ಶಿವಮೊಗ್ಗದಲ್ಲಿನ ಕಥೆ ಇದು…!
ಶಿವಮೊಗ್ಗ:
ಇವರು ಪ್ರೇಮಿಗಳಾ, ಜೀವನ ಅರಿತವರಾ…? ಶಿವಮೊಗ್ಗ ಸರಹದ್ದಿನಲ್ಲಿ ಇಂತಹದೊಂದು ಘಟನೆ ನಡೆದಿದೆ. ನರ್ಸಿಂಗ್ ಓದುತ್ತಿರುವ ಯುವತಿ ಸಾವು ಕಂಡಿದ್ದಾಳೆ. ಆತ್ಮಹತ್ಯೆಗೆ ಪ್ರಯತ್ನಿಸಿದ ಆ ಯುವ ಯುವಕ ಸಾವು ಬದುಕಿನ ಮದ್ಯೆ ಇದ್ದಾನೆ.
ಇಡೀ ಘಟನೆ ವಿವರ: ಈ ಮಾಹಿತಿ ಪೊಲೀಸ್ ಇಲಾಖೆಯದು
ನಂಜಪ್ಪ ಲೈಫ್ ಕೇರ್ ನ ನರ್ಸಿಂಗ್ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ, 21 ವರ್ಷದ ಯುವತಿಯು ದಿನಾಂಕಃ-25-08-2021ರಂದು ಕಾಣೆಯಾಗಿರುವ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿರುತ್ತದೆ. ನಂತರ ದಿನಾಂಕ 26-08-2021 ರಂದು ಯುವತಿಯ ತಂದೆ ತನ್ನ ಮಗಳನ್ನು ಆಕೆಯ ಸ್ನೇಹಿತ ಶಿವಮೂರ್ತಿ, 21 ವರ್ಷ, ತಳಲೆ ಗ್ರಾಮ, ಹೊಸನಗರ ಶಿವಮೊಗ್ಗದಿಂದ ನೆರಲಿಗೆ ಕಳೆಸೆ ಗ್ರಾಮದ ಹೊಸಕೆರೆ ಕಾಡಿಗೆ ಕರೆದುಕೊಂಡು ಹೋಗಿ ಪ್ರೀತಿಸುವಂತೆ ಒತ್ತಾಯಿಸಿದ್ದು, ನಿರಾಕರಿಸಿದರಿಂದ ಅವಳ ಕುತ್ತಿಗೆಗೆ ಚೂಡಿದಾರ್ ವೇಲ್ ನಿಂದ ಸುತ್ತಿ ಕೊಲೆ ಮಾಡಿರುತ್ತಾನೆಂದು ನೀಡಿದ ದೂರಿನ ಮೇರೆಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ. ಸದರಿ ಆರೋಪಿಯು ಯುವತಿಯನ್ನು ಕೊಲೆ ಮಾಡಿದ ನಂತರ ತಾನೂ ಸಹಾ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ದೂರು ದಾಖಲಾತಿ ಮಾಹಿತಿ ಇದು.