ಹುಡುಕಾಟದ ವರದಿ- ಸ್ವಾಮಿ
ಶಿವಮೊಗ್ಗ, ಜೂ.19:
ಕಳೆದ ಎರಡು ವರುಷದ ಹಿಂದಷ್ಟೇ ಶಿವಮೊಗ್ಗ ಶರಾವತಿ ನಗರದ ಚಾನೆಲ್ ಪಕ್ಕದಲ್ಲಿ ಪಾಲಿಕೆಯ 15 ಹಣಕಾಸು ಆಯೋಗದ ಅಡಿ ನಡುವೆ ಸಿದ್ದವಾಗಿದ್ದ ಸುಂದರ ಉದ್ಯಾನವನ ಈಗ ಪ್ರಾಣಿ ಸಾಕೋದಕ್ಕೂ ಲಾಯಕ್ಕಿಲ್ಲ.


ಶಿವಮೊಗ್ಗದ ಬಹುತೇಕ ಹಾಳಾದ ಪಾರ್ಕ್ ನಂತೆ ಈ ಪಾರ್ಕ್ ಸಹ ಸಂಪೂರ್ಣ ಗಿಡಗಂಟೆಗಳ ಅವಾಸ ಸ್ಥಾನವಾಗಿದೆ. ಇಲ್ಲಿ ಎರಡು ಗೇಟುಗಳು ಮುರಿದಿದ್ದು ಒಂದನ್ನ ಕದ್ದಿದ್ದಾರೆ. ಮತ್ತೊಂದು ಅಲ್ಲೇ ಅನಾಥ ಶವದಂತೆ ಬಿದ್ದಿದೆ.

ಚಂದದ ಪಾರ್ಕ್ ನಲ್ಲಿ ಕಡಿಮೆ ಹಾಗದಲ್ಲಿಯೇ ವಾಕಿಂಗ್ ಯೋಗ್ಯ ರಸ್ತೆ, ಕುಳಿತುಕೊಳ್ಳಬಹುದಾದ ಆಸನಗಳು, ಜಿಮ್ ನ ಕೆಲ ಉಪಕರಣಗಳನ್ನು ಮತ್ತು ಮಕ್ಕಳ ಆಟಿಕೆಗಳನ್ನು ಹೊಂದಿತ್ತು, ಈಗ ಆ ವಸ್ತುಗಳೆಲ್ಲಾ ಗುಜರಿಗೂ ಯೋಗ್ಯವಲ್ಲದ ಐಟಂ ಆಗಿದೆ.

ದುರಂತವೆಂದರೆ ಕೆಲ ಕುಡುಕರಿಗಿದು ರಾತ್ರಿ ಅಡ್ಡೆಯಾಗಿದೆಯಂತೆ, ಕುಡಿದ ವಸ್ತುಗಳನ್ನ ಚರಂಡಿಗೆ ಬಿಸಾಕುತ್ತಾರಂತೆ…!

ಈ ಅವಘಡಕ್ಕೆ, ವಿನಾಶಕ್ಕೆ ಪಾಲಿಕೆ ಕಾರಣವೇ? ಅಥವಾ ಇಲ್ಲಿಗೆ ಬರುವ ಕೆಲವರ ಸೊಕ್ಕಿನ ದಿಮಾಕಿನ ವರ್ತನೆಯೇ ಎಂಬುದು ಪಬ್ಲಿಕ್ ಪ್ರಶ್ನೆ.