿದ್ದು, ಇವರು ದಿನದೂಡುವ ಉಳಿದ ಬಹುತೇಕ ರಾಜಕಾರಣಿಗಳಿಗೆ ಮಾದರಿ. ಪಕ್ಷಬೇಧ ಮರೆತು ಕಾರ್ಯ ಮಾಡುವ ಇವರು ರಾಜಕಾರಣಿ ಎಂಬುದಕ್ಕಿಂತ ರೈತ ನಾಯಕಿ ಎಂದು ಶ್ಲಾಘಿಸಿ ಪ್ರಶಂಸಿದರು.