ಶಿವಮೊಗ್ಗ,ಮಾ.13:
ಮಲ್ಲಿಗೇನಹಳ್ಳಿಯ ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಭವಿಷ್ಯ ನಿಧಿ ಭವನವನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಭೂಪೇಂದ್ರ ಯಾದವ್ ವಚ್ರ್ಯುಯಲ್ ಮೋಡ್ ಮೂಲಕ ಶನಿವಾರ ಲೋಕಾರ್ಪಣೆಗೊಳಿಸಿದರು.

ಗಳಿಸಿದ್ದರಲ್ಲಿ ಸಮಾಜಕ್ಕೆ ಮರಳಿಸಿದರೆ ‘ಯಶ’ ಸಾಧ್ಯ: ಫಿಡಿಲಿಟಸ್ ಕಾರ್ಪ್ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಚ್ಚುತ್ ಗೌಡ https://tungataranga.com/?p=9270


ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರಾದ ಎ.ಪಿ ಉನ್ನಿಕೃಷ್ಣನ್ ಅವರು ತಮ್ಮ ಸಿಬ್ಬಂದಿಯೊಂದಿಗೆ ” ಭವಿಷ್ಯ ನಿಧಿ ಭವನ”ವನ್ನು ಭೌತಿಕವಾಗಿ ಉದ್ಘಾಟಿಸಿ ಸಾರ್ವಜನಿಕ ಸೇವೆಗೆ ಲೋಕರ್ಪಣೆ ಮಾಡಿ ಭವನದ ಬಗ್ಗೆ ಮಾಹಿತಿ ನೀಡಿದರು.
ಶಿವಮೊಗ್ಗದ ಪ್ರಾದೇಶಿಕ ಕಛೇರಿಯ 1138 ಚದರ ಮೀಟರ್ ಅಳತೆಯ ಭೂಪ್ರದೇಶವನ್ನು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ಪಡೆಯಲಾಗಿದೆ. “ಭವಿಷ್ಯ ನಿಧಿ ಭವನ” ಕಟ್ಟಡವನ್ನ ಸಿ.ಪಿ.ಡಬ್ಲ್ಯೂ.ಡಿ ಅವರು ನಿರ್ಮಿಸಿದ್ದಾರೆ. ಈ ಕಟ್ಟಡವು 1152 ಚದರ ಮೀಟರ್ ವಿಸ್ತೀರ್ಣದಲ್ಲಿ ನೆಲ ಮತ್ತು ಎರಡು ಅಂತಸ್ತುಗಳನ್ನು ಹೊಂದಿದ್ದು, ಕಟ್ಟಡದಲ್ಲಿ ಮಾಡ್ಯೂಲಾರ್ ಪೀಠೋಪಕರಣಗಳು, ಅಗ್ನಿ ಶಾಮಕ ಎಚ್ಚರಿಕೆ ವ್ಯವಸ್ಥೆ, ವಿ.ಆರ್.ಎಫ್ ಸಿಸ್ಟಮ್( ಹವಾ ನಿಯಂತ್ರಣಾ ಸೌಲಭ್ಯ), ಲಿಫ್ಟ್, ಕೆ.ವಿ ಜನರೇಟರ್‍ಗಳ ಸೌಲಭ್ಯದಿಂದ ಭವನವನ್ನ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ ಎಂದರು.

ಭವಿಷ್ಯ ನಿಧಿ ಸಂಸ್ಥೆಯು ಹೆಚ್ಚಿನ ಗ್ರಾಹಕರು ಮತ್ತು ಹಣಕಾಸಿನ ವ್ಯವಹಾರವನ್ನು ಹೊಂದಿದ್ದು, ಪ್ರಪಂಚದ ಅತೀ ದೊಡ್ಡ ಸಾಮಾಜಿಕ ಭದ್ರತೆಯನ್ನ ಒದಗಿಸುವ ಸಂಸ್ಥೆಯಾಗಿ ರೂ.25 ಕೋಟಿಗೂ ಅಧಿಕ ಭವಿಷ್ಯ ನಿಧಿ ಸದಸ್ಯರ ಖಾತೆಗಳನ್ನು ನಿರ್ವಹಿಸುತ್ತಿದೆ ಎಂದು ಹೇಳಿದರು.

ಭವಿಷ್ಯನಿಧಿ ಸಂಸ್ಥೆಯು ಕಾರ್ಮಿಕರ ಭವಿಷ್ಯ ನಿಧಿ ಯೋಜನೆ, ಕಾರ್ಮಿಕರ ಡೆಪಾಸಿಟ್ ಲಿಂಕ್ಡ್ ವಿಮಾ ಯೋಜನೆ ಮತ್ತು ಕಾರ್ಮಿಕ ಪಿಂಚಣಿ ಯೋಜನೆಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು.

ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಭವಿಷ್ಯ ನಿಧಿ ಸಂಸ್ಥೆಯು ಸದಸ್ಯರ ಮತ್ತು ಉದ್ಯೋಗದಾತರ ಅನುಕೂಲಕ್ಕಾಗಿ ಯೂನಿವರ್ಸಲ್ ಅಕೌಂಟ್ ಸಂಖ್ಯೆ(ಯುಎಎನ್), ಕೋವಿಡ್-19 ಅರ್ಜಿ, ಆತ್ಮನಿರ್ಭರ್ ಭಾರತ್ ರೋಜ್‍ಗಾರ್ ಯೋಜನೆ(ಎಬಿಆರ್‍ವೈ), ಇ-ನಾಮ ನಿರ್ದೇಶನ, ಪ್ರಯಾಸ್, ಜೀವನ್ ಪ್ರಮಾಣ್, ಭವಿಷ್ಯ ನಿಧಿ ಹಣದ ಅಕಾಲಿಕ ಹಿಂಪಡೆತವನ್ನು ತಡೆಯುವಿಕೆ ಮುಂತಾದ ಯೋಜನೆಗಳ ಮೂಲಕ ಭವಿಷ್ಯ ನಿಧಿ ಸದಸ್ಯರ ಮತ್ತು ಉದ್ಯೋಗದಾತರಿಗೆ ಭದ್ರತೆಯನ್ನು ಒದಗಿಸುತ್ತಿದೆ ಎಂದರು

ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವರಾದ ರಾಮೇಶ್ವರ ತೆಲಿ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯ ಕಾರ್ಯದರ್ಶಿಗಳಾದ ಸುನೀಲ್ ಬರ್ತವಾಲ್, ಕೇಂದ್ರೀಯ ಭವಿಷ್ಯ ನಿಧಿ ಆಯುಕ್ತರಾದ ಶ್ರೀಮತಿ ನೀಲಂ ಶನಿ ರಾವ್, ಅಪರ ಕೇಂದ್ರಿಯ ಭವಿಷ್ಯ ನಿಧಿ ಆಯುಕ್ತರಾದ ಮಾರುತಿ ಬೋಯಿ, ಚಕ್ರಪಾಣಿ, ಪೂರ್ಣಿಮ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗದವರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!