ಶಿವಮೊಗ್ಗ, ಮಾ.08:
ಬರುವ ಏಪ್ರೀಲ್ 24 ರಂದು ಪ್ರಧಾನ ಮಂತ್ರಿ ಮೋದಿ ಅವರು ಶಿವಮೊಗ್ಗ ಜಿಲ್ಲೆಯ ಹೊಳಲೂರು ಗ್ರಾಮ ಪಂಚಾಯಿತಿಯಲ್ಲಿನ ಕಾರ್ಯಕ್ರಮದಲ್ಲಿ ಬಾಗವಹಿಸುವುದು ಪಕ್ಕ ಆಗಿದೆ.
ಅಂದು ಪಂಚಾಯತ್ ರಾಜ್ ದಿನಾಚರಣೆ ಕಾರ್ಯಕ್ರಮಕ್ಕೆ ಮೋದಿ ಅವರು ಭೇಟಿ ನೀಡಲಿದ್ದು ಸದರಿ ಕಾರ್ಯಕ್ರಮದ ಅಂಗವಾಗಿ ಇಂದು ಡಾ. ಚಂದ್ರಶೇಖರ್ ಕುಮಾರ್, ಅಪರ ಕಾರ್ಯದರ್ಶಿಗಳು, ಪಂಚಾಯತ್ ರಾಜ್ ಮಂತ್ರಾಲಯ, ಭಾರತ ಸರ್ಕಾರ ನವದೆಹಲಿ ಹಾಗೂ ಶಿಲ್ಪಾ ಶರ್ಮಾ, ಆಯುಕ್ತರು, ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಹಾಗೂ ಆಯುಕ್ತರು, ಗ್ರಾ.ಕು.ನೀ.ಮತ್ತು ನೈ ಇಲಾಖೆ ಅವರು ಇಂದು ಇಲ್ಲಿಗೆ ಬಂದು ಪರಿಶೀಲಿಸಿದ್ದಾರೆ.
ಶಿವಮೊಗ್ಗ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಂ. ಎಲ್. ವೈಶಾಲಿ ಅವರ ನೇತೃತ್ವದ ತಂಡ ಕಾರ್ಯಕ್ರಮ ಆಯೋಜನೆಗೆ ಸಕಲ ಸಿದ್ದವಾಗಿದೆ.
ಇಂದು ಬಂದ ತಂಡ ಹೊಳಲೂರು ಗ್ರಾಮದ ಸ್ಪಚ್ಚ ಸಂಕೀರ್ಣ ಘಟಕ, ಸರ್ಕಾರಿ ಶಾಲೆ ಹಾಗೂ ಅಂಗನವಾಡಿ, ಗ್ರಾಮ ಪಂಚಾಯಿತಿ , ಸ್ಪ ಸಹಾಯ ಸಂಘಗಳ ವಾಣಿಜ್ಯ ಮಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ರಾಜ್ಯ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.