‘
ಶಿವಮೊಗ್ಗ. ಬಡವರ ಆಶ್ರಯ ಮನೆಗಳಿಗೆ ಅನುದಾನ ತರಲು ವಿಫಲರಾದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪನವರ ಕಾರನ್ನು ಅಡ್ಡಗಟ್ಟಿ ಮುತ್ತಿಗೆ ಹಾಕಲಾಗುವುದು ನಗರಕ್ಕೆ ಕಾಲಿಡಲು ರಾಷ್ಟ್ರ ಭಕ್ತರ ಬಳಗ ಬಿಡುವುದಿಲ್ಲ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ ಎಸ್ ಈಶ್ವರಪ್ಪ ಗುಡುಗಿದ್ದಾರೆ.

ಅವರು ಇಂದು ನಗರದ ಫೇಸ್ ಕಾಲೇಜಿನ ಸಭಾಂಗಣದಲ್ಲಿ ರಾಷ್ಟ್ರಭಕ್ತರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಬೂತ್ ಮಟ್ಟದ ಪದಾಧಿಕಾರಿಗಳ ಸಭೆ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ಮತ್ತು ಬೂತ್ ಮಟ್ಟದ ಪದಾಧಿಕಾರಿಗಳ ಕರಡು ಮತದಾರರ ಪಟ್ಟಿಯ ವಿಶ್ಲೇಷಣೆ ಮತ್ತು ಮಾಹಿತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಶಾಸಕನಾಗಿದ್ದಾಗ ಕಡು ಬಡವರಿಗೆ ಮತ್ತು ಪರಿಶಿಷ್ಟ ಜಾತಿ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ 4000 ಆಶ್ರಯ ಮನೆಗಳಿಗೆ ಅರ್ಜಿ ಕರೆದು 600 ಮನೆಗಳು ಪೂರ್ಣಗೊಂಡಿದೆ ಉಳಿದ ಮನೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಿ ಪೂರ್ಣಗೊಳಿಸಲು ಬೇಕಾದ ಅನುದಾನ ತರಲು ವಸತಿ ಸಚಿವರ ಜೊತೆಗೆ ಎರಡು ಬಾರಿ ಮಾತಾಡಿದ್ದೆ ಒಮ್ಮೆ ಇಲ್ಲಿಗೆ ಬಂದು ಸಭೆ ನಡೆಸಿ ಘೋಷಣೆ ಮಾಡಿ ಹೋಗಿದ್ದರು.

ಆದರೆ ಇದುವರೆಗೂ ಒಂದು ರೂಪಾಯಿ ತರಲು ಉಸ್ತುವಾರಿ ಸಚಿವರು ಮತ್ತು ವಸತಿ ಸಚಿವರ ಕೈಯಲ್ಲಿ ಆಗಲಿಲ್ಲ. ಮಧು ಬಂಗಾರಪ್ಪ ಒಳ್ಳೆವರೆ ಆದರೆ ಓರ್ವ ಸಚಿವನಾಗಿ ಸರ್ಕಾರದಿಂದ ಅನುದಾನ ತರಲು ವಿಫಲರಾಗಿದ್ದಾರೆ. ನೀರು ರಸ್ತೆ ಚರಂಡಿ ಎಲ್ಲಾ ವರ್ಗದ ಜನರಿಗೆ ನಮ್ಮ ಸರ್ಕಾರದ ಕಾಲದಲ್ಲಿ ನೀಡಿದ್ದ ಅನುದಾನಗಳನ್ನು ನಿಲ್ಲಿಸಿದ್ದಾರೆ. ರಾಷ್ಟ್ರ ಭಕ್ತರ ಬಳಗದಿಂದ ಅವರಿಗೆ ಗೆರಾವ್ ಹಾಕಲಾಗುವುದು ಪೊಲೀಸರು ನನ್ನನ್ನು ಬೇಕಾದರೆ ಬಂಧಿಸಲಿ ನಾನೇ ನೇತೃತ್ವ ವಹಿಸಿ ಹೋರಾಟ ನಡೆಸುತ್ತೇನೆ. ಜನರಿಗಾಗಿ ಜೈಲಿಗೆ ಹೋಗಲು ಸಿದ್ದ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಹಂತದ ಎಸ್ಐಆರ್ ಪ್ರಕ್ರಿಯೆ ಮುಗಿದಿದೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ 59,000 ಮತದಾರರು ಡಿಲೀಟ್ ಆಗಿದ್ದಾರೆ. ಅದರಲ್ಲಿ 15 ಸಾವಿರ ಜನರಿಗೆ ಈಗಾಗಲೇ ಚುನಾವಣಾ ಆಯೋಗದಿಂದ ನೋಟಿಸ್ ನೀಡಿ ದಾಖಲೆ ಕೇಳಿದ್ದಾರೆ. ಅಕ್ಟೋಬರ್ 27 ಕರಡು ಪ್ರತಿ ಪ್ರಕಟಗೊಳ್ಳಲಿದೆ. ರಾಷ್ಟ್ರಭಕ್ತರ ಬಳಗ ನಗರದ ಮೂರು ಕಡೆ ಮಾಹಿತಿ ಕೇಂದ್ರ ಮಾಡಿ ಸುಮಾರು 25,000 ಮತದಾರರಿಗೆ ಮಾಹಿತಿ ನೀಡಿ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ನೆರವು ನೀಡಿದೆ. ಒಂದೇ ಒಂದು ಮತ ಕೂಡ ಹಾಳಾಗಬಾರದು. ಪ್ರತಿಯೊಬ್ಬ ಮತದಾರರ ಮನೆಗೂ ನಮ್ಮ ಕಾರ್ಯಕರ್ತರು ಈಗಾಗಲೇ ಮುಟ್ಟಿದ್ದಾರೆ. 250 ಮತದಾರರಿಗೆ ನಾಲ್ಕು ಜನರ ಬಿ ಎಲ್ ಎ ಗಳ ತಂಡ ರಚಿಸಿ ಅವರ ಮನೆಗೆ ತೆರಳಿ ಸಂಪೂರ್ಣ ಮಾಹಿತಿ ನೀಡಿ ಹೊಸ ಮತದಾರರ ಸೇರ್ಪಡೆ ಮತ್ತು ಮೃತಪಟ್ಟ ಹಾಗೂ ಬೇರೆ ಊರಿಗೆ ಶಿಫ್ಟ್ ಆದ ಅಥವಾ ವರ್ಗಾವಣೆಗೊಂಡ ಮತದಾರರನ್ನು ಗುರುತಿಸುವ ಕೆಲಸ ನಮ್ಮ ಕಾರ್ಯಕರ್ತರು ಮಾಡುತ್ತಿದ್ದಾರೆ ಯಾವುದೇ ರಾಜಕೀಯ ಪಕ್ಷ ಮಾಡದೇ ಇರುವ ಕೆಲಸವನ್ನು ರಾಷ್ಟ್ರಭಕ್ತರ ಬಳಗ ಮಾಡಿದೆ ಎಂದರು. ಕೇವಲ ಮತ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದು ಅಷ್ಟೇ ಅಲ್ಲ ಪ್ರತಿ ಮತದಾರರ ಸಮಸ್ಯೆಗಳನ್ನು ಆ ಲಿಸಿ ಪರಿಹಾರ ಕೊಡಿಸುವಲ್ಲಿ ಕೂಡ ನಮ್ಮ ಕಾರ್ಯಕರ್ತರು ಕೆಲಸ ಮಾಡಬೇಕು. ರಾಷ್ಟ್ರಭಕ್ತರ ಬಳಗ ಗೋ ಸಂರಕ್ಷಣೆ ಪರಿಸರ ಹೋರಾಟ ಬಡವರಿಗೆ ಬೇಕಾದ ಎಲ್ಲಾ ಸೌಲಭ್ಯಗಳ ಬಗ್ಗೆಯೂ ಹೋರಾಟ ನಡೆಸುತ್ತಾ ಬಂದಿದೆ ಯಾವ ಬ್ರಹ್ಮ ಬಂದರು ಮುಂಬರುವ ಪಾಲಿಕೆ ಹಾಗೂ ಎಮ್ಮೆಲ್ಲೆ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದರು.
