ಕಾಲ್ಪನಿಕ ಚಿತ್ರ
ಆಹಾರ ದಸರಾ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮಗಳು
ಶಿವಮೊಗ್ಗ, ಅ.03:
ಶಿವಮೊಗ್ಗ ದಸರಾ -2026ರ ಪ್ರಯುಕ್ತ ಆಹಾರ ದಸರಾ ಸಮಿತಿ ವತಿಯಿಂದ ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಅ.15 ರಂದು ಸಂಜೆ 6 ಗಂಟೆಗೆ, ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್)ದಲ್ಲಿ ಆಹಾರ ಮೇಳ – ಮಲೆನಾಡ ಸಾಂಪ್ರದಾಯಿಕ ವಿಶಿಷ್ಟ ಅಡುಗೆಗಳ ಪ್ರದರ್ಶನ ಮತ್ತು ಮಾರಾಟ.

ಅ.16 ರಂದು ಬೆಳಗ್ಗೆ 10.00ಕ್ಕೆ ವೀರಶೈವ ಕಲ್ಯಾಣ ಮಂಟಪದಲ್ಲಿ ಸಹೋದರ-ಸಹೋದರಿಯರಿಂದ ಶೇಂಗಾ ಮತ್ತು ಕೊಬ್ಬರಿ ಉಪಯೋಗಿಸಿ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಅ.17 ರಂದು ಬೆಳಿಗ್ಗೆ 10.00ಕ್ಕೆ ಶಿವಪ್ಪ ನಾಯಕ ಸರ್ಕಲ್ನಲ್ಲಿ ಸಂಚಾರಿ ಪೊಲೀಸ್ರಿಗೆ ಹಾಗೂ ಸಾರ್ವಜನಿಕರಿಗೆ ಇಡ್ಲಿ ಮತ್ತು ಹಣ್ಣು ತಿನ್ನುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಸೂಡಾ ಅಧ್ಯಕ್ಷರಾಗಿ ಮಧು ನೋಡಿ https://youtube.com/shorts/2Qsbo-DolDQ?si=SGRwrhezDioqwoHN
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಧುಸೂದನ್ ಅಧಿಕಾರ ಸ್ವೀಕಾರ ಸಂಭ್ರಮ
ಆಸಕ್ತರು ಸ್ಪರ್ಧೆಗಳ ನೋಂದಣೆಗಾಗಿ ಮೊ.ಸಂ.: 9886033982/ 9902525752/ 8123214210 ಗಳನ್ನು ಸಂಪರ್ಕಿಸುವಂತೆ ಆಹಾರ ದಸರಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.