
ಬರಹ: ಗಜೇಂದ್ರ ಸ್ವಾಮಿ,
ಚಿತ್ರಗಳು: ಅಂತೋಣಿ
.
ನಿಜಕ್ಕೂ ಆ ಕ್ಷಣ ಕುಶಿ ಎನಿಸಿತು, ನಾನು ಹಾಗೂ ಮಿತ್ರ ವರದಿಗಾರ/ ಪೋಟೋಗ್ರಾಫರ್ ಅಂತೋಣಿ ಬೆಕ್ಕಿನ ಕಲ್ಮಠಕ್ಕೆ ಹೋಗಿದ್ವಿ, ಸಹಜವಾಗಿ ಗಾಡಿ ನಿಲ್ಲಿಸಿ ತುಂಗೆಯಂಗಳ ನೋಡುತ್ತಿದ್ದೆವು. ಸಖತ್ ಕುಶಿ ಅನಿಸಿದ, ಕಣ್ಣಿಗೆ ಹರುಷ ನೀಡಿದ ಚಿತ್ರಣ ಅದಾಗಿತ್ತು.




ತುಂಗೆಯಂಗಳದಲ್ಲಿ ಕಡಿಮೆ ನೀರಿತ್ತು, ಅಲ್ಲಲ್ಲಿ ಗಿಡಮರ, ಬಳ್ಳಿ ಬೆಳೆದಿದ್ದವು. ಅದರ ನಡುವೆ ಅಲ್ಲಲ್ಲೇ ಇದ್ದ ಕಲ್ಲು ಬಂಡೆಗಳ ಮೇಲೆ ಮೂರು ತರದ ಪಕ್ಷಿಗಳ ಗುಂಪುಗಳು ಕಾಣಿಸಿದವು.
ಆಸ್ಟ್ರೇಲಿಯಾ, ಯೂರೋಪ್ ನಲ್ಲಿ ಕಂಡುಬರುವ ಇಬ್ಬೀಸ್, ಉತ್ತರ ಭಾರತದ ಕಾರ್ಮರೆಂಟ್ಸ್ ಪಕ್ಕಿಗಳು ಕುಳಿತಿದ್ದವು, ಇನ್ನೊಂದು ಗುಂಪಿನ ಹಕ್ಕಿ ಹೆಸರು ಗೊತ್ತಾಗಲಿಲ್ಲ.

ಕಾರ್ಮರೆಂಟ್ಸ್ ಪಕ್ಕಿಗಳು ಧ್ಯಾನ ಮಾಡುವಂತೆ ಕುಳಿತು ಮೀನುಗಳ ಬೇಟೆಯ ಕಡೆ ಗಮನಿಸುತ್ತಿದ್ದವೆನಿಸುತ್ತದೆ. ಇಬ್ಬೀಸ್ ನ ಬಹಳಷ್ಟು ಪಕ್ಷಿಗಳು ಕುಳಿತಿರಲಿಲ್ಲ, ಅದೂ ಒಂಟಿಕಾಲಿನಲ್ಲಿ ಆಹಾರ ಹುಡುಕುತ್ತಿದ್ದವೆನಿಸುತ್ತೆ.

ಈ ಸುಂದರ ದೃಶ್ನವನ್ನು ಅಂತೋಣಿ ಸೆರೆ ಹಿಡಿದು ಕೊಟ್ಟರು, ಸುಮಾರು 600 ಮೀಟರ್ ದೂರದ ಹಕ್ಕಿಗಳನ್ನು ಹೆಕ್ಕಿ ಹಿಡಿದಿದ್ದು ಸೂಪರ್,
ಒಟ್ಟಾರೆ ಆ ಕ್ಷಣವೇ ಸೂಪರ್, ಚಿತ್ರವೂ ಸೂಪರ್, ಬರಹ ನಂದು ಹೇಗಿದೆ ಹೇಳಿ.
tungataranga.com
94482 56183
