
ದಂಡಪ್ರಭುತ್ವ vs ಪ್ರಜಾಪ್ರಭುತ್ವ/ ನಾವು ತೆರಿಗೆ ಕಟ್ಟುವ ಎಟಿಎಂಗಳಾ…?
ಸಂಚಾರಿ ನಿಯಮ ಮುರಿದರೆ ನಮಗೆ ದಂಡ.
ಜವಾಬ್ದಾರಿ ಮರೆತರೆ ಅವರಿಗೆ ಬಡ್ತಿ.
ಇದೇನಾ ನಮ್ಮ ಪ್ರಜಾಪ್ರಭುತ್ವ?
ನಮಗಿರುವ ಸಂಚಾರಿ ನಿಯಮಗಳ ದಂಡದ ಪಟ್ಟಿ ನೋಡಿ ಹೇಗಿದೆ ಎಂದು
ಹೆಲ್ಮೆಟ್ ಇಲ್ಲ – ₹1,000
ವಿಮೆ ಇಲ್ಲ – ₹1,000
ಮಾಲಿನ್ಯ ಇಲ್ಲ – ₹1,100
ಮೊಬೈಲ್ – ₹2,000
ಟ್ರಿಪಲ್ ಸೀಟ್ – ₹2,000
ನೋ-ಪಾರ್ಕಿಂಗ್ – ₹3,000
ಪ್ರವೇಶ ನಿಷೇಧ – ₹5,000
ಕುಡಿದು ಓಡಿಸಿದರೆ – ₹10,000
ಒಂದು ತಪ್ಪಿಗೆ ಇಡೀ ತಿಂಗಳ ಸಂಬಳ ಹೋಗುತ್ತದೆ.
ಆದರೆ ನಿಯಮ ಮಾಡಿದವರ ಲೆಕ್ಕ ನೋಡಿ:
ಹೊಂಡದ ರಸ್ತೆ – 0 ರೂ ದಂಡ
ಸತ್ತುಹೋದ ಸಿಗ್ನಲ್ – 0 ರೂ ದಂಡ
ಕತ್ತಲ ಬೀದಿ – 0 ರೂ ದಂಡ
ಕಸದ ಕಾಲುದಾರಿ – 0 ರೂ ದಂಡ
ಅರ್ಧಕ್ಕೆ ನಿಂತ ಕಾಮಗಾರಿ – 0 ರೂ ದಂಡ
ಚರಂಡಿ ನೀರು – 0 ರೂ ದಂಡ
ಬಿಡಾಡಿ ದನದಿಂದ ಅಪಘಾತ – 0 ರೂ ದಂಡ
ಹೊಂಡಕ್ಕೆ ಬಿದ್ದು ಸಾವು – 0 ರೂ ದಂಡ, ಕೇವಲ “ವಿಚಾರಣೆ ನಡೆಯುತ್ತಿದೆ” ಅಂತ ಪೇಪರ್ ನ್ಯೂಸ್ ಅಷ್ಟೇ..!

ಯಾಕೆ? ಹೀಗೆ ಸರ್ಕಾರಕ್ಕೆ ಮತ್ತು ಅಧಿಕಾರ ವರ್ಗಕ್ಕೆ ಹಕ್ಕು ಮಾತ್ರ ಗೊತ್ತು, ಕರ್ತವ್ಯ ಗೊತ್ತಿಲ್ಲ.
ಜನರಿಂದ ತೆರಿಗೆ ವಸೂಲಿ ಮಾಡುವುದು ಅವರ ಹಕ್ಕು.
ಜನರಿಗೆ ಮೂಲಭೂತ ಸೌಲಭ್ಯ ಕೊಡುವುದು ಅವರ ಕರ್ತವ್ಯ.
ಆದರೆ ಅವರು ಕರ್ತವ್ಯವನ್ನು ಡಸ್ಟ್ಬಿನ್ಗೆ ಎಸೆದಿದ್ದಾರೆ.
ನಮಗೆ ದಂಡ ಹಾಕಲು ರಸ್ತೆಯ ಮೂಲೆ ಮೂಲೆಗೂ ಸಿ ಸಿ ಕ್ಯಾಮೆರಾ ಇದೆ.
ಆದರೆ ಹೊಂಡಕ್ಕೆ, ಕಸಕ್ಕೆ, ಕತ್ತಲೆಗೆ ಸಿ ಸಿ ಯಾಕಿಲ್ಲ?
ಅಲ್ಲಿ ಸಿಕ್ಕಿ ಬೀಳುವುದು “ಅವರು”.
ನಾವು ಕಷ್ಟಪಟ್ಟು ದುಡಿಯಬೇಕು.
ಬೆಲೆ ಏರಿಕೆ ಸಹಿಸಬೇಕು.
ಟೋಲ್ ಕಟ್ಟಬೇಕು.
ತೆರಿಗೆ ಕಟ್ಟಬೇಕು.
ದಂಡ ಕಟ್ಟಬೇಕು.
ಮತ್ತೆ 5 ವರ್ಷಕ್ಕೆ ಒಮ್ಮೆ “ಜೈ” ಹೊಡೆದು ಅವರನ್ನು ಅಧಿಕಾರಕ್ಕೆ ತರಬೇಕು.
ಇದು ಸೇವೆ ಅಲ್ಲ ಒಂದು ರೀತಿಯಲ್ಲಿ ಸುಲಿಗೆ.
ಇದು ಆಡಳಿತ ಅಲ್ಲ, ಇದು ದಂಡಾಧಿಕಾರ.
ರಸ್ತೆ ಸರಿಯಿಲ್ಲದೆ ಅಪಘಾತವಾದರೆ ಆ ಅಧಿಕಾರಿಯ ಸಂಬಳದಿಂದ ಪರಿಹಾರ ಕೊಡಿಸುವ ಕಾನೂನು ಯಾವಾಗ ಬರುತ್ತದೆ?
ಜನರ ಪ್ರಾಣಕ್ಕೆ ಬೆಲೆ ಇಲ್ಲವೇ?
ಎಚ್ಚೆತ್ತುಕೊಳ್ಳ ಬೇಕು ಸರ್ಕಾರ..
ನಾವು ಮೂಕ ಪ್ರಜೆಗಳಲ್ಲ. ನಾವು ಪ್ರಶ್ನೆ ಮಾಡುವ ನಾಗರಿಕರು.
ನೀವು ದಂಡ ಹಾಕುವ ಮುನ್ನ, ಮೊದಲು ನಿಮ್ಮ ನಿರ್ಲಕ್ಷ್ಯಕ್ಕೆ ರಾಜೀನಾಮೆ ಕೊಡಿ.
ದಂಡ ಬೇಕಾದರೆ ಎರಡೂ ಕಡೆಗೆ ಇರಲಿ. ಇಲ್ಲದಿದ್ದರೆ ಒಂದೂ ಕಡೆಗೆ ಇರಬಾರದು.
