ಶಿವಮೊಗ್ಗ: ಕಾಂಗ್ರೆಸ್ ಯುವ ಮುಖಂಡ ಡಾ.ಶರತ್ ಮರಿಯಪ್ಪ ನೇತೃತ್ವದ ಡಾ.ಶರತ್ ಮರಿಯಪ್ಪ ಫೌಂಡೇಶನ್ ಮೂಲಕ ಮುಂಬರುವ ದಿನಗಳಲ್ಲಿ ಉಚಿತ ಕೋಚಿಂಗ್ ಮತ್ತು ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗುತ್ತದೆ.

ಈ ಕುರಿತು ಡಾ.ಶರತ್ ಮರಿಯಪ್ಪ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸರ್ಕಾರ ಈಗಾಗಲೇ ಪೊಲೀಸ್ ಇಲಾಖೆ ನೇಮಕಾತಿ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದೆ. ಈ ನೇಮಕಾತಿ ಪರೀಕ್ಷೆ ತೆಗೆದುಕೊಳ್ಳವ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಉಚಿತ ಕೋಚಿಂಗ್ ತರಬೇತಿಯನ್ನು ಸೆ. ೨೨ ರಿಂದ ಆರಂಭಿಸಲಾಗುತ್ತದೆ ಎಂದರು.

ಡಿಸೆಂಬರ್ ತಿಂಗಳಲ್ಲಿ ಬೃಹತ್ ಉದ್ಯೋಗ ಮೇಳವನ್ನು ನಡೆಸಲು ಆಲೋಚಿಸಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ೧೨೦ ಕ್ಕೂ ಪ್ರತಿಷ್ಠಿತ ಕಂಪನಿಗಳ ಜೊತೆಗೆ ಮಾತು ಕತೆ ನಡೆಸಲಾಗಿದೆ. ದೊಡ್ಡ ಮಟ್ಟದಲ್ಲಿ ಈ ಮೇಳ ನಡೆಸಲು ಉದ್ದೇಶಿಸಲಾಗಿದೆ. ಶಿವಮೊಗ್ಗ ನಗರದ ವಿದ್ಯಾವಂತ ಯುವ ಜನರಿಗೆ ಇದರ ಸದುಪಯೋಗ ಆಗಲಿ ಎನ್ನುವುದು ಫೌಂಡೇಶನ್ ಉದ್ದೇಶವಾಗಿದೆ ಎಂದರು.

ಡಾ.ಶರತ್ ಮರಿಯಪ್ಪ ಫೌಂಡೇಶನ್ ಸಾರ್ವಜನಿಕ ಚಟುವಟಿಕೆ ಮುಕ್ತವಾಗಿ ತೆರೆದುಕೊಂಡಿದೆ. ಈಗಾಗಲೇ ರನ್ ಮಲೆನಾಡು ಕಾರ್ಯಕ್ರಮ ನಡೆಸಿದ್ದು, ಇದಕ್ಕೆ ಸಿಕ್ಕ ವ್ಯಾಪಾಕ ಬೆಂಬಲ ಮತ್ತ? ಉತ್ತೇಜನ ನೀಡಿದೆ. ಮುಂದಿನ ದಿನಗಳಲ್ಲಿ ಇಂತಹ ಹಲವು ಕಾರ್ಯಕ್ರಮ ನಡೆಸಲು ಚಿಂತನೆ ನಡೆಸಲಾಗಿದೆ ಎಂದರು.