ನಮ್ಮ ಮಕ್ಕಳು ಮರಿಗೆ ಒಳ್ಳೆಯದಾಗಬೇಕಾದರೆ ಸಮಾಜ ಸೇವೆ ಮಾಡಬೇಕು. ಅಕ್ಟೋಬರ್ ಒಂದರಿಂದ ಆಶ್ರಯ ಮನೆಗಾಗಿ ಹೋರಾಟ ಹಮ್ಮಿಕೊಳ್ಳುತ್ತೇವೆ. ಗುರಿ ಮುಟ್ಟುವವರೆಗೆ ಬಡವರ ಪರವಾದ ಹೋರಾಟ ನಿಲ್ಲುವುದಿಲ್ಲ ಎಂದರು.
ಮಾಜಿ ನಗರಸಭಾ ಅಧ್ಯಕ್ಷ ಎಂ ಶಂಕರ್ ಮಾತನಾಡಿ ಲಕ್ಷಾಂತರ ಕಾರ್ಯಕರ್ತರ ಅಪೇಕ್ಷೆ ಮೇರೆಗೆ , ಬಿಜೆಪಿ ಶುದ್ಧೀಕರಣಕ್ಕೆ ಅವರು ಸ್ಪರ್ಧೆ ಮಾಡಿದ್ದರು ಅದು ಅವರ ಅಭಿಪ್ರಾಯ ಅಲ್ಲ ವಾಗಿತ್ತು. ಬಲಾಢ್ಯ ಸಮುದಾಯದವರು ವಿಧಾನಸೌಧವನ್ನು ತಮ್ಮ ಕಬ್ಜ ದಲ್ಲಿ ಇಟ್ಟಿದ್ದಾರೆ. ಈ ಪಕ್ಷಗಳ ನಡುವೆ ಹೊಂದಾಣಿಕೆ ಇದೆ ಎಂದು ಪತ್ರಿಕೆಗಳು ಹೇಳುತ್ತಿವೆ ಬಡವರ ಮಕ್ಕಳು ರಾಜಕೀಯದಲ್ಲಿ ನಿಲ್ಲಬಾರದು ಅವರ ಕುಟುಂಬಕ್ಕೆ ಸ್ನೇಹಿತರಿಗೆ ಮಾತ್ರ ಅಧಿಕಾರ ಹೋದರೆ ಕರ್ನಾಟಕ ಉಳಿಯುವುದಿಲ್ಲ ಬಲಿಷ್ಠರ ವಿರುದ್ಧ ಹೋರಾಡುವ ಶಕ್ತಿ ಕೆ ಎಸ್ ಈ ಶ್ವರಪ್ಪನವರಿಗೆ ಮಾತ್ರ ಇದೆ. ನಾನು ಮಾತ್ರ ಸೈಕಲ್ ಹೊಡೆದು ಪಕ್ಷ ಕಟ್ಟಿದ್ದೇನೆ ಅನ್ನುವವರಿದ್ದಾರೆ. ಆದರೆ ಯಾರೊಬ್ಬನಿಂದಲೂ ಪಕ್ಷ ಕಟ್ಟಲು ಸಾಧ್ಯವಿಲ್ಲ.

ಈಶ್ವರಪ್ಪನಂತಹ ಅನೇಕ ಹಿರಿಯರು ಪಕ್ಷಕ್ಕಾಗಿ ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ಮೊದಲ ಕೆಲಸ ಮತದಾರರ ಪಟ್ಟಿ ಅಧ್ಯಯನ ಮಾಡಬೇಕು ನಂತರ ಮನೆ ಮನೆಗೆ ತೆರಳಿ ಮಾಹಿತಿ ಪಡೆಯಬೇಕು ಎಲ್ಲಾ ಗಲ್ಲಿ ಗಲ್ಲಿಗಳನ್ನು ಏರಿಯಾ ಗಳನ್ನು ಗುರುತಿಸಿ ಮನೆ ಮನೆಗೆ ತೆರಳಿ , ಅವರೊಡನೆ ಸಂಪರ್ಕಿಸಬೇಕು ಅದಕ್ಕಾಗಿ ಸಮಯ ಕೊಟ್ಟಾಗ ಮಾತ್ರ ಯಶಸ್ವಿ ಕಾರ್ಯಕರ್ತನಾಗುತ್ತಾನೆ. ಎಲ್ಲರೂ ಸೇರಿ ಈ ಪ್ರಕ್ರಿಯೆಯನ್ನು ಸಸಕ್ತ ಮಾಡೋಣ ಎಂದರು.
