ಕಣ್ಮುಚ್ಚಿ ಕುಳಿತ ಸರ್ಕಾರ..!

ತೀರ್ಥಹಳ್ಳಿ,ಸೆ.21:
ತಾಲ್ಲೂಕಿನ ಕೋಣಂದೂರು ದೇಮ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೊರೆ ಬೈಲ್ ಗ್ರಾಮದ ಬಡ ರೈತ
ಅಶೋಕ್ ಟಿ. ಆರ್. (50) ಸಾಲಬಾಧೆ ತಾಳಲಾರದೆ ಮನನೊಂದು ನಿನ್ನೆ ಸಂಜೆ 4ರ ಹೊತ್ತಿಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.


ಅಶೋಕ್ ರೈತಾಪಿ ಜೀವನ ನಡೆಸುತ್ತಿದ್ದು, ಇತ್ತೀಚೆಗೆ ಶುಂಠಿ ಕೃಷಿಯನ್ನು ಮಾಡಿ ಬ್ಯಾಂಕ್ ಇತರೆ ಖಾಸಗಿ ವ್ಯಕ್ತಿಗಳ ಬಳಿ ಸಾಲ ಮಾಡಿ ಅದರ ಸುಳಿಗೆ ಸಿಲುಕಿದ್ದರು.
ಸಾಲದ ಬಾಧೆ ತಾಳಲಾರದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಮೂಲದವರು ತಿಳಿಸಿದ್ದಾರೆ.
ಅಶೋಕ್ರವರು ಪತ್ನಿ ಮತ್ತು ಓರ್ವ ಪುತ್ರ ಹಾಗೂ ಕುಟುಂಬ ವರ್ಗವನ್ನು ಬಿಟ್ಟು ಅಗಲಿದ್ದಾರೆ.

ದುರಂತ ಗೊತ್ತೇ…!
ಅಶೋಕ್ ಅವರ ಪುತ್ರ ವಿಕಲಚೇತನರಾಗಿದ್ದು, ತುಮಕೂರಿನ ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಕಲಿಯುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಅಶೋಕ್ ರವರ ಈ ಸಾವಿನಿಂದ ಕುಟುಂಬ ಕಂಗಾಲಾಗಿದ್ದು ಇವರ ಸಂಕಷ್ಟಕ್ಕೆ ಸರ್ಕಾರ ನೆರವು ನೀಡಲು ಧಾವಿಸಬೇಕಿದೆ. ಸುಮಾರು ನಾಲ್ಕು ಲಕ್ಷದಷ್ಟು ಬೆಳೆಗಾಗಿ ಸಾಲ ಮಾಡಿದ್ದರು.


ಕರೋನ ಸಂಕಷ್ಟದ ಇತ್ತೀಚಿನ ದಿನಗಳಲ್ಲಿ ಈ ರೀತಿ ಸಣ್ಣಪುಟ್ಟ ರೈತರು ಕೃಷಿ ಚಟುವಟಿಕೆಗಳಲ್ಲಿ ಸಂಕಷ್ಟಕ್ಕೀಡಾಗಿ ಆರ್ಥಿಕ ಸಂಕಷ್ಟದಲ್ಲಿದ್ದು ಈ ಬಡ ರೈತರ ಸಂಕಷ್ಟಗಳಿಗೆ ರಾಜ್ಯ ಸರಕಾರ ಕೇಂದ್ರ ಸರ್ಕಾರ ಮತ್ತು ತಾಲ್ಲೂಕು ಆಡಳಿತ ವಿಶೇಷ ಗಮನ ಹರಿಸಿ ಅವರಿಗೆ ವಿಶೇಷ ಯೋಜನೆಗಳ ಮೂಲಕ ನೆರವಿಗೆ ಧಾವಿಸಬೇಕಾದ ಅಗತ್ಯವಿದೆ.
ಅಲ್ಲದೆ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್, ಖಾಸಗಿ ಲೇವಾದೇವಿ,
ಮತ್ತು ಸಂಘ ಸಂಸ್ಥೆಯವರು ಮಾನವೀಯತೆ ಮರೆತು ಮನೆ ಬಾಗಿಲಿಗೆ ಬಂದು ಬಾಯಿಗೆ ಬಂದಂತೆ ಮಾತನಾಡಿ ಮಾನ ಹಾನಿ ಮಾತುಗಳನ್ನಾಡಿ ಸಾಲ ವಸೂಲಿಗೆ ಮುಂದಾಗುತ್ತಿದ್ದು,
ಇದರಿಂದ ಕೆಲ ರೈತರು ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗುವಂತಹ ಇಂಥ ದುರ್ಘಟನೆಗಳು ಹೆಚ್ಚಾಗುವ ಮುನ್ನ ಈ ಬಗ್ಗೆ ಆಡಳಿತ ಗಮನ ಹರಿಸಬೇಕಿದೆ.
ವರದಿ: ತೀರ್ಥಹಳ್ಳಿ ಮಿತ್ರ ಪತ್ರಿಕೆ, ಮಂಜು

By admin

ನಿಮ್ಮದೊಂದು ಉತ್ತರ

error: Content is protected !!