ಯಾಕೋ…, ಅಕ್ಷರಗಳು, ಪದಗಳು, ವಾಕ್ಯಗಳು ನೆನಪಾಗುತ್ತಿಲ್ಲ…, ತೀರಾ ತಿಕ್ಕಲನಂತೆ ಈ ಹುಡ್ಗ ನೇಣಿಗೆ ಕೊರಳೊಡ್ಡಿದನಾ?…., ಛೇ…, ಇವನ ಬಗ್ಗೆ ಹೇಳೋದು ಸಾಕಷ್ಟಿತ್ತು…
ಉಗಿದು ಬುದ್ದಿವಾದ ಹೇಳಿದರಷ್ಟೇ ಒಳ್ಳೆಯವನಾಗಿ ಬಿಡ್ತಿದ್ದ ನಮ್ ಪ್ರೆಸ್ ಟ್ರಸ್ಟ್ ನ ಆದರ್ಶ ಹಿಂದೆ ಕಾರ್ಯನಿರತ ಪತ್ರಕರ್ತರ ಸಂಘದಿಂದಲೂ ಗೊತ್ತಿದ್ದವ.
ಸಂಘದ ಕಾರ್ಯದರ್ಶಿಯಾಗಿದ್ದ ಹಳೇ ಕಬ್ಬಿಣದ ಚೇರುಗಳಿಗೆ ಬಣ್ಷ ಹೊಡೆಯುವ ಮೂಲಕ ಹತ್ತಿರವಾಗಿದ್ದ ಆದರ್ಶ ಇಂದಿನವರೆಗೂ ಅದೇ ಪ್ರೀತಿಯಿಂದ ನನ್ನ ಗದರಿಕೆಗೂ ತಪ್ಪು ಮಾಡಿಲ್ಲಣ್ಣ ಎನ್ನುತ್ತಿದ್ದ.
ತಿಕ್ಕಲ ಆದರ್ಶ ಎಡವಿ ಸಾವಿಗೆ ಸನಿಹ ಹೋಗಲು ಪ್ರಯತ್ನಿಸಿದ್ದೇಕೆ. ಮದ್ವೆ ಆದಮೇಲೂ ಆತನಿಗೆ ಅದೇ ಶೈಲಿಯಲ್ಲಿ ಬೈಯುತ್ತಿದ್ದೆ. ದುರಭ್ಯಾಸ, ಕೆಟ್ಟವರ ಸಹವಾಸ ಕೈಬಿಡಲು ಹೇಳಿದ್ದಿದೆ. ಇತ್ತೀಚೆ ಚಂದ ಆಗಿದ್ದ ಆತನಿಗೆ ಅದ್ಯಾವ ಪಾಪಿಗಳ ಕಣ್ಣು ಬಿತ್ತೋ…? ನಿನಗಿದ್ದ ದೇವರ ಮೇಲಿನ ಪ್ರೀತಿ ನಿನ್ನ ಸಾವನ್ನು ಮುಂದೆ ತಳ್ಳದಾಯಿತೇ….?
ಛೇ, ಮೂರ್ಖತನದ ಕೆಲಸ ಮಾಡಿಬಿಟ್ಟೆ ಕಣೋ, ನಮ್ಮ ಹುಡ್ಗ ನೀ ಅನ್ನಲು ಬೇಜಾರಾಗುತ್ತೇ…,
ಬರೆಯೋಕಾಗ್ತಿಲ್ಲ….., ಉಗಿಯೋಕೋ ಮನಸಿಲ್ಲ…, ಥೂ ತಿಕ್ಕಲ…
ನಿನ್ನ ಸಾವಿನ ಮಾತು ಕನಸಾಗಿ ಬಿಡಲಿ….
ಗಜೇಂದ್ರಸ್ವಾಮಿ,
ತುಂಗಾತರಂಗ ದಿನಪತ್ರಿಕೆ
tungataranga.com