ಬೆಂಗಳೂರು,ಅ.29: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಸಿದ್ದವಾಗುತ್ತಿರುವ ರಾಜ್ಯದ ಜನತೆಗೆ ಸರ್ಕಾರ ಬಿಗ್ ಶಾಕ್ ನೀಡಿದೆ. ಹಾಲಿನ ದರ ಹೆಚ್ಚಳ ವಿಚಾರದಲ್ಲಿ ಸಂಪುಟ ತೆಗೆದುಕೊಂಡಿರುವ ನಿರ್ಧಾರ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆಯಾದಂತಾಗಿದೆ.
ಗುರುವಾರ (ಅ.29) ರಂದು ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಹಾಲಿನ ದರ ಹೆಚ್ಚಳದ ಬಗ್ಗೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಹಾಲಿನ ದರ 8 ರೂ. ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಆ ಮೂಲಕ ಗ್ರಾಹಕರಿಗೆ ಸರ್ಕಾರ ಹಬ್ಬದ ಸಂದರ್ಭದಲ್ಲೇ ಶಾಕ್ ನೀಡಿದೆ.
8 ರೂಪಾಯಿ ಪೈಕಿ ರೈತರಿಗೆ 7 ರೂಪಾಯಿ ಮತ್ತು ಉಳಿದ 1 ರೂಪಾಯಿ ಒಕ್ಕೂಟಗಳಿಗೆ ಸಿಗಲಿದೆ. ಪರಿಸ್ಕೃತ ದರ ಇದೇ ನವೆಂಬರ್ 1ರಿಂದ ಜಾರಿಗೆ ಬರಲಿದೆ.
ಈ ಮೊದಲು ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಹೆಚ್ಚಳಕ್ಕೆ ತಾತ್ವಿಕ ಅನುಮೋದನೆ ನೀಡಲಾಗಿತ್ತು. ಆದರೆ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಕಾರಣಕ್ಕೆ ಎರಡು ದರ ಏರಿಕೆಯನ್ನು ತಡೆ ಹಿಡಿಯಲಾಗಿತ್ತು.
ಈಗ ಹಾಲಿನ ದರ ಹೆಚ್ಚಳಕ್ಕೆ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ.
ಸರ್ಕಾರಕ್ಕೆ 70:30 ರಂತೆ ದರ ಏರಿಕೆಗೆ ಒಕ್ಕೂಟಗಳು ಮನವಿ ಮಾಡಿದ್ದವು. ಆದರೆ, 80:20 ರಂತೆ ದರ ಏರಿಕೆ ಮಾಡಲಾಗುವುದು ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ ಈಗ ಅಂತಿಮವಾಗಿ 90:10ರಂತೆ ದರ ಏರಿಸಲಾಗಿದೆ.
