ಶಿವಮೊಗ್ಗ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ಆರ್.ಕೆ.ವಿ.ವೈ ಯೋಜನೆಯಡಿ ಕುರಿ/ಮೇಕೆ ಸಾಕಾಣಿಕೆಗಾಗಿ ಸಾಲ ಸೌಲಭ್ಯ ಪಡೆಯಲು ಆಸಕ್ತರಿರುವ ನಿಗಮದಲ್ಲಿ ನೊಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಪರಿಶಿಷ್ಟ ಜಾತಿ ಹಾಗೂ ಸಾಮಾನ್ಯ ವರ್ಗದ 18 ರಿಂದ 60 ವರ್ಷ ವಯೋಮಿತಿಯೊಳಗಿನ ಮಹಿಳಾ ಸದಸ್ಯರಿಂದ ಹಾಗೂ ಸದಸ್ಯರಲ್ಲದ ಕುರಿ ಸಾಕಾಣೆಕೆದಾರರಿಂದ ಅರ್ಜಿ ಆಹ್ವಾನಿಸಿದೆ.
ಈ ಯೋಜನೆಯಲ್ಲಿ ಒಟ್ಟು ಘಟಕದ ಮೊತ್ತ ರೂ. 70,000/- ಗಳಾಗಿದ್ದು, ಸಾಲದ ಮೊತ್ತ/ಫಲಾನುಭವಿಗಳ ವಂತಿಕೆ ರೂ. 35000/- ಹಾಗೂ ಸಹಾಯಧನ ಮೊತ್ತ ರೂ. 35000/- ಆಗಿರುತ್ತದೆ. ಆಸಕ್ತರು ಅರ್ಜಿ ನಮೂನೆಯನ್ನು ಆಯಾ ತಾಲೂಕು ಸಹಾಯಕ ನಿರ್ದೇಶಕರುಗಳ ಕಚೇರಿ/ಕುರಿಗಾರರ ಸಂಘದ ಕಚೇರಿಗಳಿಂದ ಪಡೆದು, ಭರ್ತಿ ಮಾಡಿದ ಅರ್ಜಿಯೊಂದಿಗೆ ಸೂಕ್ತ ದಾಖಲೆಗಳನ್ನು ಲಗತ್ತಿಸಿ ದಿ: 30/11/2021ರೊಳಗಾಗಿ ಸಲ್ಲಿಸುವಂತೆ ನಿಗಮದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ-28182-223099, ಭದ್ರಾವತಿ -08282-266462, ಶಿಕಾರಿಪುರ- 08187-222474, ಸೊರಬ-08184-272309, ಸಾಗರ-08183-226603, ಹೊಸನಗರ-08185-221353 ಹಾಗೂ ತೀರ್ಥಹಳ್ಳಿ-08181-228521 ಗಳನ್ನು ಸಂಪರ್ಕಿಸುವುದು.

By admin

ನಿಮ್ಮದೊಂದು ಉತ್ತರ

You missed

error: Content is protected !!