ಶಿವಮೊಗ್ಗ : ಗೋವರ್ಧನ ಟ್ರಸ್ಟ್ ಕಚೇರಿ ಮತ್ತು ಗೋ ಉತ್ಪನ್ನಗಳ ಮಾರಾಟ ಕೇಂದ್ರ ಉದ್ಘಾಟನ ಸಮಾರಂಭವನ್ನು ಜೂ.೨೨ರ ಬೆಳಿಗ್ಗೆ ೯ ಗಂಟೆಗೆ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದ ಬಳಿ ನಡೆಯಲಿದೆ ಎಂದು ಟ್ರಸ್ಟ್ನ ಖಜಾಂಚಿ ಎಸ್.ಕೆ.ಶೇಷಾಚಲ ತಿಳಿಸಿದರು.
ಶುಕ್ರವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಟ್ರಸ್ಟ್ ಗೋವಿನ ಮತ್ತು ಗೋಶಾಲೆಗಳ ಅಭಿವೃದ್ದಿಗಾಗಿ ಈಗಾಗಲೇ ಪ್ರಥಮ ವರ್ಷದಲ್ಲಿಯೇ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದು, ಪ್ರತಿ ತಿಂಗಳು ಶಿವಮೊಗ್ಗದ ಮೂರು ಗೋಶಾಲೆಗಳಿಗೆ ಮೇವು ಸರಬರಾಜು, ಮೇವಿನ ಬೆಳೆಗಾಗಿ ಹನ್ನೆರಡು ಎಕರೆಯಲ್ಲಿ ಮೇವು ಬೆಳೆಸುವ ಯೋಜನೆ, ಅನೇಕ ಗೋವಿನ ಹಬ್ಬಗಳು, ಗೋಮಾತಾ ಜಾಗೃತ ಅಭಿಮಾನದಲ್ಲಿ ೧೦ ಸಾವಿರಕ್ಕೂ ಹೆಚ್ಚು ಮನೆಗಳನ್ನು ಅಭಿಮಾನಿ ಪಡೆ ಕಟ್ಟಲಾಗಿದೆ ಎಂದರು.

ಟ್ರಸ್ಟ್ ತನ್ನದೆಯಾದ ಕಚೇರಿಯನ್ನು ಆರಂಭಿಸುತ್ತಿದ್ದು, ಪ್ರಮುಖ ಗೋಶಾಲೆಗಳ ಉತ್ಪನ್ನಗಳನ್ನು ಖರೀದಿಸಿ ಇಲ್ಲಿ ಮಾರಾಟ ಮಾಡುವ ಯೋಜನೆಯೂ ಆರಂಭವಾಗಲಿದೆ. ಗೋವರ್ಧನ ಎಂಟರ್ಪ್ರೈಸೆಸ್ಸ್ ಎಂಬ ನಾಮಾಂಕಿತದಲ್ಲಿ ಈ ಯೋಜನೆ ರೂಪಗೊಂಡಿದೆ. ಪ್ರಸುತ್ರ ನೂರುಕ್ಕೂ ಹೆಚ್ಚು ರೀತಿಯ ಗೋ ಉತ್ಪನ್ನಗಳು ಉತ್ಪಾದನೆಯಾಗುತ್ತಿದೆ. ಇಲ್ಲಿ ಸಾರ್ವಜನಿಕರು ಸಹ ಇದನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಮುಂಬರುವ ದಿನಗಳಲ್ಲಿ ಹತ್ತಿರದ ಸ್ಥಳಗಳಲ್ಲಿ ಸಿಗುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಪ್ರಸುತ್ತ ಈ ಕೇಂದ್ರದಲ್ಲಿ ಕನ್ನೇರಿ ಗೋಶಾಲೆ, ಯತ್ನಾಳ್ ಗೋ ಶಾಲೆ, ರಾಮಚಂದ್ರಪುರದ ಗೋಶಾಲೆ ಹಾಗೂ ಸುರಭಿ ಗೋಶಾಲೆಯ ಮೂವತ್ತು ಹೆಚ್ಚು ವಿವಿಧ ರೀತಿಯ ಗೋ ಉತ್ಪನ್ನಗಳು ಸಿಗಲಿವೆ ಎಂದರು.

ಕಚೇರಿ ಹಾಗೂ ಮಾರಾಟ ಕೇಂದ್ರದ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಆದಿಚುಂಚನ ಗಿರಿ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ವಹಿಸಲಿದ್ದು, ಟ್ರಸ್ಟ್ನ ಅಧ್ಯಕ್ಷ ಕೆ.ಈ.ಕಾಂತೇಶ್, ಖಜಾಂಚಿ ಎಸ್.ಕೆ.ಶೇಷಾಚಲ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಟ್ರಸ್ಟ್ನ ಪೋಷಕರಾದ ಕೆ.ಎಸ್.ಈಶ್ವರಪ್ಪ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಈ.ಕಾಂತೇಶ್, ಉಮೇಶ್ ಆರಾಧ್ಯ, ಎಂ.ನಾಗೇಶ್, ಸೂರ್ಯನಾರಾಯಣ, ಸ್ವರೂಪ್ ಇನ್ನಿತರರು ಇದ್ದರು.