ಶಿವಮೊಗ್ಗ,ಅ.05:
ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಜಿ. ಮಧುಸೂದನ್ ಅವರನ್ನು ರಾಜ್ಯಾಧ್ಯಕ್ಷರಾದ ಸಿ.ಎಸ್. ಷಡಾಕ್ಷರಿಯವರು ಆತ್ಮೀಯವಾಗಿ ಅಭಿನಂದಿಸಿ, ಶುಭಹಾರೈಸಿದರು

.
ನೂತನ ಜವಾಬ್ದಾರಿಯಲ್ಲಿ ಅಭಿವೃದ್ಧಿಗೆ ಹೊಸ ದಿಕ್ಕು, ಜನಪರ ಕಾರ್ಯಗಳಿಗೆ ಹೊಸ ಚೈತನ್ಯ ದೊರೆಯಲಿ ಹಾಗೂ ಶಿವಮೊಗ್ಗ–ಭದ್ರಾವತಿ ನಗರಗಳ ಸಮಗ್ರ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವಂತಾಗಲಿ ಎಂದು ಶುಭಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಆರ್ ಮೋಹನ್ ಕುಮಾರ್, ಕಾರ್ಯದರ್ಶಿಗಳಾದ ಆರ್ ಪಾಪಣ್ಣ, ಕಾರ್ಯಾಧ್ಯಕ್ಷರಾದ ಕೃಷ್ಣಮೂರ್ತಿ,

ಪ್ರಮಖರಾದ ಸರ್ವೆ ವೇಣುಗೋಪಾಲ್, ರವಿಕುಮಾರ್, ದಿನೇಶ್, ಸಿದ್ದಪ್ಪ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.