
ಸ್ಪೇನ್: 112 ವರ್ಷ ವಯಸ್ಸಿನ ಅಜ್ಜ ಪ್ರಪಂಚದಲ್ಲಿ ಜೀವಂತವಿರುವ ಹಿರಿಯ ವ್ಯಕ್ತಿ ಎಂದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸೇರಿದ್ದಾರೆ.
ಸ್ಪೇನ್ ದೇಶದ ಸ್ಯಾಟರ್ನಿನೋ ಡೆ ಲಾ ಫ್ಯೂಂಟೆ ಗಾರ್ಸಿಯಾ ಗಿನ್ನಿಸ್ ದಾಖಲೆ ಸೇರಿದ ಅಜ್ಜ.
1909 ಫೆಬ್ರವರಿ 11ರಂದು ಜನಿಸಿದ ಗಾರ್ಸಿಯಾ 14 ಮೊಮ್ಮಕ್ಕಳು ಮತ್ತು 22 ಮರಿ ಮೊಮ್ಮಕ್ಕಳನ್ನು ಒಳಗೊಂಡ ದೊಡ್ಡ ಕುಟುಂಬವನ್ನು ಹೊಂದಿದ್ದಾರೆ.
‘ಶಾಂತ ಜೀವನ’ ನಡೆಸುತ್ತಿರುವುದೇ ದೀರ್ಘಾಯುಷ್ಯದ ಗುಟ್ಟು ಎಂದು ಗಾರ್ಸಿಯಾ ಹೇಳಿದ್ದಾರೆ.
ಸಂಗ್ರಹ ಸುದ್ದಿ: ತುಂಗಾತರಂಗ ದಿನಪತ್ರಿಕೆ, ೯೪೪೮೨೫೬೧೮೩