97 ಜನರಿಗಷ್ಟೇ ಸೊಂಕು, ಮೂವರ ಸಾವು!
ಶಿವಮೊಗ್ಗ,ಜು.02:
ಇಂದು ಜಿಲ್ಲೆಯಲ್ಲಿ ತಗ್ಗಿದ ಕೊರೊನಾ ಸೋಂಕಿತರ ಸಂಖ್ಯೆ. ಇಂದು ಜಿಲ್ಲೆಯಲ್ಲಿ 97 ಜನರಲ್ಲಿ ಕೊರೋನ ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 989 ಸಕ್ರಿಯ ಪ್ರಕರಣಗಳಿವೆ.
4296 ಜನರಿಗೆ ಕೊರೋನ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 3950 ಜನರಿಗೆ ನೆಗೆಟಿವ್ ಬಂದಿದೆ. ಇಂದು ಜಿಲ್ಲೆಯಲ್ಲಿ 3 ಜನ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಇದುವರೆಗು ಜಿಲ್ಲೆಯಲ್ಲಿ 989 ಜನ ಕೊರೊನಾ ಸೋಂಕಿನಿಂದ ಸಾವಿನ್ನಪ್ಪಿದಾರೆ.
ಇಂದು 95 ಜನ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 197 ಜನ ನಿಗದಿತ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 142 ಜನ ಸೋಂಕಿನಿಂದ ದಾಖಲಾಗಿದ್ದಾರೆ. 329 ಜನ ಮನೆಯಲ್ಲಿಯೇ ಐಸೋಲೇಷನ್ ಆಗಿದ್ದಾರೆ.
ತಾಲೂಕಿನ ವರದಿ
ಶಿವಮೊಗ್ಗ : 45
ಭದ್ರಾವತಿ : 23
ಶಿಕಾರಿಪುರ : 4
ತೀರ್ಥಹಳ್ಳಿ : 9
ಸೊರಬ : 1
ಸಾಗರ : 7
ಹೊಸನಗರ : 8
ಇತರೆ:
ಗಾಂಜಾ ಮಾರಾಟ: ತುಂಗಾನಗರ ಪೊಲೀಸರಿಂದ ಮೂವರ ಬಂಧನ
ಶಿವಮೊಗ್ಗ,ಜು.02:
ನಗರದ ಜೆಪಿ ನಗರದಲ್ಲಿ ಇಂದು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ತುಂಗಾ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಯ್ಯೂಬ್, ಸುಹೈಲ್,ಅಮ್ಜದ್ ಬಂಧಿತ ಅರೋಪಿಗಳು.
ಡಿವೈಎಸ್ ಪಿ ಪ್ರಶಾಂತ್ ಜಿ ಮುನ್ನೋಳಿಯವರ ನೇತೃತ್ವದಲ್ಲಿ ನಡೆದಿದ್ದು, ತುಂಗಾನಗರ ಸರ್ಕಲ್ ಇನ್ಸ್ ಪೆಕ್ಟರ್ ದೀಪಕ್ ಹಾಗೂ ಸಿಬ್ಬಂದಿಗಳ ಕಾರ್ಯ ಮೆಚ್ಚುಗೆಗೆ ವ್ಯಕ್ತವಾಗಿದೆ.
ಅತೀ ಹೆಚ್ಚು ಪ್ರಮಾಣದ ಗಾಂಜಾ ಮಾರಾಟದ ಪ್ರಕರಣ ಇದಾಗಿದ್ದು, ಆರೋಪಿಗಳ ಪತ್ತೆ ಹಾಗೂ ಗಾಂಜಾ ವಶಪಡಿಸಿಕೊಂಡಿರುವುದಕ್ಕೆ ಸಾರ್ವಜನಿಕರು ಪ್ರಶಂಸಿಸಿದ್ದಾರೆ.
ಟ್ರ್ಯಾಕ್ಟರ್‌ನಿಂದ ಬಿದ್ದು ಸಾವು
ಶಿವಮೊಗ್ಗ: ಟ್ರ್ಯಾಕ್ಟರ್‌ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿದ ಪರಿಣಾಮ ಅದರ ಮಡ್‌ಗಾರ್ಡ್ ಮೇಲೆ ಕುಳಿತಿದ್ದ ವ್ಯಕ್ತಿ ಹಾರಿಬಿದ್ದು, ತೀವ್ರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವಿಗೀಡಾದ ಘಟನೆ ಇಲ್ಲಿನ ಕುಂಸಿ ಸಮೀಪದ ರಾಗಿಹೊಸಳ್ಳಿಯಲ್ಲಿ ಸಂಭವಿಸಿದೆ.
