ಸುಂದರೇಶ್ ಸಿಡಿಮಿಡಿ/ ಹೇಳಿಕೆಗೆ ಬದ್ದ/ ಎನ್. ರಮೇಶ್, ದಿನೇಶ್ ಕಿತ್ತಾಕೀ…
ಶಿವಮೊಗ್ಗ,26 :
ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರುಗಳಾದ ಬಲ್ಕೀಶ್ ಬಾನು, ಮಂಜುನಾಥ ಭಂಡಾರಿ ಇವರುಗಳು ಕಾಂಗ್ರೆಸ್ ಮುಖಂಡರುಗಳ ಬಗ್ಗೆ ಏನೇನು ಮಾತನಾಡಿದ್ದಾರೆ ಎಂಬ ವಿಡಿಯೋ ತುಣುಕುಗಳು ನನ್ನ ಬಳಿ ಇದ್ದು, ಅದನ್ನು ಕೆಪಿಸಿಸಿ ಮತ್ತು ಎಐಸಿಸಿ ಮುಖಂಡರುಗಳಿಗೆ ಹಾಗೂ ಮುಖ್ಯಮಂತ್ರಿಗೆ ಡಿ.ಕೆ.ಶಿವಕುಮಾರ್ ಅವರಿಗೆ ನೀಡಲಾಗುವುದು ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮತ್ತೊಂದು ಹೊಸ ಬಾಂಬ್ ಅನ್ನು ಸಿಡಿದ್ದಾರೆ.

ಅವರು ಇಂದು ಖಾಸಗಿ ಹೊಟೇಲ್ವೊಂದರಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ನಾನು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ಹೇಳಿಕೆಗಳನ್ನ ಕೆಲವು ವಿಷಯಗಳನ್ನು ಬಿಟ್ಟು ಉಳಿದ ಎಲ್ಲಾ ವಿಷಯಗಳಿಗೆ ಈಗಲೂ ಬದ್ದನಾಗಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಏನೇನು ನಡೆಯುತ್ತಿವೆ ಎಂಬ ಎಲ್ಲಾ ವಿಷಯಗಳನ್ನ ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತಿಳಿಸುತ್ತೇನೆ ಎಂದರು.

ಸಾರೀ ರಮೇಶ್- ಸುಂದರೇಶ್
ಸೂಡಾ ಮಾಜಿ ಅಧ್ಯಕ್ಷರೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳೂ ಆದ ಎನ್.ರಮೇಶ್ ರವರ ಬಗ್ಗೆ ಬಾಯ್ತಪ್ಪಿನಿಂದ ಮಾತಾಡಿದ್ದು ತಪ್ಪು. ರಮೇಶ್ ಮತ್ತು ನಾನು ಕಾಂಗ್ರೆಸ್ ಕಟ್ಟುವುದರಲ್ಲಿ ಮೊದಲಿಂದಲೂ ಶ್ರಮಿಸುತ್ತಾ ಬಂದಿದ್ದೇವೆ. ಅವರ ಬಗ್ಗೆ ನನಗೆ ವಿಶೇಷ ಗೌರವವಿದೆ ಎಂದು ಸ್ಬೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಸ್ಪಷ್ಟೀಕರಣ ನೀಡಿದ್ದಾರೆ.
ರಮೇಶ್ ಅವರ ಬಗ್ಗೆ ಬಾಯ್ತಪ್ಪಿ ಮಾತಾಡಿದ್ದೇನಷ್ಟೇ ಎಂದು
ಹರ್ಷ ಹೋಟೆಲ್ ನಲ್ಲಿ ಶನಿವಾರ ಕರೆದಿದ್ದ ತುರ್ತು ಪತ್ರಿಕಾಗೋಷ್ಠಿಯ ಕುರಿತು ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದಿನ ಪತ್ರಿಕಾಗೋಷ್ಠಿಯಲ್ಲಿ ನಾನು ತೀರ್ಥಹಳ್ಳಿಯ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಬಗ್ಗೆ ಅಸಂಬದ್ದವಾದ ಪದಗಳನ್ನು ಉಪಯೋಗಿಸಿದ್ದೆ. ಅವರು ಪಕ್ಷದಲ್ಲಿ ಹಿರಿಯರು ಅವರು ಬಗ್ಗೆ ನನಗೆ ಗೌರವವಿದೆ. ನನ್ನ ಹೇಳಿಕೆಯಿಂದ ಅವರಿಗೆ ನೋವಾಗಿರಬಹುದು ಅದಕ್ಕಾಗಿ ವಿಷಾದ ವ್ಯಕ್ತಪಡಿಸುವೆ. ಹಾಗೇಯೆ ಆರ್.ಎಂ.ಮಂಜುನಾಥ ಗೌಡ, ಮಂಜುನಾಥ ಭಂಡಾರಿ ಬಗ್ಗೆ ಮಾತನಾಡಿದ್ದರೆ ಕ್ಷಮೆ ಕೇಳುವೆ ಆದರೆ ಮಧು ಬಂಗಾರಪ್ಪನವರನ್ನು ಏಕವಚನದಲ್ಲಿ ಕರೆದಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಅದನ್ನು ಬಿಟ್ಟರೆ ಅವರ ಬಗ್ಗೆ ಹೇಳಿದ ಮಾತುಗಳನ್ನೆಲ್ಲಾ ಈಗಲೂ ಸಮರ್ಥಿಸಿಕೊಳ್ಳುತ್ತೇನೆ. ಈ ಮುದ್ದು ಕಂದ ಮಧು ಬಂಗಾರಪ್ಪನವರನ್ನು ಬೇಕಾದರೆ ರಾಮನಗರವೊ ಅಥವಾ ಇನ್ನೇಲ್ಲಿಗಾದರೂ ಕಳಿಸಿ ಶಿವಮೊಗ್ಗಕ್ಕೆ ಮಾತ್ರ ಬೇಡ ಎಂದು ಸ್ಪಷ್ಟವಾಗಿ ಹೇಳಿದರು.

