ಶಿವಮೊಗ್ಗ,ಜ.13:
ದೇಶದಾದ್ಯಂತ ಸಿಬಿಎಸ್‌ಇ ಶಾಲೆಗಳ ವೀರ್‌ಗಾಥಾ ಸ್ಪರ್ಧೆಯ ಸೂಪರ್ 25 ಮಕ್ಕಳ ಪಟ್ಟಿಯಲ್ಲಿ ಒಬ್ಬರಾಗಿ ಶಿವಮೊಗ್ಗ ಜಾವಳ್ಳಿಯ ಜ್ಞಾನದೀಪ ಸೀನಿಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ, ಶಿವಮೊಗ್ಗ ವಿನೋಬನಗದ ಯ ಶಿವಕುಮಾರ್ ಎಂ. ಆರ್ ಹಾಗೂ ವಿಜಯ ಏನ್. ಅವರ ಪುತ್ರಿ ಎಸ್.ಅಮೃತಾ ಆಯ್ಕೆಯಾಗಿದ್ದಾರೆ. ಬರುವ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಪ್ರಮುಖ ಅತಿಥಿ ಗೌರವಕ್ಕೆ ಆಯ್ಕೆಯಾಗಿರುವ ಎಸ್.ಅಮೃತಾಗೆ ಸಂಸದರಾದ ಬಿ. ವೈ.ರಾಘವೇಂದ್ರ ಅವರು ಇಂದು ಅಭಿನಂದಿಸಿದರು.


ರಕ್ಷಣಾ ಇಲಾಖೆಯು ಪ್ರತಿ ವರ್ಷ ಗ್ಯಾಲೆಂಟಿ ಅವಾರ್ಡ್ ಪ್ರಶಸ್ತಿಯ ಕುರಿತು ತಿಳಿವಳಿಕೆಯನ್ನು ದೇಶದ ಮಕ್ಕಳಿಗೆ ಮೂಡಿಸುವ ಉದ್ದೇಶದಿಂದ ವೀರರ ಸಾಧನೆಗಳನ್ನು ಕುರಿತ ಕವನ ರಚನೆ, ಲೇಖನ ಬರಹ, ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸುತ್ತದೆ.


ಅಮೃತಾ 9-10ನೇ ತರಗತಿ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ 25 ಮಕ್ಕಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಜತೆಗೆ ರಕ್ಷಣಾ ಇಲಾಖೆಯು ನೀಡುವ 10 ಸಾವಿರ ನಗದು ಬಹುಮಾನ ಮತ್ತು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಮುಖ ಅತಿಥಿಯಾಗಿ ಭಾಗವಹಿಸುವ ಗೌರವವನ್ನು ಪಡೆದುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ತಂದೆ ಶಿವಕುಮಾರ್ ಎಂ. ಆರ್ , ತಾಯಿ ವಿಜಯ ಏನ್.
ಸಿಂಡಿಕೆಟ್ ಸದಸ್ಯರಾದ ಬಳ್ಳೆಕೆರೆ ಸಂತೋಷ್, ಜಂಗಲ್ ಲಾಡ್ಜ್ ನಿರ್ದೇಶಕರಾದ ರಾಜೇಶ್ ಕಾಮತ್. ದೇವರಾಜ್ ಅರಸ್ ನಿಗಮದ ನಿರ್ದೇಶಕರಾದ ಮಾಲತೇಶ್ ಮತ್ತಿತರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!