” ಕೆವೈಸಿ ನವೀಕರಿಸಿ, ಇಲ್ಲವಾದರೆ ನಿಮ್ಮ ಖಾತೆಯನ್ನು ಬ್ಲಾಕ್ ಮಾಡಲಾಗುತ್ತದೆ” ಎಂಬ ಸಂದೇಶ ನಿಮಗೆ ಬಂದಿದೆಯೇ?

ಗಾಬರಿಯಾಗಬೇಡಿ—ಇದು ವಂಚನೆ! ಕ್ಲಿಕ್ ಮಾಡುವ ಮೊದಲು ಯೋಚಿಸಿ.
ವಂಚಕರು ನಕಲಿ ತುರ್ತು ಪರಿಸ್ಥಿತಿಗಳನ್ನು ಸೃಷ್ಟಿಸುತ್ತಾರೆ.

ಈ 3 ನಿಯಮಗಳಿಂದ ಅವರನ್ನು ಸೋಲಿಸಿ:
- ನಿಲ್ಲಿ: ಆತುರದಲ್ಲಿ ಕ್ರಮ ಕೈಗೊಳ್ಳಬೇಡಿ!
- ಯೋಚಿಸಿ: ಬ್ಯಾಂಕ್ಗಳು/NBFCಗಳು ಕೆವೈಸಿ ನವೀಕರಣಕ್ಕಾಗಿ ಎಂದಿಗೂ ಲಿಂಕ್ಗಳನ್ನು ಕಳುಹಿಸುವುದಿಲ್ಲ.
- ಕ್ರಮ ಕೈಗೊಳ್ಳಿ: ಇಂತಹ ಲಿಂಕ್ಗಳನ್ನು ಎಂದಿಗೂ ಕ್ಲಿಕ್ ಮಾಡಬೇಡಿ ಅಥವಾ ನಿಮ್ಮ OTP, PIN ಮತ್ತು ಪಾಸ್ವರ್ಡ್ಗಳನ್ನು ಹಂಚಿಕೊಳ್ಳಬೇಡಿ. ನಿಮ್ಮ ಬ್ಯಾಂಕ್ / NBFC ಜೊತೆ ಪರಿಶೀಲಿಸಿ.
ಅಪರಿಚಿತ ಲಿಂಕ್ = ತಿಳಿಯದ ಅಪಾಯಗಳು!
ಹೆಚ್ಚಿನ ವಿವರಗಳಿಗಾಗಿ: https://m.rbi.org.in/FinancialEducation/
RBI ಹೇಳುತ್ತದೆ – ಜಾಣರಾಗಿರಿ, ಜಾಗರೂಕರಾಗಿರಿ!
WhatsApp ಸೂಚನೆ ನಿಲ್ಲಿಸಲು ‘STOP’ ಎಂದು ಬರೆಯಿರಿ
