ಶಿವಮೊಗ್ಗ: ಕಾಂಗ್ರೆಸ್ ಗೆ ನಾಯಕತ್ವವೂ ಇಲ್ಲ, ಸಂಘಟನೆಯೂ ಇಲ್ಲ, ಸಾಧನೆಯೂ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ‌ ಸಚಿವ ಕೆ.ಎಸ್.ಈಶ್ವರಪ್ಪ ಶುಕ್ರವಾರ ಹೇಳಿಕೆ ನೀಡಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸಂಘಟನೆ, ಸಾಧನೆ, ನಾಯಕತ್ವದ ಆಧಾರದ ಮೇಲೆ‌ ಚುನಾವಣೆ ನಡೆಸುತ್ತಿದ್ದೇವೆ. ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಬಿಜೆಪಿ ನಾಯಕರ ಬಗ್ಗೆ ವೈಯಕ್ತಿಕ ಟೀಕೆ ಮಾಡುತ್ತಿರುವುದು ಸರಿಯಲ್ಲ. ಹಾನಗಲ್ ಹಾಗೂ ಸಿಂಧಗಿ ಎರಡು ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ. ಬೇಕಿದ್ದರೆ ಅವರ ಸರ್ಕಾರದ ಅವಧಿಯಲ್ಲಿ‌ ಮಾಡಿದ ಸಾಧನೆಗಳನ್ನು ಜನರ ಮುಂದಿಟ್ಟು ಚುನಾವಣೆ ನಡೆಸಲಿ ಎಂದು ಸವಾಲೆಸೆದರು.


ಕಾಂಗ್ರೆಸ್ ನಲ್ಲಿ ನಾಯಕತ್ವವೇ ಇಲ್ಲ. ಸೋನಿಯಾ ಇಲ್ಲವೇ ರಾಹುಲ್ ಗಾಂಧಿ ಹೆಸರು ಹೇಳುತ್ತಾರೆಯೇ? ಡಿ.ಕೆ.ಶಿವಕುಮಾರ್ ಹೆಸರು ಹೇಳಿದರೆ ಸಿದ್ದರಾಮಯ್ಯ ಅವರಿಗೆ ಆಗುವುದಿಲ್ಲ. ಸಿದ್ದರಾಮಯ್ಯ ಹೆಸರು ಹೇಳಿದರೆ ಡಿ.ಕೆ.ಶಿವಕುಮಾರ್ ಗೆ ಆಗುವುದಿಲ್ಲ. ಇನ್ನೆಲ್ಲಿಯ ನಾಯಕತ್ವ ಎಂದು ಪ್ರಶ್ನಿಸಿದ್ದಾರೆ.
ಹಾನಗಲ್ ಹಾಗೂ ಸಿಂಧಗಿಯಲ್ಲಿ ಕಾಂಗ್ರೆಸ್ ಗೆ ನಾಯಕತ್ವವೂ ಇಲ್ಲ, ಸಂಘಟನೆಯೂ ಇಲ್ಲ‌. ಎರಡು ಕ್ಷೇತ್ರಗಳಲ್ಲಿ ಮೂರೂ ಪಕ್ಷದ ಅಭ್ಯರ್ಥಿಗಳೂ ಸ್ಪರ್ಧಿಸಿದ್ದಾರೆ. ಎಲ್ಲರೂ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ವೈಯಕ್ತಿಕ ಟೀಕೆಗೆ ಇಳಿದಿರುವುದು ಸರಿಯಲ್ಲ ಎಂದು ಹೇಳಿದರು.

ಕೊರೊನಾ ಲಸಿಕಾ ಅಭಿಯಾನದ ವಿಷಯದಲ್ಲಿ‌ ಮುಂದುವರಿದ ದೇಶಗಳೇ ಭಾರತ ಹಾಗೂ ನರೇಂದ್ರ‌ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿವೆ. ಕೊರೊನಾ ಲಸಿಕೆ ಸಾಧನೆ ನನ್ನಿಂದಲೇ ಆಗಿದ್ದು ಎಂದು ನರೇಂದ್ರ ಮೋದಿಯವರು ಎಲ್ಲಿಯೂ ಹೇಳಿಲ್ಲ. ಬದಲಿಗೆ ಲಸಿಕೆ ತಯಾರಿಸಿದ ವಿಜ್ಞಾನಿಗಳು, ಡಾಕ್ಟರ್ ಗಳು, ನರ್ಸ್ ಗಳು, ಡಿ ದರ್ಜೆ ನೌಕರರು ಹಾಗೂ ಸಂಘಟನೆಗಳನ್ನು ಹೊಗಳುತ್ತಿದ್ದಾರೆ. ನರೇಂದ್ರ‌ ಮೋದಿಯಂಥವರು ನಮ್ಮ ಪ್ರಧಾನಿಯಾಗಿರುವುದು ನಮಗೆ ಹೆಮ್ಮೆ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!