ಅದನ್ನು ಬಿಟ್ಟರೆ ಬಿ.ವಿ.ಶ್ರೀನಿವಾಸ್, ಕಲಗೋಡು ರತ್ನಾಕರ್, ಚೇತನ್. ಹೆಚ್.ಸಿ.ಯೋಗೀಶ್, ಎಸ್.ಪಿ.ದಿನೇಶ್, ಮಾಲತೇಶ್ ಮುಂತಾದವರ ಬಗ್ಗೆ ನನ್ನ ಹೇಳಿಕೆಗೆ ಈಗಲೂ ಬದ್ದನಾಗಿದ್ದೇನೆ. ಬೇಳೂರು ಗೋಪಾಲಕೃಷ್ಣ ಮತ್ತು ಬಿ.ಕೆ.ಸಂಗಮೇಶ್ ಅವರಿಗೆ ಮಂತ್ರಿ ಸ್ಥಾನ ಕೊಡಬೇಕು ಹಾಗೇಯೇ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಶಾಸಕರುಗಳಾದ ದಿನೇಶ್ ಗುಂಡೂರಾವ್, ಸಲೀಂ ಅಹಮ್ಮದ್, ಜಮೀರ್ ಅಹಮ್ಮದ್ ಮುಂತಾದ ಮುಸ್ಲಿಂ ನಾಯಕರಿಗೂ ಕೂಡ ಸಚಿವರ ಪಟ್ಟ ನೀಡುವುದರಲ್ಲಿ ತಪ್ಪಿಲ್ಲ ಎಂದರು

.
ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿರುವ ಎನ್.ರಮೇಶ್ ಇವರಿಬ್ಬರ ಸೇವೆಯೂ ಸಾಕು, ಅವರನ್ನು ಕೂಡ ಪದವಿಯಿಂದ ಬದಲಾಯಿಸಬೇಕು ಎಂದರು.

ಜಿಲ್ಲೆಯಲ್ಲಿ ಆಕ್ರಮ ಚಟುವಟಿಕೆಗಳು ಹೆಚ್ಚುತ್ತಿವೆ. ಗಾಂಜಾ ಹಾವಳಿ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಜಿಲ್ಲೆಗೆ ಆಗಮಿಸುವಂತೆ ಕೊರಲಾಗುವುದು. ಕೊಲೆ, ಕಳ್ಳತನ ಪ್ರಕರಣಗಳ ಕಡಿವಾಣಕ್ಕಾಗಿ ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡುವಂತೆ ಮನವಿ ಮಾಡಲಾಗುವುದು ಎಂದರು.