ಶಿವಮೊಗ್ಗ, ಫೆ.21:
ಸೀಗೆಹಟ್ಟಿಯಲ್ಲಿ ನಡೆದ ಕೊಲೆ ಪ್ರಕರಣವೊಂದರ ಹಿನ್ನೆಲೆಯಲ್ಲಿ ರಾತ್ರಿಯಿಡೀ ಪೊಲೀಸರ ಬಂದೂಬಸ್ತಿನ ನಡುವೆ ಕಲ್ಲುತೂರಾಟ, ವಾಹನಗಳಿಗೆ ಬೆಂಕಿ ಹಚ್ಚುವ ಕಾರ್ಯ ನಡೆದಿವೆ.
ಖುದ್ದು ಎಸ್ಪಿ ಲಕ್ಷ್ಮೀಪ್ರಸಾದ್ ಅವರು ಗಸ್ತಿನ ನೇತೃತ್ವ ವಹಿಸಿದ್ದು ಬಿಗಿ ಪಹರೆ ಆಯೋಜಿಸಿದ್ದಾರೆ. ಅಂತೆಯೇ ಶಿವಮೊಗ್ಗಕ್ಕೆ ಐಜಿಪಿ ಆಗಮಿಸಿದ್ದಾರೆ.
ಇದರ ನಡುವೆ, ಜಿಲ್ಲಾಧಿಕಾರಿ ಸೆಲ್ವಮಣಿ ಅವರು ಸೂಕ್ಷ್ಮ ಪ್ರದೇಶಗಳ ಚಲನವಲನ ಗಮನಿಸಿರುವ ಜೊತೆ ನಗರದಾದ್ಯಂತ ನಿಷೇದಾಜ್ಣೆಜಾರಿಗೊಳಿಸಿದ್ದಾರೆ. ಫೆ.23 ರ ರಾತ್ರಿ 9 ರವರೆಗೆ ನಿಷೇದಾಜ್ಣೆ ಜಾರಿಯಲ್ಲಿರಲಿದೆ.
ಜಿಲ್ಲಾಧಿಕಾರಿಗಳ ಆದೇಶದನ್ವಯ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪ.ಪೂ ಕಾಲೇಜುಗಳ ಉಪನಿರ್ಧೇಶಕರು ಜಿಲ್ಲಾಧಿಕಾರಿಗಳ ಆದೇಶದನ್ವಯ ಶಿವಮೊಗ್ಗ ನಗರದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ ಕಾಲೇಜಿಗೆ ಇಂದು ರಜೆ ಘೋಷಿಸಿದ್ದಾರೆ.
ನಗರದ ಕಾಲೇಜಿಗೆ ರಜೆ
ಜಿಲ್ಲಾಧಿಕಾರಿಗಳು, ಶಿವಮೊಗ್ಗ ಇವರ ಆದೇಶದಂತೆ, ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ ಇರುವುದರಿಂದ ದಿನಾಂಕ:21-02-2022 ರಂದು ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
– DDPU shimoga.
ನಗರದ ಶಾಲೆಗಳಿಗೆ ರಜೆ
ಜಿಲ್ಲಾಧಿಕಾರಿಗಳು, ಶಿವಮೊಗ್ಗ ರವರ ಆದೇಶದಂತೆ ಶಿವಮೊಗ್ಗ ನಗರದಲ್ಲಿ ಸೆಕ್ಷನ್ 144 ಜಾರಿ ಮಾಡಿರುವುದರಿಂದ ದಿನಾಂಕ 21.02.2022 ರಂದು 1 ನೇ ತರಗತಿ ಯಿಂದ 10 ನೇ ತರಗತಿಯವರೆಗಿನ ಶಿವಮೊಗ್ಗ ನಗರ ಭಾಗದ ಸರ್ಕಾರಿ / ಅನುದಾನಿತ / ಅನುದಾನರಹಿತ ಶಾಲೆಗಳಿಗೆ ಮಾತ್ರ ರಜೆ ಘೋಷಿಸಲಾಗಿರುತ್ತದೆ. ಎಸ್.ಎಸ್.ಎಲ್.ಸಿ ಪೂರ್ವಭಾವಿ ಪರೀಕ್ಷೆಗಳನ್ನು ಸಹ ಮುಂದೂಡಲಾಗುತ್ತದೆ. ಶಿವಮೊಗ್ಗ ನಗರ ಭಾಗ ಹೊರತು ಪಡಿಸಿ ಜಿಲ್ಲೆಯ ಶಾಲೆಗಳು ಯಥಾ ಪ್ರಕಾರ ಇರುತ್ತವೆ ಎಂದು ತಿಳಿಸಿದೆ.
DDPI, SHIMOGA