ಈ ಹೊಸ ಪ್ರಯತ್ನದ ಬಗ್ಗೆ ಡಾ. ಸಾಸ್ವೆಹಳ್ಳಿ ಸತೀಶ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದು…,
ಶಿವಮೊಗ್ಗ, ಜ.24:
ಹೊಂಗಿರಣ ಶಿವಮೊಗ್ಗ ತಂಡದ ಪ್ರತಿಭಾನ್ವಿತ ನಟ, ರಾವಣ ದರ್ಶನ, ಹೂವು ಎರಡು ಏಕವ್ಯಕ್ತಿ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ , ಉಘೇ ಉಘೇ ಮಾದೇಶ್ವರ ಧಾರವಾಹಿಯಲ್ಲಿ ಪ್ರಮುಖ ಪಾತ್ರನಿರ್ವಹಿಸಿ ಎಲ್ಲರಿಂದ ಮೆಚ್ಚುಗೆ ಗಳಿಸಿರುವ, ಶೀಘ್ರದಲ್ಲೇ ಪ್ರಸಾರ ವಾಗಲಿರುವ ದಾಸ ಪುರಂದರ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ನನ್ನ ಪ್ರೀತಿಯ ನಟ ಚಂದ್ರಶೇಖರ ಶಾಸ್ತ್ರಿ ತಮ್ಮ ಹಳ್ಳಿಯ ರೈತರಿಗೊಂದು ನಾಟಕ ನಿರ್ದೇಶನ ಮಾಡ್ತಾ ಇದ್ದಾರೆ. (ಈಹಿಂದೆ ಇದೇ ಹಳ್ಳಿ ಮಕ್ಕಳಿಗೆ ನಾನೂ ಒಂದು ನಾಟಕ ನಿರ್ದೇಶನಮಾಡಿದ್ದೆ ಅದು ಬೆಂಗಳೂರು ಮುಂಬೈ ಮುಂತಾದ ಕಡೆ ಪ್ರದರ್ಶನ ಕಂಡಿತ್ತು)
ನಾವು ಈ ವರ್ಷ ಕನಿಷ್ಟ ಮೂರು ನಾಟಕಗಳನ್ನಾದರೂ ಬೇರೆ ಬೇರೆ ಹಳ್ಳಿ ಗೆಳೆಯರಿಗೆ ಕಲಿಸಿಬೇಕೆಂದಿದ್ದೇವೆ. ಅದರ ಆರಂಭ ನಮ್ಮ ಶಾಸ್ತ್ರಿ ಇಂದ ಆಗ್ತಾ ಇರೋದು ನಮಗೆಲ್ಲಾ ಖುಷಿ ತಂದಿದೆ. ಒಂದೂವರೆ ತಿಂಗಳಿಂದ ಈತ ತನ್ನ ಎಲ್ಲಾ ಕೆಲಸಗಳನ್ನೂ ಮುಗಿಸಿ ಶ್ರದ್ದೆಯಿಂದ ಬೆಳಕಟ್ಟೆಯ ರೈತರಂಗ ತಂಡಕ್ಕೆ ನಾಟಕ ಕಟ್ಟಿದ್ದಾನೆ. ಕಲಾವಿದರೂ ಸಹಕರಿಸಿದ್ದಾರೆ.
ಒಂದು ಭಿನ್ನವಾದ ನಾಟಕ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ 28_01_2022 ಶುಕ್ರವಾರ ಸಂಜೆ 7 ಗಂಟೆಗೆ ನಡೆಯಲಿದೆ. ಬನ್ನಿ ಹೊಸತಾಗಿ ಕಲಿತು ನಾಟಕ ಮಾಡುತ್ತಿರುವ ರೈತ ಮಕ್ಕಳಿಗೆ ಬೆಂಬಲಿಸಿ.