ಶಿವಮೊಗ್ಗ,ಆ.29:
ಮಾಜಿ ಸಿಎಂ ಯಡಿಯೂರಪ್ಪ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಶಿವಮೊಗ್ಗದಲ್ಲಿ ತಂಗಿದ್ದಾರೆ. ವಿನೋಬನಗರದಲ್ಲಿರುವ ಯಡಿಯೂರಪ್ಪ ನಿವಾಸಕ್ಕೆ ಇಂದು ಸಚಿವ ಕೆ.ಎಸ್. ಈಶ್ವರಪ್ಪ ದಿಢೀರ್ ಭೇಟಿ ನೀಡಿ ಉಪಾಹಾರ ಸೇವಿಸಿದ್ದಾರೆ. ಇದು ನಾನಾ ಪ್ರಶ್ನೆಗಳನ್ನು ಹುಟ್ಟಿಸಿದೆ.
ಈ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿ ವಿಚಾರಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಯಡಿಯೂರಪ್ಪರನ್ನು ಭೇಟಿಯಾಗಿ ತಮ್ಮ ಬೇಡಿಕೆ ಈಡೇರಿಸುವಂತೆ ಸಿಮ್ಸ್ ನ ಗುತ್ತಿಗೆ ನೌಕರರು ಮನವಿ ಮಾಡಲು ಬಂದಿದ್ದರು. ಅವರಿಂದ ಮನವಿ ಸ್ವೀಕರಿಸಿದ ಯಡಿಯೂರಪ್ಪ ನಂತರ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಈ ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹರಿಸುವಂತೆ ತಿಳಿಸಿದರು.
ಬೇಟಿಯ ನಡುವಿನ ಚಿತ್ರಗಳು ಹೊಸ ಭಾಷೆ ಬರೆಯುತ್ತಿವೆಯೇನೋ ಅನಿಸುತ್ತಿದೆ.
*ಕುವೆಂಪು ರಸ್ತೆಯಲ್ಲಿ ಮಳಿಗೆಗಳು ಮಾರಾಟಕ್ಕಿವೆ*
ಶಿವಮೊಗ್ಗ ಕುವೆಂಪು ರಸ್ತೆ, ಎನ್. ಯು ಆಸ್ಪತ್ರೆ ಹತ್ತಿರದಲ್ಲಿ, ಮುಖ್ಯ ರಸ್ತೆಗೆ ಹೊಂದಿಕೊಂಡ 14*12 ಅಳತೆಯ ಎರಡು ಅಂತಸ್ತಿನ 2 ಆರ್.ಸಿ.ಸಿ ಮಳಿಗೆಗಳ ಕಟ್ಟಡ ಮಾರಾಟಕ್ಕಿದೆ.
ಸಂಪರ್ಕಿಸಿ
9902415817, 9900554393
ಹಾವು ಮುಂಗುಸಿಯಂತಿದ್ದ ಬಿಜೆಪಿಯ ಈ ಹಿರಿಯ ನಾಯಕರಿಬ್ಬರ ಭೇಟಿ ರಾಜ್ಯದ ಜನರಲ್ಲಿ ಕುತೂಹಲ ಮೂಡಿಸಿದೆ. ಹಿಂದೆ ಸಿಎಂ ಆಗಿದ್ದ ಯಡಿಯೂರಪ್ಪ ಅವರು ಗ್ರಾಮಿಣಾಭಿವೃದ್ಧಿ ಇಲಾಖೆ ಅನುದಾನವನ್ನು ತಮ್ಮ ಗಮನಕ್ಕೆ ತರದೇ ಹಂಚಿಕೆ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಈಶ್ವರಪ್ಪ ಮಾಹಿತಿ ಕೇಳಿದ್ದರು.
ನಂತರದಲ್ಲಿ ಇಬ್ಬರ ನಡುವೆ ಮಾತುಕತೆ ಅಷ್ಟಕಷ್ಟೇ ಎನ್ನುವಂತಾಗಿತ್ತು. ಕಾಟಾಚಾರಕ್ಕಷ್ಟೇ ಪರಸ್ಪರ ವೇದಿಕೆ ಹಂಚಿಕೊಳ್ಳುತ್ತಿದ್ದ ಉಭಯ ನಾಯಕರ ಇಂದಿನ ಭೇಟಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.