ಶಿವಮೊಗ್ಗ, ಆ.28:
ಶಿವಮೊಗ್ಗ ವಿನೋಬನಗರ ನೂರು ಅಡಿ ರಸ್ತೆ ಶಿವಾಲಯ ಮುಂದಿನ ಎಸ್ ಬಿ ಎಂ ಎದುರು ಲೋಡು ತುಂಬಿದ ದೊಡ್ಡ ಲಾರಿಯ ಹಿಂಬದಿ ಗಾಲಿಗೆ ಸಿಲುಕಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವುಕಂಡ ಘಟನೆ ಇಂದು ಬೆಳಿಗ್ಗೆ ಎಂಟು ಮುವತ್ತರ ಹೊತ್ತಿಗೆ ನಡೆದಿದೆ.
ಶಿವಮೊಗ್ಗ ಕೃಷಿ ನಗರ ನಿವಾಸಿ ಹಾಗೂ ಶಿವಮೊಗ್ಗ ಗೋಪಾಳದ khb ಸರ್ಕಾರಿ ಶಾಲೆಯ ಶಿಕ್ಷಕರಾದ ರಂಗನಾಥ್ ಎಂಬ 47 ವರುಷ ವಯಸ್ಸಿನ ವ್ಯಕ್ತಿ ಸಾವು ಕಂಡ ದುರ್ದೈವಿ ಎಂದು ಗುರುತಿಸಲಾಗಿದೆ.
ಸ್ಮಾರ್ಟ್ ಸಿಟಿ ಕಾಮಗಾರಿ ಹೆಸರಿಲ್ಲಿ ರಸ್ತೆಯ ದುರವಸ್ಥೆಯಿಂದ ಈ ಘಟನೆ ನಡೆದಿದೆ.
ವ್ಯವಸ್ಥಿತವಾದ ಹೆಲ್ಮೆಟ್ ಹಾಕಿದ್ದರೂ ಸಹ ಭಾರ ಲಾರಿಯ ಚಕ್ರ ಹತ್ತಿದ್ದರಿಂದ ಇಡೀ ತಲೆಯ ಭಾಗ ಛಿದ್ರವಾಗಿದೆ.
ಜನರ ಪ್ರಾಣ ತಗೆಯುವ ಇಂತಹ ಅರ್ಧಂಬರ್ಧ ಅಭಿವೃದ್ದಿಯ ಸ್ಮಾರ್ಟ್ ಸಿಟಿ ಹೆಸರಿನ ಕಾಮಗಾರಿಗಳು ಬೇಕಿತ್ತೇ….? ಇನ್ನು ಮೇಲಷ್ಟೆ ವಿವರ ಸಿಗಬೇಕಿದೆ. ಸಂಚಾರಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.