ರಂಗಾಯಣದಿಂದ ಸಂವಿಧಾನವನ್ನು ಅರ್ಥೈಸುವ ನಾಟಕ
ಶಿವಮೊಗ್ಗ, ಜ.೨೫:
ರಂಗಾಯಣ ಶಿವಮೊಗ್ಗ ವತಿಯಿಂದ ರಾಜ್ಯದಲ್ಲಿ ಪ್ರಥಮ ಬಾರಿಗೆ ಸಂವಿಧಾನವನ್ನು ಸಾಮಾನ್ಯ ವರ್ಗದವರಿಗೂ ಸುಲಭವಾಗಿ ತಲುಪುವಂತೆ ನಾಟಕ ರೂಪ ದಲ್ಲಿ ತರಲಾಗಿದೆ. ಸರ್ವರಿಗೂ ಸಂವಿಧಾನ ಯೋಜನೆಯಡಿ ಸಿದ್ಧಪಡಿಸಿದ ವಿ ದ ಪೀಪಲ್ ಆಫ್ ಇಂಡಿಯಾ ನಾಟಕ ವನ್ನು ಡಾ. ರಾಜಪ್ಪ ದಳ ವಾಯಿ ರಚಿಸಿದ್ದು, ಉದ ಯೋನ್ಮೂಕ ರಂಗ ನಿರ್ದೇಶಕ ಕೆ.ಪಿ. ಲಕ್ಷ್ಮಣ್ ನಾಟಕ ನಿರ್ದೇಶಿಸಿದ್ದು, ಜ. ೨೬ರ ಸಂಜೆ ೬.೩೦ಕ್ಕೆ ಸುವರ್ಣ ಸಂಸ್ಕೃತಿಕ ಭವನದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಕಳೆದ ೬ ತಿಂಗಳಿಂದ ಈ ನಾಟಕ ರಚನೆಯ ಬಗ್ಗೆ ಅನೇಕ ನಾಟಕ ರಚನಾ ಕಮ್ಮಟಗಳು, ಉಪನ್ಯಾಸ- ವಿಚಾರ ಸಂಕಿರಣಗಳನ್ನು ಆಯೋ ಜಿಸಿ ವಿಶಿಷ್ಟವಾಗಿ ಈ ನಾಟಕ ಕಟ್ಟಲಾಗಿದೆ. ಸಂವಿಧಾನದ ಆಶ ಯಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಮಹಿಳಾ ಹಕ್ಕುಗಳು, ಸಂವಿಧಾನ ಕರಡು ರಚನಾ ಸಮಿತಿಯಲ್ಲಿನ ಚರ್ಚೆಗಳು, ಸಂವಿಧಾನದಲ್ಲಿ ಮಹಿಳೆಯರ ಆಶಯಗಳು ಇತ್ಯಾದಿ ವಿಷಯಗಳನ್ನು ಬಳಸಿ ಈ ನಾಟಕವನ್ನು ಸಿದ್ಧಪಡಿಸಲಾಗಿದೆ.
ಸುದ್ದಿಗೋಷ್ಟಿಯಲ್ಲಿ ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ, ರಂಗ ನಿರ್ದೇಶಕ ಕೆ.ಪಿ. ಲಕ್ಷ್ಮಣ್, ರಂಗ ಸಮಾಜದ ಸದಸ್ಯ ಆರ್.ಎಸ್. ಹಾಲಸ್ವಾಮಿ ಉಪಸ್ಥಿತರಿದ್ದರು.
ಆಡಳಿತ ನಡೆಸುವ ವ್ಯಕ್ತಿಗೆ ಯಾವ ಜಿಲ್ಲೆಯಾದರೇನು?: ಕೆ.ಎಸ್.ಈಶ್ವರಪ್ಪ
ಶಿವಮೊಗ್ಗ, ಜ.೨೫:
ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಬಗ್ಗೆ ಈಗ ಚರ್ಚೆಯಾಗುತ್ತಿದೆ. ಅಗತ್ಯವಿಲ್ಲದ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಆಡಳಿತ ನಡೆಸುವ ವ್ಯಕ್ತಿಗೆ ಯಾವ ಜಿಲ್ಲೆ ಯಾದರೇನು? ದೇವರ ಪಲ್ಲಕ್ಕಿ ಹೊರುವ ವರಿಗೆ ಹಿಂದಾದರೇನು? ಮುಂದಾದರೇನು? ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಇದು ಆಡಳಿತ ವ್ಯವಸ್ಥೆ. ಜನತೆ ದೇವರಿದ್ದ ಹಾಗೇ. ಆ ಜಿಲ್ಲೆ ಬೇಕು, ಈ ಜಿಲ್ಲೆ ಬೇಕೆಂದು ಚರ್ಚೆಯಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಇದಾಗಬಾರ ದಾಗಿತ್ತು. ಆದರೂ ಆಗುತ್ತಿದೆ. ಇಂದು ಅಥವಾ ನಾಳೆ ಈ ವಿಷಯ ತಿಳಿಯಾಗಲಿದೆ ಎಂದರು.
