ಶಿವಮೊಗ್ಗ | ಬೀದಿ ದೀಪ ಹಾಕಲು ಹೋದರೆ ತಿಥಿ ಊಟ ಗ್ಯಾರಂಟಿ ಎಂದೇ ಹೇಳಲಾಗಿತ್ತು
ಶಿವಮೊಗ್ಗ,. ಏ.2:
ಶಿವಮೊಗ್ಗ ನಗರದ ವಾರ್ಡ್ ನಂ.1ರ ಸೋಮಿನಕೊಪ್ಪ ಭೋವಿ ಕಾಲೋನಿಯಲ್ಲಿರುವ ಹೈಮಾಸ್ಕ್ ಹಾಗೂ ಬೀದಿ ದೀಪ ಹಾಕಲು ಹೋದರೆ ತಿಥಿ ಊಟ ಗ್ಯಾರಂಟಿ ಎಂದು ತುಂಗಾತರಂಗ ತನ್ನ ವೆಬ್ ಪೋರ್ಟ್ಲ್ ನಲ್ಲಿ ಪ್ರಕಟಿಸಿದ್ದ ಎಚ್ಚರಿಕಾ ವರದಿ ನೋಡಿ ಮೆಸ್ಕಾಂ ತುರ್ತು ಕ್ರಮ ಕೈಗೊಂಡಿದೆ.
ಇಲ್ಲಿನ ಕಂಬದಲ್ಲಿರುವ ಹಳೆ ಡಬ್ಬ ಹಾಗೂ ಕಿತ್ತು ಹೋದ ಮೀಟರ್, ವೈರ್‌ಗಳನ್ನು ನೋಡಿದಾಕ್ಷಣ ಬೀದಿ ದೀಪಗಳನ್ನು ಹಾಕಲು ಬಂದವನಿಗೆ ಭಯವಾಗುವಂತಿತ್ತು. ಈ ಎಲ್ಲಾ ಬಾಕ್ಸ್ ಗಳನ್ನು ಮೆಸ್ಕಾಂ ಇಂದು ಸರಿಮಾಡುದೆ. ಪಾಲಿಕೆಯ ಈ ಜವಾಬ್ಧಾರಿ ಹೊತ್ತ ಗುತ್ತಿಗೆದಾರ ಮೆಸ್ಕಾಂ ಆದೇಶ ಹಾಗೂ ಕಟ್ಟಪ್ಪಣೆಯಂತೆ ಕೆಲಸ ಮಾಡಿದ್ದಾರೆ.
ಶಿವಮೊಗ್ಗ | ಬೀದಿ ದೀಪ ಹಾಕಲು ಹೋದರೆ ತಿಥಿ ಊಟ ಗ್ಯಾರೆಂಟಿ! https://tungataranga.com/?p=9601 ಅಂದಿನ ವರದಿ
ಪೂರ್ತಿ ಸುದ್ದಿ ಓದಲು👆 ಮೇಲಿನ ಲಿಂಕ್ ಕ್ಲಿಕ್ ಮಾಡಿ
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ 9448256183, 7483162573
ಇಂತಹ ವರದಿಗಳಿಂದ ಸಾರ್ವಜನಿಕರ ನಿತ್ಯದ ಸಮಸ್ಸೆಗಳಲು ಬೆಳಕಿಗೆ ಬರಬೇಕು. ಪತ್ರಿಕೆಯ ಕಾರ್ಯ ಶ್ಲಾಘನೀಯ ಎಂದು ಮೆಸ್ಕಾಂ ಅಧಿಕಾರಿಗಳು ಹೇಳಿದ್ದ ಸ್ಥಳೀಯರು ತುಂಗಾತರಂಗ ದಿನಪತ್ರಿಕೆ ಕಳಕಳಿಗೆ ಅಭಿನಂದಿಸಿದ್ದಾರೆ.
ಅಂದಿನ ವರದಿಯಲ್ಲಿ ಈ ಬೀದಿ ದೀಪ ಹಾಗೂ ಸ್ವಿಚ್ ಸಮೀಪದಲ್ಲಿಯೇ ಮನೆಗಳು ಮತ್ತು ಶಾಲೆಯೂ ಸಹ ಇದೆ. ಏನಾದರೂ ಅನಾಹುತ ಸಂಭವಿಸುವ ಮೊದಲು ಮೆಸ್ಕಾಂ ಹಾಗೂ ಪಾಲಿಕೆ ಅಧಿಕಾರಿಗಳು ಕ್ರಮಕೈಗೊಂಡು ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ವಾರ್ಡ್‌ನ ಜನರ ಪರವಾಗಿ ಪತ್ರಿಕೆ ಮನವಿ ಮಾಡಿತ್ತು.