ಕುಂಸಿಯ ಶಾಂತಪ್ಪ (೭೭)ಸಾವನ್ನಪ್ಪಿದವರು. ಟ್ರ್ಯಾಕ್ಟರನ್ನು ಪವನ್‌ಕುಮಾರ್ ಎಂಬಾತ ಚಾಲನೆ ಮಾಡುತ್ತಿದ್ದನು. ರಾಗಿಹೊಸಳ್ಳಿಗೆ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ವೇಗವಾಗಿ ಹೋಗುವಾಗ ಈ ಘಟನೆ ಸಂಭವಿಸಿದೆ. ಶಾಂತಪ್ಪ ಕೆಳಕ್ಕೆ ಬಿದ್ದಿದ್ದರು. ಅವರ ಬಲಭಾಗದ ಸೊಂಟಕ್ಕೆ ಪೆಟ್ಟು ಬಿದ್ದಿತ್ತು. ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಲಾಗಿತ್ತಾದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತನ ಮಗ ರಮೇಶ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಶಿವಮೊಗ್ಗ: ಟ್ರ್ಯಾಕ್ಟರ್ ಮಗುಚಿ ಸಾವು
ಹೊಲದಲ್ಲಿ ಉಳುಮೆ ಮಡಿ ಮನೆಗೆ ಬರುತ್ತಿದ್ದ ಟ್ರ್ಯಾಕ್ಟರನ್ನು ಅತಿವೇಗದಿಂದ ಚಲಾಯಿಸಿದ್ದರಿಂದ ಅದು ಮಗುಚಿ ಓರ್ವ ಸಾವಿಗೀಡಾದ ಘಟನೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿದ್ಲೀಪುರದಲ್ಲಿ ಸಂಭವಿಸಿದೆ.
ಕೆಂಚಪ್ಪ (೪೮) ಸಾವಿಗೀಡಾದವರು. ಅತಿವೇಗದಲ್ಲಿದ್ದ ಟ್ರ್ಯಾಕ್ಟರ್ ಮಗುಚಿ ಅವರ ತಲೆ ಮೇಲೆಯೇ ಬಿದ್ದಿತು. ಇದರಿಂದ ತೀವ್ರ ಗಾಯಗಳಾಗಿ ಮೃತರಾದರು. ಈ ಸಂಬಂಧ ಅವರ ಮಗ ಮೋಹನ್‌ಕುಮಾರ್ ದೂರು ನೀಡಿದ್ದಾರೆ.
ಹೊಳೆಯಲ್ಲಿ ಬಿದ್ದು ಸಾವು
ಬಟ್ಟೆ ತೊಳೆಯಲು ತಾಯಿಯ ಜೊತೆ ಹೊಳೆಗೆ ತೆರಳಿದ್ದ ಆಕೆಯ ಇಬ್ಬರು ಮಕ್ಕಳಲ್ಲಿ ಒಬ್ಬ ನೀರಿನಲ್ಲಿ ಆಟವಾಡುತ್ತಾ ಮುಳುಗಿ ಸಾವನ್ನಪ್ಪಿದ ಘಟನೆ ರಿಪ್ಪನ್‌ಪೇಟೆ ಠಾಣೆ ವ್ಯಾಪ್ತಿಯ ಮುತ್ತಲದಲ್ಲಿ ಸಂಭವಿಸಿದೆ.
ಮುತ್ತಲದ ವಾಸಿ ಶೇಷಗಿರಿ ಎನ್ನುವವರ ಪತ್ನಿ ಮಧುಮತಿ ಅವರು ತನ್ನ ಮಕ್ಕಳಾದ ಸಂಜಯ್ ಮತ್ತು ಸಿದ್ದೇಶ್ ಜೊತೆ ತೆರಳಿದ್ದಳು. ಈ ವೇಳೆ ಎರಡನೆ ಮಗ ಸಿದ್ದೇಶ ಆಕಸ್ಮಿಕವಾಗಿ ಕಾಲುಜಾರಿ ಹೊಳೆಯ ಗುಂಡಿಗೆ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.