ಶಿವಮೊಗ್ಗ, ಸೆ.14:
ಶಿವಮೊಗ್ಗ ಜಿಲ್ಲೆಯ ಕೊರೊನಾ ಸಂಖ್ಯೆ ದಶಕದೊಳಗಿರುವುದು ಹರುಷ ತಂದಿದೆ. ಪರೀಕ್ಷೆ ಸಂಖ್ಯೆ ನಾಲ್ಕು ಸಾವಿರದಷ್ಟಾಗಿದ್ದರೂ ಪಾಸೀಟೀವ್ ಇಳಿದಿರುವುದು ಕುಶಿಯ ಸಂಗತಿ. ರಾಜ್ಯವ್ಯಾಪಿ ಇಂತಹ ಬದಲಾವಣೆಯಾಗಿದೆ.
ನಿನ್ನೆ ಜಿಲ್ಲೆಯಲ್ಲಿ 20 ಜನರಲ್ಲಿ ಪತ್ತೆಯಾಗಿದ್ದ ಕೊರೋನಾ ಪಾಸಿಟಿವ್ ಇಂದು ಕೇವಲ 6 ಜನರಲ್ಲಿ ಮಾತ್ರ ಕಾಣಿಸಿಕೊಂಡಿದೆ.
ಎರಡನೇ ಅಲೆಯಲ್ಲಿ ಅತ್ಯಂತ ಕನಿಷ್ಠ ಸೋಂಕು ಪತ್ತೆಯಾದ ದಾಖಲೆ ಇದಾಗಿದೆ.
4494 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು ಇದರಲ್ಲಿ 3032 ಜನರಿಗೆ ನೆಗೆಟಿವ್ ಬಂದಿದೆ. ಇದುವರೆಗೂ ಜಿಲ್ಲೆಯಲ್ಲಿ ಸೋಂಕಿನಿಂದ ಸಾವಿನ್ನಪ್ಪಿದವರ ಸಂಖ್ಯೆ 1064 ಏರಿಕೆಯಾಗಿದ್ದು ಒಬ್ಬರು ಇಂದು ಸೋಂಕಿಗೆ ಬಲಿಯಾಗಿದ್ದಾರೆ.
38 ಜನ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. 05 ಜನ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 08 ಜನ ಸೋಂಕಿನಿಂದ ದಾಖಲಾಗಿದ್ದಾರೆ. 126 ಜನ ಮನೆಯಲ್ಲಿಯೇ ಐಸೋಲೇಷನ್ ಆಗಿದ್ದಾರೆ. ಒಟ್ಟು 183 ಜನರಲ್ಲಿ ಸೋಂಕು ಸಕ್ರಿಯವಾಗಿದೆ.
ಕಾಲೇಜಿನ ವಿದ್ಯಾರ್ಥಿ/ನಿಯರು ಮತ್ತು ಸಿಬ್ಬಂದಿಗಳನ್ನ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದೆ. ಇವತ್ತು 00 ವಿದ್ಯಾರ್ಥಿ/ನಿಯರನ್ನ ಕೊರೋನ ಟೆಸ್ಟ್ ಗೆ ಒಳಪಡಿಸಲಾಗಿದೆ, ಹಿಂದಿನ ಪರೀಕ್ಷೆಯ 02 ವಿದ್ಯಾರ್ಥಿಗಳಿಗೆ ಕೊರೋನ ಪಾಸಿಟಿವ್ ಬಂದಿದೆ. ಇವತ್ತು 00 ಸಿಬ್ಬಂದಿಗೆ ಕೊರೋನ ಪಾಸಿಟಿವ್ ಬಂದಿದೆ ಎಂದು ಬುಲಿಟಿನ್ ತಿಳಿಸಿದೆ.
ತಾಲೂಕವಾರು ಹೀಗಿದೆ
ಶಿವಮೊಗ್ಗ: 01,
ಭದ್ರಾವತಿ: 01,
ಶಿಕಾರಿಪುರ: 00, ತೀರ್ಥಹಳ್ಳಿ:04,
ಸೊರಬ: 00,
ಹೊಸನಗರ:00,
ಸಾಗರ: 00,
ಹೊರಜಿಲ್ಲೆ: 00