ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕಾರ್ಯಚಟುವಟಿಕೆಗಳ ಆರಂಭೋತ್ಸವಕ್ಕೆ ಮೆರಗು ನೀಡಲು ಸಾಹಿತ್ಯ ಸಂಭ್ರಮ ಕವಿ, ಕಾವ್ಯ, ನೃತ್ಯೋತ್ಸವ ನಡೆಸಲು ಯೋಜಿಸಿದೆ.
ಕವಿಗಳು ಉತ್ತಮ ಕವನಗಳನ್ನು ರಚಿಸಿ ಕಳುಹಿಸಲು ಕೋರುತ್ತೇವೆ. ಆಯ್ದ ಕವನಗಳಿಗೆ ರಾಗ ಸಂಯೋಜನೆ ನೃತ್ಯ ಸಂಯೋಜನೆ ಮಾಡಿಸಲಾಗುವುದು. ಕವಿಗಳು ಪ್ರಚಲಿತ ವಿದ್ಯಮಾನಗಳನ್ನು ಕಾವ್ಯವಾಗಿಸಿ ಕಳುಹಿಸಲು ಕೋರುತ್ತೇವೆ.
ಆಸಕ್ತರು ಕಾರ್ಯಕ್ರಮದ ಉದ್ದೇಶವನ್ನು ಅರಿತು ಸಹಕರಿಸಲು ಕೋರುತ್ತೇವೆ. ನಿಮ್ಮ ಕವನಗಳು ಡಿಸೆಂಬರ್ 10 ರೊಳಗೆ ಈ ಮುಂದಿನ ವಿಳಾಸಕ್ಕೆ ತಲುಪುವಂತೆ ಕಳುಹಿಸಲು ಕೋರುತ್ತೇವೆ. ಡಿ. ಮಂಜುನಾಥ, ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾಧಿಕಾರಿಗಳ ಕಚೇರಿ ಆವರಣ, ಶಿವಮೊಗ್ಗ, ಮೊಬೈಲ್ ಸಂಖ್ಯೆ : 9449552795.
