ಶಿವಮೊಗ್ಗ : ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗುತ್ತಿದ್ದ ಆನೆ ಕೋಪದಿಂದ ಆರ್ಭಟಿಸಿದ ಪರಿಣಾಮ ಅಂಬಾರಿ ಕೆಳಕ್ಕೆ ಬಿದ್ದು ಹಾನಿಗೊಳಗಾದ ಘಟನೆ ನಗರದಲ್ಲಿ ಬುಧವಾರ ಸಂಭವಿಸಿದೆ. ಇದರಿಂದ ದಸರಾ ಜಂಬೂ ಸವಾರಿ ಅರ್ಧಕ್ಕೇ ಮೊಟಕುಗೊಂಡಿತು.
ಮಹಾನಗರ ಪಾಲಿಕೆಯಿಂದ ದಸರಾ ಮಹೋತ್ಸವ ಆಯೋಜಿಸಿಕೊಂಡು ಬರಲಾಗುತ್ತಿದೆ. ಕಳೆದ ಕೆಲ ವ?ಗಳಿಂದ ಮೈಸೂರು ಮಾದರಿಯಲ್ಲಿ ಆನೆ ಮೇಲೆ ಅಂಬಾರಿ ಇರಿಸಿ ಮೆರವಣಿಗೆ ಮಾಡುವ ಸಂಪ್ರದಾಯ ಆರಂಭಿಸಲಾಗಿತ್ತು. ಈ ಬಾರಿಯೂ ಸಕ್ರೆಬೈಲು ಆನೆ ಬಿಡಾರದಿಂದ ಸೋಮಣ್ಣ, ಸಾಗರ್, ಬಹದ್ದೂರ್ ಸೇರಿದಂತೆ ಮೂರು ಆನೆಗಳನ್ನು ದಸರಾ ಮೆರವಣಿಗೆಗೆಂದು ಕರೆ ತರಲಾಗಿತ್ತು.

ಸೋಮಣ್ಣ ಆನೆ ಮೇಲೆ ಚಾಮುಂಡೇಶ್ವರಿ ವಿಗ್ರಹ ಹೊತ್ತ ಅಂಬಾರಿಯನ್ನು ಹೊರಿಸಲಾಗಿತ್ತು. ಬುಧವಾರ ಮಧ್ಯಾಹ್ನ ೩ ಗಂಟೆ ಸುಮಾರಿಗೆ ಶಿವಪ್ಪನಾಯಕ ಅರಮನೆ ಆವರಣದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಗಿತ್ತು.
ದಿಢೀರ್ ವಾಪಾಸ್ ತಿರುಗಿದ ಆನೆ :
ಮೆರವಣಿಗೆ ಸಾಗುವ ಎಸ್ಪಿಎಂ ರಸ್ತೆಯ ಪಾಂಡುರಂಗ ವಿಠಲ ದೇವಸ್ಥಾನದ ಬಳಿ ಸ್ವಲ್ಪ ದೂರ ಮಾತ್ರ ಮೆರವಣಿಗೆ ಸಾಗಿತ್ತು. ಅ?ರಲ್ಲಿಯೇ ಅಂಬಾರಿ ಹೊತ್ತಿದ್ದ ಸೋಮಣ್ಣ ಆನೆ
ಜೋರಾಗಿ ಘೀಳಿಡುವುದರೊಂದಿಗೆ ದಿಢೀರ್ ವಾಪಾಸ್ ತಿರುಗಿಬಿಟ್ಟಿತು
ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಮೆರವಣಿಗೆಯಲ್ಲಿ ಸಾಗುತ್ತಿದ್ದ ಜನರು ಕಕ್ಕಾಬಿಕ್ಕಿಯಾದರು. ಅಂಬಾರಿ ಹೊತ್ತು ಸಾಗುತ್ತಿದ್ದ ಆನೆಯ ಜೊತೆಗೆ ಸಾಗುತ್ತಿದ್ದ ಆನೆಗಳು ಸಹ ದಿಢೀರ್ ತಿರುಗಿದವು. ಜೊತೆಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಏನಾಯ್ತು ಎಂದು ನೋಡುವುದರೊಳಗೆ ಆನೆ ಬಂದ ಮಾರ್ಗದಲ್ಲಿಯೇ ವಾಪಾಸ್ ಸಾಗಿತು.
