ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನಲ್ಲಿ 3.50 ಲಕ್ಷ ಖಾಸಗಿ ಸಾಲ ಪಡೆದ ಚೆಕ್ಬೌನ್ಸ್ ಪ್ರಕರಣದಲ್ಲಿ ಹೆದ್ದೂರು ಹೊರಬೈಲಿನ ಮಂಜುಳಾ ಅವರಿಗೆ 6 ತಿಂಗಳ ಜೈಲುಶಿಕ್ಷೆ ವಿಧಿಸಿ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ ತೀರ್ಪು ನೀಡಿದೆ.
ಮಂಜುಳಾ ಅವರು ಕಟ್ಟೇಹಕ್ಕಲು ತುಂಬ್ರಮನೆಯ ಶಕುಂತಲಾ ಅವರಿಂದ 3.75 ಲಕ್ಷ ಸಾಲ ಪಡೆದಿದ್ದರು. ಸಾಲಕ್ಕೆ 3.50 ಲಕ್ಷದ ಚೆಕ್ ನೀಡಿದ್ದರು. ಆದರೆ ಅದು ಅಮಾನ್ಯಗೊಂಡಿತ್ತು.
ಈ ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಮಂಜುಳಾ ಅವರು 30 ದಿನಗಳೊಳಗೆ ಹಣ ನೀಡಬೇಕು. ಇಲ್ಲದಿದ್ದರೆ 6 ತಿಂಗಳು ಜೈಲುವಾಸ ಅನುಭವಿಸಬೇಕು ಎಂದು ತೀರ್ಪು ನೀಡಿದೆ. ಶಕುಂತಲಾ ಪರ ವಕೀಲ ಎಂ.ಸಿ. ಸಂಜಯ್ ವಾದ ಮಂಡಿಸಿದ್ದರು.