![Coronavirus_illustration](https://tungataranga.com/wp-content/uploads/2021/12/Coronavirus_illustration.jpg)
ಶಿವಮೊಗ್ಗ, ಜ.೧೨;
ಶಿವಮೊಗ್ಗ ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ಹಾಗೂ ಓಮಿಕ್ರಾನ್ ಅದ್ಯಾವ ಬಗೆಯಲ್ಲಿ ಸದ್ದು ಮಾಡುತ್ತಿದೆ ಎಂದರೆ ಪ್ರತಿ ಶಾಲೆ, ವಿದ್ಯಾಸಂಸ್ಥೆ, ಶಿಕ್ಷಕರ ಬಳಗವನ್ನು ಹೌಹಾರುವಂತೆ ಮಾಡಿದೆ ಎಂದರೆ ಅಚ್ಚರಿ ಯಾಗಬಹುದು. ಓಂ ಶಕ್ತಿ ಯಾತ್ರೆ, ಸಾಮೋಹಿಕ ಕಾರ್ಯಕ್ರಮ, ಜನಪ್ರತಿನಿಧಿಗಳ ಉಡಾಫೆ ವರ್ತನೆ ಬೆಚ್ಚನೆಯ ಶಿವಮೊಗ್ಗದಲ್ಲಿ ತಣ್ಣಗಿನ ವಾತಾವರಣ ಮಂಡಿಸಿದೆ.
ತಣ್ಣಗಿದ್ದ ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿ ಓಂ, ಅಯ್ಯಪ್ಪ, ಓಟಿನ ಹರೀಕತ್ತು ಇಡೀ ಶಿವಮೊಗ್ಗ ಜಿಲ್ಲೆಯನ್ನು ಹಾಳು ಮಾಡಿದೆ. ಜನಪ್ರತಿನಿಧಿಗಳ ಉಡಾಫೆತನ ವನ್ನು ಸಹಿಸಿಕೊಂಡಿರುವ ಅಧಿಕಾರಿಗಳೇ ಇತ್ತ ಗಮನಿಸಿ. ನಾಯಕರಿಗೆ ಹೆದರೋದು ಜನಪ್ರತಿನಿಧಿಗಳಿಗೇ ಬೆದರೋದರ ಮದ್ಯೆ ಜನಸಾಮಾನ್ಯರನ್ನ ತಿರಸ್ಕರಿಸಿಸೋದು ಸರಿನಾ?
ಶಾಲೆ ವಿಷಯಕ್ಕೆ ಬಂದಿರೋದು ಇಂದಿನ ವರದಿ ಪ್ರಕಾರ ನಾಳೆ ಎಲ್ಲಾ ಶಾಲೆ ಕಾಲೇಜು ಬಂದ್ ಬೇಕಿತ್ತಾ…? ಮಕ್ಕಳು ಓದಬಾರದಾ? ದುಡ್ಡಿದ್ದವರ ಶಾಲೆ ನಡೆದು ಸರ್ಕಾರಿ ಶಾಲೆ ಬಾಗಿಲು ಹಾಕಬೇಕಾ?
ಶಿವಮೊಗ್ಗದ ರವೀಂದ್ರನಗರ, ವಿದ್ಯಾನಗರದ ಶಾಲೆಗಳೆರಡು ಬಂದ್ ಆಗಿವೆ. ಹಾಗೆಯೇ ಶಿವಮೊಗ್ಗ ನಗರದ ದುರ್ಗಿಗುಡಿ ಸರ್ಕಾರಿ ಶಾಲೆಯಲ್ಲಿಂದು ಸಮೋಹಿಕ ಚೆಕಪ್ ಮಾಡಿರುವ ಕತೆ ಕೇಳಿಬಂದಿದೆ. ಇಲ್ಲಿ ಯಾರಿಗೆ ಪಾಸೀಟೀವ್ ಬಂತು…?
ಡಿಹೆಚ್ಒ ಸಾಹೇಬರೇ ಮಾಡಿದ ಮಕ್ಕಳ ಸಾಮೂಹಿಕ ಕೊರೊನಾ ಚೆಕಪ್ ಎಲ್ಲಿಗೆ ಬಂತು. ಹಿಂದೆ ಓಂ ಶಕ್ತಿ ವಿಷಯದಲ್ಲಿ ಮಾಡಿದ ಥರ್ಮಲ್ ಸ್ಕ್ಯಾನಿಂಗ್ ಇಲ್ಲಿಯೂ ನಡೆಯಿತಾ.. ಭಯ ಹುಟ್ಟಿಸುವ ಕೆಲಸಕ್ಕೆ ಆರೋಗ್ಯ ಇಲಾಖೆ ಬೇಕಿತ್ತಾ..?
ಇಂದಿನ ವರದಿ ಪ್ರಕಾರ ಜನಸಾಮಾನ್ಯರು ಮಾಡುವ ಆರೋಪಗಳಿಗೆ, ಆಕ್ರೋಶಗಳಿಗೆ ಜನಪ್ರತಿನಿಧಿಗಳು ಉತ್ತರಿಸುವುದಿಲ್ಲ. ಕೊನೆಯ ಹಂತದಲ್ಲಿ ನೀವೇ ಅಂದರೆ ಸರ್ಕಾರ ಅಧಿಕಾರಿಗಳು ತಮ್ಮನ್ನು ತಾವು ಉಳಿಸಿಕೊಳ್ಳುವ ಕಾಯಕಕ್ಕೆ ಹೋಗದಿರಿ. ಜನರಿಗೋಸ್ಕರ ಕೆಲಸ ಮಾಡಿ…, ಮಿಕ್ಕೆಲ್ಲವನ್ನೂ ಜನ ಅನುಭವಿಸುತ್ತಾರೆ. ಲಾಕ್ ಡೌನ್ ಗೆ, ಇಂದಿನ ಶಿವಮೊಗ್ಗ ಜಗತ್ತು ಬೆದರಲು ಕಾರಣ ಯಾರು.., ನಮ್ಮ ಓದುಗರದೇ ನಿರ್ಧಾರ