ಕರ್ತವ್ಯ ಮುಖ್ಯ ಎಂದುಕೊಂಡಿರುವ ಪ್ರಚಾರಪ್ರಿಯರಲ್ಲದ ಎಸ್ಪಿ ಲಕ್ಷ್ಮೀಪ್ರಸಾದ್

ಶಿವಮೊಗ್ಗ, ಫೆ.೨೩:
ಅತ್ಯಂತ ಕ್ಲಿಷ್ಟ ಪರಿಸ್ಥಿತಿಯಲ್ಲೂ ಧೃತಿಗೆಡದೆ ಶಿವಮೊಗ್ಗದ ಕಿರಾತಕ ಮನಸುಗಳಿಗೆ ಬಿಗ್ ಬ್ರೇಕ್ ಹಾಕುವಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು ವರ್ಗಾವಣೆಯಾದರಂತೆ. ಶರತ್ ಚಂದ್ರ ಎಂಬ ಅಧಿಕಾರಿ ಬಂದರಂತೆ….?! ಎಂದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವ ಮೂಲಕ ನೆಮ್ಮದಿ, ಶಾಂತಿಯತ್ತ ಹೆಜ್ಜೆ ಇಡುತ್ತಿರುವ ಶಿವಮೊಗ್ಗದಲ್ಲಿ ಗೊಂದಲ ಸೃಷ್ಟಿಸುವ ಕಾರ್ಯ ನಡೆಯುತ್ತಿರುವುದು ದುರಂತವೇ ಹೌದು.


ಎಲ್ಲಾ ಜವಾಬ್ದಾರಿಗಳನ್ನು ಮೈಮೇಲೆ ಹೊತ್ತು ಇರುವ ಪೊಲೀಸ್ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಬಳಸಿಕೊಂಡು ವ್ಯವಸ್ಥಿತ ಕಾರ್ಯ ನಿರ್ವಹಣೆ ಮೂಲಕ ಹಳೇ ಶಿವಮೊಗ್ಗದಲ್ಲಿ ಹರಡಿದ್ದ ಬಹುದೊಡ್ಡ ಜ್ವಾಲೆಗೆ ಬ್ರೇಕ್ ಹಾಕಲು ಸದಾ ಪ್ರಯತ್ನಿಸುತ್ತಿರುವ ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸೇರಿ ಶಾಂತಿ ಕದಡುವವರನ್ನು ಹದ್ದುಬಸ್ತಿನಲ್ಲಿಟ್ಟಿರುವ ಅಧಿಕಾರಿ ಇವರು ಎಂದರೆ ಅತಿಶಯೋಕ್ತಿಯಲ್ಲ.

ADGP MURUGAN ..,


ಕೊಲೆ ನೆಡೆದು ನಾಲ್ಕೇ ಗಂಟೆಯಲ್ಲಿ ಆರೋಪಿಗಳ ಜಾಡು ಹಿಡಿದು ಅವರ ಹೆಡೆಮುರಿ ಕಟ್ಟಿರುವ ಎಸ್ಪಿ ವರ್ಗಾವಣೆ ಎಂದು ಸುಳ್ಳು ಸುದ್ದಿ ಹರಡುತ್ತಿರುವವರಾದರೂ ಯಾರು? ಶಿವಮೊಗ್ಗದ ಇಂದಿನ ದಿನದ ಸ್ಥಿತಿಗತಿಗೆ ಪೂರಕವಾಗಿ ಜನರ ನೆಮ್ಮದಿ ಬದುಕು ಕಟ್ಟಿಕೊಡಲು ಯತ್ನಿಸುತ್ತಿರುವ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಲಕ್ಷ್ಮಿ ಪ್ರಸಾದ್ ಅವರ ವರ್ಗದ ಈ ಸುಳ್ಳು ಸುದ್ದಿ ಹರಡಿದವರಾದರೂ ಯಾರು? ಅದರಿಂದೇನು ಲಾಭ. ಗೊಂದಲ ಮೂಡಿಸುವ ಕಾರ್ಯ ಇಂತಹ ಹೊತ್ತಿನಲ್ಲಿ ಬೇಕಾ…? ಸೈಬರ್ ಕ್ರೈಂ ಈ ವಿಚಾರವನ್ನು ನೋಡುತ್ತಿಲ್ಲವೇ? ಗಮನಿಸಿಲ್ಲವೇ?

By admin

ನಿಮ್ಮದೊಂದು ಉತ್ತರ

You missed

error: Content is protected !!