ಶಿವಮೊಗ್ಗ, ಜು.25:
ನಿಮಗೆ ಕೊರೊನಾ ಕಾಣಿಸಿಕೊಂಡರೆ ಯಾವುದೇ ಭಯ ಪಡಬೇಡಿ. ಏಕೆಂದರೆ ಅದು ನಮ್ಮ ನಡುವಿನ ಅಂತಸತ್ವದ ಜೊತೆಗೆ ಕಾಲಕಳೆದರೆ ಕೇವಲ ಒಂದು ವಾರದೊಳಗೆ ಗುಣಮುಖವಾಗುವ ಎಲ್ಲ ಲಕ್ಷಣಗಳು ಶಿವಮೊಗ್ಗದ ಈ ಆಸ್ಪತ್ರೆಯಲ್ಲಿ ಕಂಡುಬಂದಿದೆ. ನಿಮಗೆ ಅಕಸ್ಮಾತ್ ಕೊರೊನಾ ಬಂದಿದೆ ಎಂದರೆ ಇಲ್ಲಿ ಬೇಜಾರಾಗಬೇಡಿ. ನೀವು ಇಷ್ಟು ವ್ಯವಸ್ಥೆಗಳನ್ನು ಸಿದ್ದಪಡಿಸಿಕೊಂಡು ಸಿದ್ದರಾಗಿ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಅಥವಾ ಗಾಜನೂರಿನ ಮುರಾರ್ಜಿ ಶಾಲೆ ವಿದ್ಯಾ ಕೇಂದ್ರಕ್ಕೆ ಭೇಟಿ ನೀಡಲು ಅಣಿಯಾಗುವ ಮುನ್ನ ಇಷ್ಟು ವಸ್ತುಗಳು ನಿಮ್ಮಲ್ಲಿರಲಿ. ಏಕೆಂದರೆ ಅಲ್ಲಿ ದೊರೆಯುವ ವ್ಯವಸ್ಥಿತವಾದ ಚಿಕಿತ್ಸೆ ಫಲಪ್ರಧವಾಗಲು ಇಷ್ಟು ಸಾಮಗ್ರಿ ಇರಲಿ.
ಸಾಮಗ್ರಿಗಳು:
ಎರಡು ಬೆಡ್ಶೀಟ್
ಒಂದು ಒಂದು ತಟ್ಟೆ
ಒಂದು ಲೋಟ
4 ಜೊತೆ ಬಟ್ಟೆ
ಒಂದು ಸೋಪ್
ಒಂದು ಟವಲ್
ಒಂದು ಪೇಸ್ಟ್, ಭ್ರಷ್…
ಇವಿಷ್ಟು ನಿಮ್ಮ ಜೊತೆಗಿದ್ದರೆ ಸಾಕು ಅಲ್ಲಿ ಉಳಿದೆಲ್ಲಾ ವಸ್ತುಗಳು ದೊರೆಯುತ್ತವೆ. ನೀವು ಗುಣಮುಖರಾಗಿ ಬರುತ್ತೀರಿ. ನಿಮ್ಮ ಶಕ್ತಿಯ ಜೊತೆಗೆ ಕೊರೊನಾ ಅಂತಹ ಮಹಾಮಾರಿಯನ್ನು ತುಂಬಾ ಸಲುವಾಗಿ ಹತ್ತಿಕ್ಕಲು ಸುಲಭ ಸಾಧ್ಯ. ಯಾವುದೇ ಕಾರಣಕ್ಕೂ ಗಾಬರಿಯಾಗುವುದು ಬೇಡ ಶಿವಮೊಗ್ಗ ವ್ಯವಸ್ಥೆ ಇದಕ್ಕೆ ಪೂರಕವಾಗಿ ಸಾಕಷ್ಟು ಕ್ರಮ ಕೈಗೊಂಡಿದೆ.

ಶಿವಮೊಗ್ಗ ಜಿಲ್ಲಾ ವ್ಯವಸ್ಥೆಯ ಮನವಿ ಪ್ರತಿ ಇಲ್ಲಿದೆ

By admin

ನಿಮ್ಮದೊಂದು ಉತ್ತರ

error: Content is protected !!