ಸೋಮಣ್ಣ ಆನೆ ವಾಪಾಸ್ ತೆರಳಿದ ವೇಗಕ್ಕೆ ಅದರ ಮೇಲಿದ್ದ ಅಂಬಾರಿಯೇ ಅಲುಗಾಡತೊಡಗಿತು. ಸ್ವಲ್ಪ ದೂರ ಸಾಗುತ್ತಿದ್ದಂತೆ ಆನೆಯ ಹಿಂಭಾಗದಲ್ಲಿ ಅಂಬಾರಿ ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿ ಕೂಡಲೇ ಕಟ್ಟಡವೊಂದಕ್ಕೆ ಜಿಗಿದು ಪಾರಾದರು. ಕೊನೆಗೆ ಅಂಬಾರಿ ಆನೆ ಮೇಲಿಂದ ಕೆಳಕ್ಕೆ ವಾಲಿ ನೆಲಕ್ಕೆ ಅಪ್ಪಳಿಸಿತು. ಘಟನೆಯಲ್ಲಿ ಎರಡು ಕಾರು ಹಾಗೂ ಮೂರು ದ್ವಿಚಕ್ರ ವಾಹನ ಜಖಂಗೊಂಡಿವೆ. ಅರಣ್ಯ ಸಿಬ್ಬಂದಿ ಆನೆ ನಿಯಂತ್ರಣಕ್ಕೆ ಹರಸಾಹಸಪಟ್ಟರು.

ಸಾಗರ್ ಬದಲು ಸೋಮಣ್ಣ :
ಸಕ್ರೆಬೈಲು ಆನೆ ಬಿಡಾರದ ಸಾಗರ್ ಆನೆ ಮೊದಲು ಅಂಬಾರಿ ಹೊರಲು ನಿಶ್ಚಯವಾಗಿತ್ತು.
ಇದಕ್ಕಾಗಿ ಒಂದು ವಾರದಿಂದ ತಾಲೀಮು ಸಹ ನಡೆಸಲಾಗಿತ್ತು. ಆದರೆ ಬುಧವಾರ ದಿಢೀರ್ ಎಂದು ನಿರ್ಧಾರ ಬದಲಿಸಿದ ಅಧಿಕಾರಿಗಳು, ಸೋಮಣ್ಣ ಆನೆ ಮೇಲೆ ಅಂಬಾರಿ ಮೆರವಣಿಗೆ ನಡೆಸಲು ನಿರ್ಧರಿಸಿದರು. ಸಾಗರ್ ಆನೆ ಕಾಲು ನೋವಿಗೆ ತುತ್ತಾಗಿದ್ದು ಇದಕ್ಕೆ ಕಾರಣ ಎಂದು
ಹೇಳಲಾಗುತ್ತಿದೆ. ಕಳೆದ ಆರು ವ?ಗಳಿಂದ ಸಾಗರ ಆನೆ ಅಂಬಾರಿ ಹೊತ್ತು ಸಾಗಿತ್ತು.
ಸೋಮಣ್ಣ ಆನೆ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿತ್ತು.
ಕುಮ್ಕಿ ಆನೆಗಳು ಎರಡೂ ಗಂಡಾನೆಯಾದ್ದರಿಂದ ಸೋಮಣ್ಣ ಆನೆಯನ್ನು ನಿಯಂತ್ರಿಸಲು
ಆಗಲಿಲ್ಲ. ಒಂದಾದರೂ ಹೆಣ್ಣಾನೆಯನ್ನು ಕರೆತರಬೇಕಿತ್ತು ಎಂಬ ಅಭಿಪ್ರಾಯವೂ
ಕೇಳಿಬಂದಿದೆ.

