ಶಿವಮೊಗ್ಗ: ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಗುಡ್ಡೇಕಲ್ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಆಗಸ್ಟ್ 6 ರಂದು “ಭರಣಿ” ಮತ್ತು 7ರಂದು “ಆಡಿಕೃತ್ತಿಕೆ” ಜಾತ್ರೆ ನಡೆಸಲು ತಿರ್ಮಾನಿಸಲಾಗಿದೆ.

ಆಡಿಕೃತ್ತಿಕೆ ಜಾತ್ರೆಯು ಸುಮಾರು ದಶಕಗಳಿಂದಲೂ ನಡೆಯುತ್ತಾ ಬಂದಿದೆ. ಈ ಜಾತ್ರೆಗೆ ಹಲವು ರಾಜ್ಯ,

ಜಿಲ್ಲೆ,ತಾಲ್ಲೂಕುಗಳಿಂದ ಭಕ್ತಾದಿಗಳು ಹರಕೆ ಸಲ್ಲಿಸಲು ಕಾವಡಿಗಳು ಮತ್ತು ವೇಲ್ಗಳನ್ನು ತೆಗೆದುಕೊಂಡು ಬಂದು ಹರಕೆ ಸಲ್ಲಿಸುವುದು ವಾಡಿಕೆಯಲ್ಲಿರುತ್ತದೆ ಎಂದು ಕಾರ್ಯದರ್ಶಿ ಎಂ.ಲೋಕೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.