
ತುಂಗಾತರಂಗ ಸ್ಪೆಷಲ್ ಪೋಟೋ ಸುದ್ದಿ
ಶಿವಮೊಗ್ಗ,ಅ.22:
ನಿನ್ನೆ ಸಂಜೆ ಶಿವಮೊಗ್ಗ ಮಹಾನಗರ ಪಾಲಿಕೆಯ ದಸರಾ ಸಂಭ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಒಂದೇ ವೇದಿಕೆಯಲ್ಲಿ ಭೇಟಿಯಾಗಿದ್ದಲ್ಲದೆ, ಒಂದಿಷ್ಟು ಗಹನವಾದ ಮಾತುಕತೆ ಆಡಿದ ಹಾಗೂ ಅದನ್ನು ಹಲವರು ಅವಲೋಕಿಸುವ ಅಪರೂಪದ ಚಿತ್ರಗಳು ನಮ್ಮ ಮುಂದೆ ಕಾಣುತ್ತಿವೆ.

ಶ್ರೀಮತಿ ಈಶ್ವರಪ್ಪ ಹಾಗೂ ಕಾಂತೇಶ್ ರಿಗೆ ಬನ್ನಿ ನೀಡಿ ಶುಭಹರಸಿದ ಯಡಿಯೂರಪ್ಪ
ಅದರಲ್ಲಿ ಈ ಚಿತ್ರವನ್ನು ಅತ್ಯಂತ ವಿಶೇಷ ಅನ್ಸುತ್ತೆ. ಈಶ್ವರಪ್ಪ ಯಡಿಯೂರಪ್ಪರ ಕಿವಿಯಲ್ಲಿ ಏನೋ ಹೇಳುತ್ತಿದ್ದಾರೆ. ಅದನ್ನು ಶಾಸಕ ಡಿ. ಎಸ್. ಅರುಣ್ ಆಲಿಸಿ ನಗುತ್ತಿದ್ದಾರೆ. ಪಕ್ಕದಲ್ಲಿ ಸಂಸದ ಬಿ. ವೈ ರಾಘವೇಂದ್ರ ಗಮನಿದ್ದಾರೆ ಹಾಗೇ ಹುಸಿ ನಗೆ ಬೀರಿದ್ದಾರೆ.

ಇಲ್ಲಿ ಹೇಳಿದರೂ ಕೇಳದಂತೆ ಈ ಕಡೆ ನಿಂತಿರುವ ಕೆ.ಇ. ಕಾಂತೇಶ್ ನಗು ಮುಖದಲ್ಲಿ ಜನರತ್ತ ಕಣ್ಣು ಹಾಯಿಸುತ್ತಿದ್ದಾರೆ. ಮತ್ತೊಂದು ತುದಿಯಲ್ಲಿ ದತ್ತಾತ್ರೇಯವರು ಮಾಲತೇಶ್ ಅವರಿಗೆ ಏನೋ ಕಿವಿಮಾತು ಹೇಳುತ್ತಿದ್ದಾರೆ.
ಇನ್ನು ದಸರಾದ ಈ ಚಿತ್ರದಲ್ಲಿ ಮೇಲಿರುವ ಅಂಶವನ್ನು ಗಮನಿಸಬಹುದು. ಶಾಸಕ ದನಂಜಯ ಸರ್ಜಿ ಸ್ಮೈಲ್ ಜೊತೆ ಮಾತು ಕೇಳಿಸಿಕೊಳ್ತಿದ್ದಾರೆ ಅನಿಸುತ್ತೆ.

ಈ ಚಿತ್ರದ ಇನ್ನೊಂದು ವಿಶೇಷ ಏನು ಗೊತ್ತಾ..?, ಬಾಳೆ ಗಿಡದ ಪಕ್ಕದಲ್ಲಿ ನಿಂತಿರುವ ಶಾಸಕ ಚನ್ನಬಸಪ್ಪ ಅವರು ಜನರಿಗೆ ಕೈಮುಗಿದು ಹಾಗೆ ಕೈ ಅಗಲ ಮಾಡಿರೋ ದೃಶ್ಯ ಮತ್ತೊಂದು ಹೊಸ ಕಥೆ ಹೇಳಿದಂತಿದೆ ಹಿರಿಯರಾದ ತಾವುಗಳು ಏನಾದರೂ ಒಂದು ಒಳ್ಳೆಯ ನಿರ್ಧಾರ ತೆಗೆದುಕೊಳ್ಳಿ ನನ್ನನ್ನು ಮತ್ತೊಮ್ಮೆ ಶಾಸಕನಾಗಿ ಮಾಡಿ ಎಂದು ಹೇಳುವ ಜೊತೆಗೆ ಇಬ್ಬರು ಹಿರಿಯ ನಾಯಕರಿಗೆ ಶುಭ ಹಾರೈಕೆ ಹೇಳುತ್ತಿರುವ ಚಿತ್ರಣ ಇದು ಎಣಿಸುತ್ತದೆ ಹೌದಲ್ಲವೇ ಒಟ್ಟಾರೆ ಈ ಚಿತ್ರ ನಾನಾ ನಮೂನೆಯಲ್ಲಿ ವಿಶೇಷ ಎನಿಸುತ್ತಿದೆ.

ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರ ಸನಿಹದ ಮಾತುಕತೆ ಮತ್ತೊಮ್ಮೆ ಬಿಜೆಪಿ ಪಾಳ್ಯದಲ್ಲಿ ಹೊಸತನ ತರಲು ರಾಷ್ಟ್ರಭಕ್ತಿ ಬಳಗದಲ್ಲಿ ಹೊಸ ಶಕ್ತಿ ನೀಡಲು ಕಾರಣವಾಗುವ ಸ್ಥಿತಿ ಹಾಗೂ ಸನ್ನಿವೇಶ ಹತ್ತಿರವಾಗಿದೆ ಬನ್ನಿ ಮುಡಿದು ಬಾಳು ಬಂಗಾರವಾಗಲಿ ಎಂದು ಈ ನಾಯಕರಗಳು ಇಬ್ಬರು ಪರಸ್ಪರ ಅಭಿನಂದಿಸಿರುವುದು ಶುಭ ಕೋರಿರುವುದು ಹೊಸತನ ಹಾಗೂ ಬದಲಾವಣೆಯ ಚಿತ್ರವೆನಿಸುತ್ತಿದೆ ಏನಂತೀರಿ?