ಆರ್ ಎಸ್ ಎಸ್ ವಿಸ್ತಾರಕರಾಗಿದ್ದ ಮಂಜಣ್ಣ ಮಾತನಾಡಿ ಇಲ್ಲಿ ಬಂದ ಕಾರ್ಯಕರ್ತರು ಮನಸ್ಸು ಮಾಡಿದರೆ ಈಶ್ವರಪ್ಪನವರನ್ನು 70000 ಮತಗಳಿಂದ ಗೆಲ್ಲಿಸಬಹುದು ಪ್ರತಿ ಮನೆಗೂ ನಾಲ್ಕೈದು ಬಾರಿ ಹೋಗಬೇಕು ಕೆಲವರು ಅವಮಾನಿಸಬಹುದು. ಮಹಿಳೆಯರ ಮನೆ ಮತ್ತು ಮನವನ್ನು ಮುಟ್ಟುವ ಕೆಲಸ ಮಹಿಳಾ ಕಾರ್ಯಕರ್ತರು ಮಾಡಬೇಕು. ಬುತಲ್ಲಿ ಗೆದ್ದರೆ ಚುನಾವಣೆ ಗೆದ್ದ ಹಾಗೆ. ಹಿಂದೂ ಹುಲಿ ಹೊರಗೆ ಬಂದಿದೆ.ಮುಂದಿನ ಚುನಾವಣೆಯಲ್ಲಿ ಗೆಲ್ತಾರೆ. ಪಕ್ಷದಿಂದ ಆದರೆ ಕಾಂತೇಶ್ ಸ್ವತಂತ್ರವಾಗಿ ಆದರೆ ಈಶ್ವರಪ್ಪನವರೇ ಮುಂದೆ ಸ್ಪರ್ಧಿಸಲಿದ್ದಾರೆ ಮುಂದೆ ಶುಭ ಸೂಚನೆ ಶೀಘ್ರದಲ್ಲಿಯೇ ಬರಲಿದೆ ಎಂದರು.
ಕೆಇ ಕಾಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ತಂದೆಯವರು ಐದು ಬಾರಿ ಶಿವಮೊಗ್ಗ ಕ್ಷೇತ್ರವನ್ನು ಗೆದ್ದಿದ್ದಾರೆ. ಪಕ್ಷ ನಿವೃತ್ತಿಯಾಗಿ ಎಂದಾಗ ಮರು ಮಾತಿಲ್ಲದೆ ಶಿಸ್ತಿನ ಸಿಪಾಯಿಯಾಗಿ ಚುನಾವಣೆಗೆ ಸ್ಪರ್ಧಿಸದೆ ಚೆನ್ನಿ ಗೆಲ್ಲಲು ಹಗಲು ರಾತ್ರಿ ಶ್ರಮಿಸಿದ್ದಾರೆ. ಆದರೆ ಬಿಜೆಪಿ ಬೇರೆ ರಾಜ್ಯಗಳಲ್ಲಿ ಒಂದು ನೀತಿ ಶಿವಮೊಗ್ಗಕ್ಕೆ ಒಂದು ನೀತಿಯೇ ಎಂದು ಪ್ರಶ್ನಿಸಿದ ಅವರು ಬೊಮ್ಮಾಯಿ ಮಗ. ಶಶಿಕಲಾ ಜಲ್ಲೆ ಅವರ ಪತಿ. ಕಟ್ಟನಾಯ್ಡು ಅವರ ಪುತ್ರ ಅವರಿಗೆ ಪಕ್ಷ ಟಿಕೆಟ್ ನೀಡಿತ್ತು. ಆದರೆ ಹಿಂದುತ್ವಕ್ಕಾಗಿ ರಾಷ್ಟ್ರಕ್ಕಾಗಿ ಜೀವವನ್ನೇ ಪಣಕಿಟ್ಟ ನಮ್ಮ ತಂದೆ ಯಾವ ತಪ್ಪು ಮಾಡಿದ್ದರು ಎಂದು ಪ್ರಶ್ನಿಸಿದರು. ಶಿವಮೊಗ್ಗ ನಗರ ಹಿಂದುತ್ವದ ಕ್ಷೇತ್ರ ಯಾರು ಅಭ್ಯರ್ಥಿಯಾಗುತ್ತಾರೆ ಮುಂದೆ ತೀರ್ಮಾನ ಮಾಡೋಣ ನಾಳೆಯಿಂದ ಪ್ರತಿ ಬೂತಿಗೂ ಹೋಗೋಣ. ಮತದಾರರ ಪಟ್ಟಿಯನ್ನು ಪರಿಶೀಲಿಸೋಣ. ಚುನಾವಣೆಗೆ ಇನ್ನು ಒಂದುವರೆ ವರ್ಷ ಬಾಕಿ ಇದೆ , ಪ್ರತಿ ಮನೆ ಮತ್ತು ಮನವನ್ನು ಮುಟ್ಟಬೇಕೆಂದು ಕೈ ಮುಗಿದು ಪ್ರಾರ್ಥಿಸುತ್ತೇನೆ ಕೇವಲ ಚುನಾವಣೆಗಾಗಿ ಮಾತ್ರ ರಾಷ್ಟ್ರಭಕ್ತರ ಬಳಗ ಅಲ್ಲ. ಸದೃಢ ಶಿವಮೊಗ್ಗ ಮಾಡಲು ಹೊರಟಿದ್ದೇವೆ ನನ್ನ ತಂದೆ ಡಿಸಿಎಂ. ಮಂತ್ರಿ ಆಗಿ ಮಾಡಿದ ಕಾರ್ಯ ನಿಮ್ಮ ಕಣ್ಣಮುಂದಿದೆ. ಗೋವರ್ಧನ ಟ್ರಸ್ಟ್. ಶ್ರೀಗಂಧದ ಮೂಲಕ ಜನರನ್ನು ಈಗಾಗಲೇ ಮುಟ್ಟಿದ್ದೇವೆ. ಪರಿಸರ ಉಳಿಸಲು 150 ಬಸ್ಸುಗಳಲ್ಲಿ 6500 ಜನರನ್ನು ಸೇರಿಸಿ ಇಲ್ಲಿಂದ ಸಾಗರಕ್ಕೆ ತೆರಳಿ ಪಂಪ್ ಸ್ಟೋರೇಜ್ ಯೋಜನೆ ವಿರುದ್ಧ ಹೋರಾಟ ಮಾಡಿದ್ದೇವೆ. ಯಾವುದೇ ಹಸುಗಳ ಅಕ್ರಮ ಸಾಗಾಟ ಇರಬಹುದು ಚರಂಡಿಗೆ ಬಿದ್ದ. ಕಾಲು ತುಂಡಾದ ರಸ್ತೆಯಲ್ಲಿ ಹಲ್ಲೆಗೊಳಗಾದ ಹಸುಗಳನ್ನು ಸಂರಕ್ಷಿಸಿದ್ದೇವೆ. ಹಸುಗಳಿಗೆ ಮೇವಿನ ವ್ಯವಸ್ಥೆ ಮಾಡಿದ್ದೇವೆ. ಮುಖ್ಯಮಂತ್ರಿಗಳು ಡಿಸೆಂಬರ್ ಅಂತ್ಯದೊಳಗೆ ಪಾಲಿಕೆ ಚುನಾವಣೆ ನಡೆಸುತ್ತೇವೆ ಎಂದಿದ್ದಾರೆ 35 ವಾರ್ಡಿಗೂ ರಾಷ್ಟ್ರಭಕ್ತರ ಬಳಗ ಅಭ್ಯರ್ಥಿ ನಿಲ್ಲಿಸಿ ಗೆಲ್ಲಿಸುತ್ತದೆ ಎಂದರು.