ನಾನು ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವನಾಗಿದ್ದೆ. ಈಗ ಚಿಕ್ಕಮಗಳೂರು ಉಸ್ತುವಾರಿ ವಹಿಸಲಾಗಿದೆ. ಬೇರೆ ಜಿಲ್ಲೆಯವರು ಇಲ್ಲಿನ ಉಸ್ತುವಾರಿಯಾಗಿ ಪರಿಸ್ಥಿತಿ ಅಧ್ಯಯನ ಮಾಡಿದಾಗ ಪಕ್ಷದ ಶಾಸಕರು ಜನರೊಂದಿಗೆ ಹೇಗಿದ್ದಾರೆ, ಅಭಿವೃದ್ಧಿ ಕೆಲಸ ಮಾಡಿದ್ದಾರೆಯೇ, ತಿದ್ದುಪಡಿ ಮಾಡಿಕೊಳ್ಳಬೇಕಿರುವುದೇನು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರಿಗೆ ತಿಳಿಸುತ್ತಾರೆ. ಮುಂದೆ ಮತ್ತೆ ಬಿಜೆಪಿ ಸರ್ಕಾರ ಬರುತ್ತದೆ. ಈಗ ಪಕ್ಷ ಸಂಘಟನೆ ಮತ್ತು ಅಭಿವೃದ್ಧಿ ದೃಷ್ಠಿಯಿಂದ ಉಸ್ತುವಾರಿ ಬದಲಿಸಲಾಗಿದೆ ಎಂದು ತಿಳಿಸಿದರು.
ನಾನು ಚಿಕ್ಕಮಗಳೂರು ಜಿಲ್ಲೆ ಉಸ್ತುವಾರಿ ಸಚಿವನಾಗಿ ಅಲ್ಲಿ ಪಕ್ಷ ಸಂಘಟನೆ, ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದ್ದೇನೆ. ಶೃಂಗೇರಿ ಹೊರ ತಾಗಿ ಅಲ್ಲಿ ಉಳಿದೆಲ್ಲಾ ಕಡೆ ಬಿಜೆಪಿ ಶಾಸಕರಿ ದ್ದಾರೆ. ಅಲ್ಲಿಯೂ ಪಕ್ಷ ಸಂಘಟನೆ ಮಾಡುತ್ತೇವೆ. ಶಾಸಕರು ಸರಿಯಾಗಿ ಕೆಲಸ ಮಾಡಿಲ್ಲದಿದ್ದರೆ ಜನ ಹೇಳುತ್ತಾರೆ. ಮುಂದೆ ನಾವು ತಿದ್ದಿಕೊಳ್ಳಬೇಕಿದ್ದರೆ ತಿದ್ದಿಕೊಂಡು ಅಭಿವೃದ್ಧಿ ಕೈಗೊಳ್ಳಲು ಅನುಕೂಲವಾಗಲಿದೆ ಎಂದರು.
ಜ.೨೬: ಫೋಟೋಗ್ರಫಿ ಕಾರ್ಯಗಾರ ಆಯೋಜನೆ
ಶಿವಮೊಗ್ಗ, ಜ.೨೫:
ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದಲ್ಲಿ ಜ.೨೬ ರಂದು ವೈಲ್ಡ್ ಲೈಫ್ ಫೋಟೋಗ್ರಫಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
೩೦ ಮಂದಿಗೆ ಅವಕಾಶವಿದ್ದು, ಆಸಕ್ತರು ಸಿಂಹಧಾಮದ ಕಚೇರಿಯಲ್ಲಿ ಅರ್ಜಿ ಪಡೆದು ಸಲ್ಲಿಸಬಹುದು. ಮೊದಲು ಬಂದ ೩೦ ಮಂದಿಗೆ ಮಾತ್ರ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ೮೦೭೩೩೨೨೪೭೧ ಈ ನಂಬರಿಗೆ ಸಂಪರ್ಕಿಸಬಹುದು.
ಜ್ಞಾನದೀಪ ಶಾಲೆಯ ವಿದ್ಯಾರ್ಥಿನಿ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆ
ಶಿವಮೊಗ್ಗ, ಜ.೨೫:
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಇವುಗಳ ಸಹಯೋಗದೊಂದಿಗೆ ೨೯ನೇಯ ರಾಜ್ಯಮಟ್ಟದ ಮಕ್ಕಳ ಸಮಾವೇಶ ಇತ್ತೀಚೆಗೆ ನಡೆಯಿತು.
ಸುಸ್ಥಿರ ಜೀವನಕ್ಕಾಗಿ ವಿಜ್ಞಾನ ಎಂಬ ಕೇಂದ್ರ ವಿಷಯದ ಆಧಾರದ ಮೇಲೆ ವೈಜ್ಞಾನಿಕ ಚಿಂತನೆ ಮತ್ತು ಕೌಶಲ್ಯಪೂರ್ಣವಾಗಿ ಯೋಜನಾ ವರದಿಯನ್ನು ರಚಿಸಿ, ಮಂಡಿಸಿ ರಾಜ್ಯಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ೬ನೇಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ಪ್ರಣತಿ ಹೆಚ್ ಜಿ ಆಯ್ಕೆಯಾಗಿದ್ದಾರೆ. ಮುಂದಿನ ಹಂತದಲ್ಲೂ ಇವರಿಗೆ ಯಶಸ್ಸು ಸಿಗಲೆಂದು ಜ್ಞಾನದೀಪ ಆಡಳಿತ ಮಂಡಳಿ, ಶಾಲೆಯ ಪ್ರಾಂಶುಪಾಲರು ಮತ್ತು ಶಿಕ್ಷಕ ವೃಂದದವರು ಶುಭವನ್ನು ಹಾರೈಸಿದ್ದಾರೆ.
