ಭಾರತ್ ಪೆಟ್ರೋಲಿಯಂ ಕಾರ್ಪೂರೇಷನ್ ನ ಸಂಸ್ಥಾಪನಾ ದಿನಾಚರಣೆ
ಶಿವಮೊಗ್ಗ, ಜ.೨೬:
ದೇಶದಾದ್ಯಂತ ಪೆಟ್ರೋಲಿಯಂ ಉತ್ಪನ್ನ ಗಳನ್ನು ನೀಡುತ್ತಿರುವ ಭಾರತ್ ಪೆಟ್ರೋಲಿಯಂ ಕಾರ್ಪೂರೇಷನ್ ಲಿ. ಶಿವಮೊಗ್ಗ ಸೇರಿದಂತೆ ದೇಶದ ಆಯ್ದ ನೂರು ಭಾಗಗಳಲ್ಲಿ ಸಂಸ್ಥಾಪನಾ ದಿನದ ಅಂಗವಾಗಿ ವಿನೂತನ ಆಧುನಿಕ ಶೈಲಿಯ ಪೆಟ್ರೋಲಿಯಂ ಉತ್ಪನ್ನಗಳನ್ನು ಗ್ರಾಹಕರು ಪಡೆಯುವ ವಿಶೇಷ ತಂತ್ರಜ್ಞಾನದ ಯಂತ್ರವನ್ನು ಬಿಡುಗಡೆ ಮಾಡಿತು.
ಶಿವಮೊಗ್ಗ ಮಂಡ್ಲಿಯಲ್ಲಿನ ಶ್ರೀ ಮಂಜು ನಾಥ ಸ್ವಾಮಿ ಸರ್ವಿಸ್ ಸ್ಟೇಷನ್ ನಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ. ಲಕ್ಷ್ಮಿಪ್ರಸಾದ್, ಅರಣ್ಯ ಇಲಾಖೆಯ ಡಿಎಫ್ ಓ ನಾಗರಾಜ್, ಅಳತೆ ಮತ್ತು ಮಾಪನ ಇಲಾಖೆಯ ಸಹಾಯಕ ಆಯುಕ್ತ ಮಂಜುನಾಥ್ ಅವರು ಸಂಸ್ಥಾಪನಾ ದಿನಾ ಚರಣೆ ಕಾರ್ಯಕ್ರಮ ಉದ್ಘಾಟಿಸಿ ಹೊಸ ತಂತ್ರ ಜ್ಞಾನವನ್ನು ಲಾಂಚ್ ಮಾಡಿದರು.
ಈ ಸಂದರ್ಭದಲ್ಲಿ ಕಾರ್ಪೂರೇಷನ್ನ ವಲಯ ವ್ಯವಸ್ಥಾಪಕ ಸಾಗರ್ ಜೆ. ತೊಂಡ್ಕರ್, ಸಹಾಯಕ ವ್ಯವಸ್ಥಾಪಕ ಮಯಾಂಕ್ ತಲ್ರೇಜಾ ಹಾಗೂ ಶಿವಮೊಗ್ಗ ಜಿಲ್ಲೆಯ ವಿತರಕರು ಹಾಗೂ ಇತರರಿದ್ದರು.
ಇನ್ಮುಂದೆ ಪೆಟ್ರೊಲಿಯಂ ಉತ್ಪನ್ನಗಳನ್ನು ವಿನೂತನ ಶೈಲಿಯಲ್ಲಿ ಪಡೆಯಬಹುದು. ಭಾರತ್ ಪೆಟ್ರೊಲಿಯಂ ಹೊಸ ತಂತ್ರಜ್ಣಾನದ ಮೂಲಕ ಗ್ರಾಹಕರೇ ನೇರವಾಗಿ ಹಣ ಹಾಕಿ ಅವರೇ ಅಷ್ಟು ಪೆಟ್ರೊಲಿಯಂ ಉತ್ಪನ್ನಗಳನ್ನು ಪಡೆಯಬಹುದು.