ಎಸ್ ಐ ಆರ್ ಮಾಹಿತಿ ಕೇಂದ್ರ. ಆಶ್ರಯ ಬಡಾವಣೆಗಾಗಿ ಹೋರಾಟ ಹೂವಿನ ಮಾರುಕಟ್ಟೆ ಕಟ್ಟಡ ಪೂರ್ಣಗೊಂಡರು ವಿತರಿಸದೆ ಇದ್ದಾಗ ಬಡ ವರ್ತಕರ ಪರ ಹೋರಾಟ. ಈ ಸ್ವತ್ತು ಮಾಡಿಕೊಡಲು ಲಕ್ಷಾಂತರ ಲಂಚ ತೆಗೆದುಕೊಳ್ಳುವಾಗ ರಾಷ್ಟ್ರಭಕ್ತರ ಬಳಗ ಹೋರಾಟ ಮಾಡಿ ನಾಗರಿಕರಿಗೆ ಕೂಡಲೇ ಈ ಸ್ವತ್ತು ಮಾಡಲು ಹೋರಾಟ. ಹಮ್ಮಿಕೊಂಡಿತು. ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕೆಂದು ನ್ಯಾಯಾಲಯದ ಮೆಟ್ಟಿಲನ್ನು ಏರಿತ್ತು ಅಷ್ಟೇ ಅಲ್ಲ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ಜಾಗವನ್ನು ಕೂಡ ಮುಸ್ಲಿಮರು ತಮ್ಮದೆಂದು ಹೇಳಿದಾಗ ಪಾಲಿಕೆ. ಜಿಲ್ಲಾಡಳಿತಕ್ಕೆ ಮತ್ತು ನ್ಯಾಯಾಲಯಕ್ಕೆ ಸೂಕ್ತ ದಾಖಲೆ ಒದಗಿಸಿ ಆ ಜಾಗವನ್ನು ಉಳಿಸಿಕೊಂಡಿತ್ತು. ಈ ರೀತಿ ಅನೇಕ ಸಾಧನೆ ಮತ್ತು ಜನಪರ ಕಾಳಜಿಯನ್ನು ರಾಷ್ಟ್ರಭಕ್ತರ ಬಳಗ ಮಾಡುತ್ತಾ ಬಂದಿದೆ. ಇಂದು ಪ್ರತಿ ಬೂತಿನಿಂದ ಬಂದ ಈ ದೇವ ದುರ್ಲಭ ಕಾರ್ಯಕರ್ತರು ನಮ್ಮ ಬೆಂಬಲಕ್ಕೆ ನಿಂತಿರುವುದೇ ಸಾಕ್ಷಿ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಸುರೇಶ್ ಶೆಟ್ಟಿ. ಸತ್ಯನಾರಾಯಣ.ಈ ವಿಶ್ವಾಸ್. ಮೋಹನ್ ಜಾದವ್. ರಮೇಶ್ ಬಾಬು ಜಾದವ್. ಶ್ರೀಕಾಂತ್, ಬಾಲು.ಆನಂದಣ್ಣ. ಗುರು ಶೇಟ್. ರಾಜು. ಶಿವಾಜಿ. ಲತಾ ಗಣೇಶ್. ಸುವರ್ಣ ಶಂಕರ್.ಲಕ್ಷ್ಮಿ ಶಂಕರ್ ನಾಯಕ್.ಕೆಂಪಮ್ಮ. ಅನಿತಾ ಮಂಜುನಾಥ್. ಸೀತಾ ಲಕ್ಷ್ಮಿ , ಸಿರೀಶ್. ಮೋಹನ್. ಕುಬೇರಪ್ಪ.ಗಾರೆ ನಾಗಣ್ಣ ಮತ್ತಿತರರಿದ್ದರು.