ಶಿವಮೊಗ್ಗ, ಜ.11:
ಸಾಲ ಕೊಟ್ಟವ, ಆ ಹಣಕ್ಕಾಗಿ ಪದೇ ಪದೇ ಪೀಡಿಸಿದಾಗ ಸ್ನೇಹ ಸಂಬಂಧವ ಮರೆತು ಸಾಲ ಪಡೆದಾತ ಕೊಲೆ ಮಾಡಿ ಅದನ್ನು ಮುಚ್ಚಿಡಲು ಪ್ರಯತ್ನಿಸಿ ಸಿಕ್ಕಿಬಿದ್ದ ಆರೋಪಿಗೆ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ಎ ಇಪ್ಪತೈದು ಲಕ್ಷ ದಂಡ ವಿಧಿಸಿದೆ.
ವಿವರಣೆ:
ಮಂಜಪ್ಪ ಜಿ, 43 ವರ್ಷ, ಗ್ಯಾರೇಜ್ ರೋಡ್ ಶಿವಮೊಗ್ಗ ಮತ್ತು ಶ್ರೀಧರ 36 ವರ್ಷ, ಕಲ್ಲಹಳ್ಳಿ, ಹುಡ್ಕೋ ಶಿವಮೊಗ್ಗ ಇಬ್ಬರೂ ಸ್ನೇಹಿತರಾಗಿದ್ದು, ಮಂಜಪ್ಪನು ಶ್ರೀಧರನಿಗೆ 9 ಲಕ್ಷ ರೂ ಹಣವನ್ನು ಸಾಲವಾಗಿ ನೀಡಿದ್ದು ಹಿಂದಿರುಗಿ ನೀಡುವಂತೆ ಪದೇ ಪದೇ ಕೇಳಿದ್ದರಿಂದ ದಿ:-16/02/2014 ರಂದು ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಎಪಿಎಂಸಿ ಬಳಿ ಆರೋಪಿ ಶ್ರೀಧರನು ಮಂಜಪ್ಪನನ್ನು ಕರೆಸಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿ ಚೀಲದಲ್ಲಿ ಕಟ್ಟಿ ಅಲ್ಲೇ ಹೂತು ಹಾಕಿ ಸಾಕ್ಷಿ ನಾಶ ಮಾಡಿದ್ದು ಈ ಬಗ್ಗೆ
ಗುನ್ನೆ ಸಂಖ್ಯೆ 0069/2014 ಕಲಂ 302 201 IPC ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.
ಅಂದು ಜಯರಾಜ್, ವೃತ್ತ ನೀರಿಕ್ಷಕರು, ಕೋಟೆ ವೃತ್ತ ಮತ್ತು ಎಸ್ ಎಮ್ ಶಿವಕುಮಾರ್, ವೃತ್ತ ನಿರೀಕ್ಷಕರು, ದೊಡ್ಡಪೇಟೆ ವೃತ್ತರವರ ತಂಡಗಳು ಸದರಿ ಪ್ರಕರಣ ತನಿಖೆ ಕೈಗೊಂಡು ದಿನಾಂಕ 20-02-2014 ರಂದು ಆರೋಪಿಯನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಜಿ ಮಧು, ವಿಶೇಷ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದು ಆರೋಪಿಯ ವಿರುದ್ಧ ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಾನು, ಮಾನ್ಯ ನ್ಯಾಯಾದೀಶರು, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಶಿವಮೊಗ್ಗ ರವರು ಆರೋಪಿತನಿಗೆ ದಿನಾಂಕ 10-02-2022 ರಂದು ಜೀವಾವಧಿ ಕಾರಾವಾಸ ಶಿಕ್ಷೆ ಮತ್ತು 250000/- ರೂಪಾಯಿಗಳ ದಂಡ ವಿದಿಸಿ ಆದೇಶಿಸಿರುತ್ತಾರೆ.