ಮತಾಂತರ ಆರೋಪ: ಪತಿ ವಿರುದ್ಧ ಪತ್ನಿ ದೂರು
ಶಿಕಾರಿಪುರ, ಜ.೨೫:
ತಾಲ್ಲೂಕಿನ ಹಿತ್ತಲ ಗ್ರಾಮ ಸಮೀಪದ ಮಾಡ್ರಳ್ಳಿಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುವಂತೆ ಪತಿ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗ್ರಾಮದ ನಿರ್ಮಲಾಬಾಯಿ ಅವರು ಪತಿ ಸುರೇಶ್ ನಾಯ್ಕ ವಿರುದ್ಧ ದೂರು ನೀಡಿದ್ದಾರೆ.
ಪತಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಾರೆ. ನನಗೆ ಇಷ್ಟವಿಲ್ಲದಿದ್ದರೂ ಕೆಲ ತಿಂಗಳುಗಳಿಂದ ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುವಂತೆ ನಿತ್ಯ ಒತ್ತಡ ಹಾಕಿ, ಹೊಡೆಯುತ್ತಿದ್ದಾರೆ. ರಾತ್ರಿ ಹೊತ್ತು ಅವರ ಬೋಧನೆಯಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹೇಳಲು ಹೋದರೆ ನನಗೆ ಹೊಡೆದು ತವರು ಮನೆಗೆ ಹೋಗು’ ಎನ್ನುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
’ಒಂದೂವರೆ ತಿಂಗಳಿನಿಂದ ಮನೆ ಬಿಟ್ಟು ಹೋಗಿ ಅವರ ಚಿಕ್ಕಪ್ಪ ದುರ್ಗಾನಾಯ್ಕ ಮನೆಯಲ್ಲಿ ಇದ್ದಾರೆ. ನನಗೆ ನನ್ನ ಧರ್ಮ ಬಿಟ್ಟು ಹೋಗಲು ಮನಸ್ಸಿಲ್ಲ. ಪತಿ ಹಾಗೂ ಅವರ ಚಿಕ್ಕಪ್ಪ ದುರ್ಗಾನಾಯ್ಕ ಇಬ್ಬರೂ ಈ ಬಗ್ಗೆ ಗಲಾಟೆ ಮಾಡುತ್ತಾರೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಶಿವಮೊಗ್ಗ ಕಾಶಿಪುರದಲ್ಲಿರುವ ಶ್ರೀ ಗದ್ದೆ ಚೌಡೇಶ್ವರಿ ದೇವಾಲಯದಲ್ಲಿಂದು ವಾರ್ಷಿಕೋತ್ಸವದ ಅಂಗವಾಗಿ ದೇವಾಲಯ ಸಮಿತಿ ಹಾಗೂ ಅಪಾರ ಭಕ್ತ ಸಮೋಹ ವಿಶೇಷ ಪೂಜೆ, ಹೋಮ, ವಾರ್ಷಿಕೋತ್ಸವ ಹಾಗೂ ಅನ್ನ ಸಂತರ್ಪಣೆ ಮಾಡಲಾಯಿತು. ಸಮಿತಿ ಅಧ್ಯಕ್ಷ ಎಸ್ . ಮಂಜುನಾಥ್, ಕುಮಾರಣ್ಣ, ಶೇಖರ್, ಕೃಷ್ಣಮೂರ್ತಿ, ರಾಜಣ್ಣ, ಭಾರತಿ ಮಂಜುನಾಥ್, ಬಾನು ಮತ್ತಿತರರಿದ್ದರು.
ಶಿವಮೊಗ್ಗ ತಾಲೂಕಿನ ಹೊಳೆಹೊನ್ನೂರು ಸರ್ಕಾರಿ ಪ್ರಥಮ ದರ್ಜಿ ಕಾಲೇಜಿನಲ್ಲಿ ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ ನಾಯ್ಕ ರವರ ಅಧ್ಯಕ್ಷತೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪ್ರಾಂಶುಪಾಲ ವಿರುಪಾಕ್ಷಪ್ಪ, ಸಮಿತಿ ಉಪಾಧ್ಯಕ್ಷ ಶ್ರೀನಿವಾಸ್,ಪಕ್ಷದ ಪ್ರಮುಖರು, ಕಾರ್ಯಕರ್ತರು, ಹಾಗೂ ಕಾಲೇಜು ಅಧ್ಯಾಪಕ ವೃಂದದವರು ಹಾಜರಿದ್ದರು.