ಶಿವಮೊಗ್ಗ, ಜ.08:
ಶಿವಮೊಗ್ಗ ನಗರದಾದ್ಯಂತ ಕೊರೋನಾದಿಂದ ಮುಕ್ತಿಯಾಗುವ ಕುರಿತು ಜನಜಾಗೃತಿ ಮೂಡಿಸುತ್ತಿರುವ ಮಹಾನಗರ ಪಾಲಿಕೆಯ ಆರೋಗ್ಯ ವಿಭಾಗ ಮಾಸ್ಕ್ ಬಳಕೆ ಬಗ್ಗೆ ತಿಳಿಹೇಳುವ ಜೊತೆಗೆ ಅಗತ್ಯವಿರುವೆಡೆ ಮಾಸ್ಕ್ ಹಾಕದಿರುವವರಿಗೆ ದಂಡ ಹಾಕಿದೆ.
ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಆರೋಗ್ಯ ವಿಭಾಗ ಮಾಸ್ಕ್ ಜಾಗೃತಿ ಮೂಡಿಸಲು ಬೀದಿಬೀದಿಗಳಲ್ಲಿ ತಂಡೋಪ ತಂಡವಾಗಿ ಸಂಚರಿಸುತ್ತಿದೆ.
ಲಾಕ್ ಡೌನ್ ನ ಇಂದೂ ಸಹ ತನ್ನ ಕಾಯಕ ಮುಂದುವರೆಸಿದೆ. ಮೊನ್ನೆ ಶಿವಮೊಗ್ಗದಲ್ಲಿ ಕೊರೋನ ಪಾಸಿಟಿವ್ 15 ಜನರಲ್ಲಿ ಕಾಣಿಸಿಕೊಂಡಿದೆ. ಈ ದಿಡೀರ್ ಹೆಚ್ಚಳವನ್ನ ನಿಯಂತ್ರಿಸಲು ಕೊರೋನ ಜಾಗೃತಿಗೆ ಪಾಲಿಕೆ ಆಯುಕ್ತ ಚಿದಾನಂದ ವಟಾರೆ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯ ನಡೆಸುತ್ತಿದೆ.
ಇತ್ತೀಚೆಗೆ ಪಾಲಿಕೆಯ ಆರೋಗ್ಯ ವಿಭಾಗ ಬಿ.ಹೆಚ್.ರಸ್ತೆಯಲ್ಲಿ ಮಾಸ್ಕ್ ಜಾಗೃತಿ ಮೂಡಿಸಿ 1500 ರೂ ದಂಡ ವಿಧಿಸಿತ್ತು. ಇಂದು ಸಹ ಪಾಲಿಕೆ ಈ ಮಾಸ್ಕ್ ಜಾಗೃತಿಯನ್ನ ಹೆಚ್ಚಿಸಿದೆ. ಅದೇ ಬಗೆಯಲ್ಲಿ ನಿನ್ನೆ ಬಿ.ಹೆಚ್ ರಸ್ತೆ ಮತ್ತು ದುರ್ಗಿಗುಡಿಗೆ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿ ಅಮೋಘ್ ಅವರ ನೇತೃತ್ವದಲ್ಲಿ ಮಾಸ್ಕ್ ಜಾಗೃತಿ ಮೂಡಿಸಿದೆ.
6 ಅಂಗಡಿಗಳಿಗೆ ಭೇಟಿ ನೀಡಿದ ಈ ಅಧಿಕಾರಿಗಳು 2000 ರೂ ದಂಡ ವಿಧಿಸಿದ್ದಾರೆ.
ಮಾಸ್ಕ್ ಹಾಕಿಕೊಳ್ಳಿ ಆರೋಗ್ಯ ಕಾಪಾಡಿಕೊಳ್ಳುವ ಜೊತೆ ದಂಡ ತಪ್ಪಿಸಿಕೊಳ್ಳಿ.