ಶಿವಮೊಗ್ಗ : ಅಯೋಧ್ಯೆ ರಾಮಮಂದಿರದ ದೇಣಿಗೆ ಲೂಟಿಯಾಗಿರುವುದು ರಾಮಭಕ್ತರಿಗೆ ಆಘಾತ ತಂದಿದೆ. ಈ ಲೂಟಿಕೋರರ ಬಗ್ಗೆ ತನಿಖೆಮಾಡಿ, ಅವರ ವಿರುದ್ಧ ಕಠಿಣಕ್ರಮ ಕೈಗೊಳ್ಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ಕೇಂದ್ರ ಸರ್ಕಾರ ಹಗುರವಾಗಿ ತೆಗೆದುಕೊಂಡಿಲ್ಲ ಎಂದು ನಂಬಿದ್ದೇನೆ. ಈ ಲೂಟಿಕೋರರು ಆರು ತಿಂಗಳ ಮುಂಚೆಯೇ ವ್ಯವಸ್ಥಿತವಾಗಿ ಸಂಚುರೂಪಿಸಿ ಅಲ್ಲಿಯ ಸಿಸಿ ಕ್ಯಾಮೇರಾಗಳನ್ನು ಹಾಳು ಮಾಡಿದ್ದರು ಎನ್ನಲಾಗಿದೆ. ಈ ಲೂಟಿ ಕೂಡ ಸರ್ಕಾರಕ್ಕೆ ಮತ್ತು ರಾಮಭಕ್ತರಿಗೆ ಎಚ್ಚರಿಕೆಯ ಘಂಟೆಯಾಗಿದೆ. ಮಂದಿರ ಟ್ರಸ್ಟ್ನ ಆಡಳಿತ ವೈಫಲ್ಯ ಎದ್ದು ಕಾಣುತ್ತಿದೆ. ಬಿಜೆಪಿ, ಆರ್.ಎಸ್.ಎಸ್. ಕೂಡ ಭಾಗಿಯಾಗಿದೆ ಎಂಬ ಆರೋಪವನ್ನು ರಾಮಮಂದಿರ ಮಾಡುವುದೇ ಬೇಡ ಎಂದವರು ಮಾಡುತ್ತಿದ್ದಾರೆ. ಲೂಟಿ ಬಗ್ಗೆ ಅವರು ಈಗ ಗಮನಹರಿಸುತ್ತಿದ್ದಾರೆ. ಪುಣ್ಯಕ್ಷೇತ್ರದ ಗೌರವ ಹಾಳಾಗುತ್ತಿದೆ. ಯಾರೇ ಇದ್ದರೂ ತಕ್ಕಶಿಕ್ಷೆಯಾಗಬೇಕು. ಯಾರೋ ಒಬ್ಬರು ಮಾಡಿದ್ದರೆ ಇಡೀ ಕುಟುಂಬವನ್ನೇ ದೂಷಿಸುವುದು ಸರಿಯಲ್ಲ, ತಾಯಿ ಸೀತಾಮಾತೆಯ ಬಗ್ಗೆಯೂ ಅನುಮಾನ ಪಟ್ಟಿದ್ದರು. ರಾಮಮಂದಿರ ನಿರ್ಮಾಣ ಈ ದೇಶದ ಇತಿಹಾಸವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಎನ್ಸಿಇಆರ್ಟಿಯ ೬ನೇ ತರಗತಿ ಸಮಾಜ ವಿಜ್ಞಾನ ಪಠ್ಯ-ಪುಸ್ತಕಕ್ಕೆ ’ಕೃಷ್ಣ’ ಎಂದು ಹೆಸರಿಸಿದ್ದಾರೆ. ಇದು ಈಗ ದೇಶಾದ್ಯಂತ ವ್ಯಾಪಕ ಟೀಕೆಗೆ ಒಳಗಾಗಿದೆ ಎಂಬ ವಿವಾದಕ್ಕೆ ಉತ್ತರಿಸಿದ ಅವರು ಈ ದೇಶದ ಜನ ಅದಕ್ಕೆ ಬೆಂಬಲ ಕೊಡುವುದಿಲ್ಲ. ಇಲ್ಲಿ ಕಂಸನ ವಂಶಸ್ಥರೂ ಇದ್ದಾರೆ. ಹಿಂದೂ ಧರ್ಮದ ಬಗ್ಗೆ ಆಕ್ರಮಣ ಇದೇ ಮೊದಲಲ್ಲ. ಕೃಷ್ಣ-ರಾಮನ ಬಗ್ಗೆ ಟೀಕೆ ಮಾಡುವವರು ಈ ದೇಶದಲ್ಲಿದ್ದಾರೆ ಎಂದರು.
ನನ್ನ ಭ್ರಷ್ಟಾಚಾರದ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ. ನಾನು ಮಂತ್ರಿಯಾದಾಗ ನನ್ನ ಮೇಲೆ ಆರೋಪ ಬಂದಾಗ ಕೂಡಲೇ ರಾಜೀನಾಮೆ ನೀಡಿದ್ದೇನೆ. ಹೈಕಮಾಂಡ್ ಬೇಡವೆಂದರೂ ನಾನು ರಾಜೀನಾಮೆ ನೀಡಿ, ಹೊರಗೆ ಬಂದು ತನಿಖೆಗೆ ಸಹಹರಿಸಿದ್ದೇ. ತನಿಖೆಯಲ್ಲಿ

ನಿರಪರಾಧಿಯಂದು ತೀರ್ಮಾನವಾಗಿದೆ. ೧೭ಜನರು ಪಕ್ಷಕ್ಕೆ ಬಂದರೂ ಅವರಿಂದಲೇ ನನಗೆ ಅಧಿಕಾರ ಸಿಕ್ಕಿದೆ ಎಂದು ಕೆಲವರು ನನ್ನ ಮೇಲೆ ಹೇಳುತ್ತಿದ್ದಾರೆ. ನಾನು ಹೇಳಿದ್ದನ್ನು ತಿರುಚಲಾಗಿದೆ. ನಾನು ಯಾರೋಬ್ಬರ ಹೆಸರನ್ನೂ ಹೇಳಿಲ್ಲ. ಅಧಿಕಾರಕ್ಕಾಗಿ ಬಂದವರಿಂದ ಆಗಿನ ಸರ್ಕಾರ ಬಿದ್ದುಹೋಯಿತು. ಈಗ ಈ ಸರ್ಕಾರ ಕೂಡ ಅದೇ ತಪ್ಪು ಮಾಡಿದೆ. ಇದು ಕೂಡ ಉಳಿಯುವುದಿಲ್ಲ ಎಂದು ಹೇಳಿದ್ದೇನೆ. ವ್ಯವಸ್ಥೆಯ ಬಗ್ಗೆ ನಾನು ಆರೋಪಿಸಿದ್ದೇನೆ. ನಮ್ಮ ಸಿದ್ದಾಂತವನ್ನು ನಾವು ಬಿಡುವುದಿಲ್ಲ ಎಂದು ಹೇಳಿದರು.