ಶಿವಮೊಗ್ಗದಲ್ಲಿ ಆನೆ ಅಂಬಾರಿ ಇತಿಹಾಸ
ಶಿವಮೊಗ್ಗ ದಸರಾದಲ್ಲಿ ಕಳೆದ ೧೫ ವ?ದಿಂದ ಆನೆಗಳು ಭಾಗವಹಿಸುತ್ತಿವೆ. ೨೦೧೭ರಿಂದ ಈಚೆಗೆ ಅಂಬಾರಿ ಹೊರುವ ಸಂಪ್ರದಾಯ ಆರಂಭವಾಯಿತು. ಮೊದಲಿನಿಂದ ಸಾಗರ್ ಆನೆಯೇ ಅಂಬಾರಿ ಹೊರುತ್ತಿತ್ತು. ೨೦೧೯ರಲ್ಲಿ ಕೊನೆಯ ಕ್ಷಣದಲ್ಲಿ ಸಾಗರ್ ಆನೆ ಅಸ್ವಸ್ಥಗೊಂಡಿತು. ಆಗ ಅಂಬಾರಿಯನ್ನು ಲಾರಿಯ ಮೇಲಿರಿಸಿ ಮೆರವಣಿಗೆ ಮಾಡಲಾಗಿತ್ತು. ೨೦೨೧ರಲ್ಲಿ ಕೊವಿಡ್ ಇದ್ದುದರಿಂದ ತಾಲೀಮು ನಡೆಸಿರಲಿಲ್ಲ. ಕೊನೆಯ ಕ್ಷಣದಲ್ಲಿ ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಅಂಬಾರಿ ಹೊತ್ತಿರಲಿಲ್ಲ. ೨೦೨೩ರಲ್ಲಿ ವಿಜಯದಶಮಿ ಹಿಂದಿನ ದಿನ ಕುಮ್ಕಿ ಆನೆ ನೇತ್ರಾವತಿ ಶಿವಮೊಗ್ಗದಲ್ಲಿ ಮರಿಗೆ ಜನ್ಮ ನೀಡಿತು. ಆಗ ಕೊನೆಯ ಕ್ಷಣದಲ್ಲಿ ಆನೆ ಮೇಲೆ ಅಂಬಾರಿ ಹೊರಿಸುವ ನಿರ್ಧಾರದಿಂದ ಹಿಂದೆ ಸರಿಯಲಾಗಿತ್ತು.
ಅರವಳಿಕೆ ನೀಡಿದ ಮೇಲೆ ಆನೆ ನಿಯಂತ್ರಣಕ್ಕೆ
ಸೋಮಣ್ಣ ಆನೆಯ ದಿಢೀರ್ ಈ ವರ್ತನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಕಂಗಾಲಾಗಿದ್ದರು.
ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಡೆಸಿದ ಎಲ್ಲ ಪ್ರಯತ್ನದ ನಡುವೆಯೂ ಆನೆ ಬಗ್ಗಲಿಲ್ಲ. ಕೊನೆಗೆ ಹೆಚ್ಚಿನ ಅನಾಹುತ ತಪ್ಪಿಸುವ ಸಲುವಾಗಿ ಅರೆವಳಿಕೆ ನೀಡಿ ಆನೆಯನ್ನು ನಿಯಂತ್ರಿಸಲಾಯಿತು. ಅರವಳಿಕೆ ನೀಡಿದ ಬಳಿಕವ? ಜಖಂ ಆಗಿದ್ದ ಬೆಳ್ಳಿ
ಅಂಬಾರಿಯನ್ನು ಬಿಚ್ಚಲು ಸಾಧ್ಯವಾಯಿತು. ಆದರೆ ದೇವಿಯ ವಿಗ್ರಹ ಮುಕ್ಕಾಗಿದ್ದು ಬೆಳ್ಳಿಯ
ಅಂಬಾರಿ ಸಂಪೂರ್ಣ ಜಖಂಗೊಂಡಿದೆ.
ವಿರೋಧದ ನಡುವೆಯೂ ಪ್ರತಿ?
ದಸರಾ ಮೆರವಣಿಗೆಗೆ ಸಕ್ರೇಬೈಲು ಆನೆ ಬಿಡಾರದ ಆನೆಗಳನ್ನು ಬಳಸಬಾರದು ಎಂದು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ಸ್ಥಳೀಯ ರಾಜಕಾರಣಿಗಳು ವಿಶೇ? ಆಸಕ್ತಿ ವಹಿಸಿ ಅರಣ್ಯ ಸಚಿವರಿಂದಲೇ ಅನುಮತಿ ಪಡೆದು ತರುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಶಿವಮೊಗ್ಗ ದಸರಾಕ್ಕೆ ಆನೆಗಳನ್ನು ಕರೆತರಲಾಗಿತ್ತು. ಅದೃ?ವಶಾತ್ ಈ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದೇ ನೆಮ್ಮದಿಯ ಸಂಗತಿ.