ಹಿಂದೂ ಪತ್ರಿಕೆ ಕೃಪೆ
ಶಿವಮೊಗ್ಗ,ಸೆ.27:
ಇಪ್ವತ್ತು ವರುಷ ವಯಸ್ಸಿನ ಕೆಂಚಪ್ಪ ಲೇಔಟ್ ನ ನಿವಾಸಿ, ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬನು, ನಾನು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತೇನೆ ನನ್ನನ್ನು ಕ್ಷಮಿಸಿ ಅಂತ, ತನ್ನ ಮನೆಯವರಿಗೆ ಫೋನ್ ಮಾಡಿರುತ್ತಾನೆ.

ತಕ್ಷಣವೇ ಆ ಹುಡುಗನ ಕಡೆಯವರು ವಿನೋಬನಗರ ಪೊಲೀಸ್ ಠಾಣೆಯ ಸಂತೋಷ್, ಪೊಲೀಸ್ ನಿರೀಕ್ಷಕರವರಿಗೆ, ಫೋನ್ ಮೂಲಕ ವಿಷಯ ತಿಳಿಸಿದ್ದು, ವಿನೋಬನಗರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಯೋಗೇಶ್ ಹೆಚ್ಸಿ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಗುರುರಾಜ್, ಹೆಚ್ಸಿ ರವರುಗಳ ಸಹಕಾರದೊಂದಿಗೆ ಸದರಿ ಹುಡುಗನು ಸೋಮಿನಕೊಪ್ಪದ ಕೆರೆ ಹತ್ತಿರ ಇರುವುದು ತಿಳಿದು ಬಂದಿದ್ದು, ಸೋಮಿನ ಕೊಪ್ಪದ ಗ್ರಾಮಸ್ಥರ ಸಹಕಾರದೊಂದಿಗೆ ಪೊಲೀಸ್ ಅಧಿಕಾರಿಗಳು ವಿಧ್ಯಾರ್ಥಿಯನ್ನು ಕಾಪಾಡಿ, ಅವರ ತಂದೆಯವರ ಜೊತೆಗೆ ಕಳಿಸಿ ಕೊಟ್ಟಿರುತ್ತಾರೆ.

ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ನಿಖಿಲ್ ಬಿ,. ಐಪಿಎಸ್, ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಬಿನಂದಿಸಿರುತ್ತಾರೆ.