ಶಿವಮೊಗ್ಗ: ಜಾವಳ್ಳಿ ಸಮೀಪದಲ್ಲಿ ಇಂದು ಮದ್ಯಾಹ್ನ ಪೆಟ್ರೋಲ್ ತುಂಬಿದ ಟ್ಯಾಂಕರ್ವೊಂದು ಪಲ್ಟಿಯಾಗಿರುವ ಘಟನೆ ವರದಿಯಾಗಿದೆ.
ಟ್ಯಾಂಕರ್ ಪಲ್ಟಿಯಾದ ಸಮಯದಲ್ಲಿ ಜನರು ಜೀವದ ಭಯಬಿಟ್ಟು ಪೆಟ್ರೋಲ್ ತುಂಬಿಕೊಂಡ ಘಟನೆ ನಡೆದಿದೆ. ಟ್ಯಾಂಕರ್ ಶಿವಮೊಗ್ಗದಿಂದ ಚೆನ್ನಗಿರಿ ಭಾಗಕ್ಕೆ ತೆರಳುತ್ತಿದ್ದ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾದ ವಿಷಯ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ ಕ್ರೇನ್ನಿಂದ ವಾಹನವನ್ನು ಮೇಲೆತ್ತಿದ್ದಾರೆ.