ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ಕಾಮಗಾರಿ ಈ ವರ್ಷದ ಡಿಸೆಂಬರ್ ನಲ್ಲಿ ಮುಕ್ತಾಯಗೊಳ್ಳಲಿದ್ದು ಹಾರಾಟಕ್ಕೆ ಸಿದ್ದತೆಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಜೂನ್ ನಲ್ಲಿ ರನ್ ವೇ ಕಾಮಗಾರಿ ಮುಗಿಯಲಿದ್ದು ಟರ್ಮಿನಲ್ ಕಾಮಗಾರಿಯು ಜುಲೈನಲ್ಲಿ ಅಂತ್ಯಗೊಳ್ಳಲಿದೆ. ಆದರೆ ಸಣ್ಣಪುಟ್ಟಕಾಮಗಾರಿಗಳು ನಡೆಯಲಿದ್ದು ಅದು ಡಿಸೆಂಬರ್ ವರೆಗೆ ಪೂರ್ಣಗಪಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಈಗಾಗಲೇ ಕೇಂದ್ರ ನಾಗರೀಕ ವಿಮಾನಯಾನ ಸಚಿವರನ್ನ ಭೇಟಿಯಾಗಿ ವಿಮಾನ ಹಾರಾಟದ ಮಾರ್ಗದ ಪಟ್ಟಿಯನ್ನ ನೀಡಿದ್ದೇನೆ. ಆದರೆ ಇದರ ನಿರ್ವಾಹಣೆಯನ್ನ ವಿಮಾನ ನಿಲ್ದಾಣ ಪ್ರಾಧಿಕಾರ ನಡೆಸಬೇಕೋ ಅಥವಾ ರಾಜ್ಯ ಸರ್ಕಾರ ನಿರ್ವಹಿಸಬೇಕೋ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

